ಸೋನು ಗೌಡ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ?? ಬಿಗ್ ಬಾಸ್ ಪ್ರಿಯರಿಗೆ ಮತ್ತೊಂದು ಶಾಕ್?? ಸೋನು ಗೌಡ ವಿಚಾರದಲ್ಲಿ ಏನಾಗುತ್ತಿದೆ ಗೊತ್ತೇ??
ಬಿಗ್ ಬಾಸ್ ಕನ್ನಡ ಸೀಸನ್ 9 ಎರಡನೇ ವಾರ ನಡೆಯುತ್ತಿದೆ. ಇಂದು ಎರಡನೇ ಎಲಿಮಿನೇಷನ್ ಸಹ ನಡೆಯಲಿದೆ. ಆದರೆ ಬಿಗ್ ಬಾಸ್ ಬಗ್ಗೆ ಕೆಲವು ಸುದ್ದಿಗಳು ಕೇಳಿಬರುತ್ತಿದೆ, ಬಿಗ್ ಬಾಸ್ ಓಟಿಟಿ ಸೀಸನ್ ಶುರುವಾಗಿ ಹಿಟ್ ಆದ ಮಟ್ಟಗೆ ಬಿಗ್ ಬಾಸ್ ಟಿವಿ ಸೀಸನ್ ನಡೆಯುತ್ತಿಲ್ಲ. ಅಷ್ಟರ ಮಟ್ಟಿಗೆ ಸದ್ದು ಮಾಡುತ್ತಿಲ್ಲ, ಬಿಗ್ ಬಾಸ್ ಶೋ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ವೈರಲ್ ಆಗುತ್ತಿಲ್ಲ. ಬಿಗ್ ಬಾಸ್ ಕನ್ನಡ ಸೀಸನ್ 9 ಬೋರ್ ಹೊಡೆಯುತ್ತಿದೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ.
ಏಕೆಂದರೆ ಬಿಗ್ ಬಾಸ್ ಶೋನಲ್ಲಿ ಜನರಿಗೆ ಇಂಟರೆಸ್ಟಿಂಗ್ ಅನ್ನಿಸುವಂತಹ ಹಾಟ್ ಟಾಪಿಕ್ ಗಳು ಸಿಗುತ್ತಿಲ್ಲ. ವೈರಲ್ ಆಗುವಂತಹ ಕಂಟೆಂಟ್ ಗಳು ಸಿಗುತ್ತಿಲ್ಲ. ಓಟಿಟಿ ಸೀಸನ್ ಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 9 ಟಿವಿ ಶೋ ಯಾಕೆ ಸದ್ದು ಮಾಡುತ್ತಿಲ್ಲ ಎನ್ನುವ ಪ್ರಶ್ನೆಗೆ ಸಿಕ್ಕ ಉತ್ತರ ಕಂಟೆಂಟ್ ಕ್ವೀನ್ ಸೋಮು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಲಿಲ್ಲ ಎನ್ನುವ ಕಾರಣ ಸಿಕ್ಕಿದೆ. ಬಿಬಿಕೆ ಓಟಿಟಿ ಸೀಸನ್ ನಲ್ಲಿ ಸೋನು ಗೌಡ ಅವರು ಇದ್ದಾಗ ದಿನಕ್ಕೊಂದು ಹಾಟ್ ಕಂಟೆಂಟ್ ಸಿಗುತ್ತಿತ್ತು. ಸೋನು ಹೇಳುವ ಹಲವು ಮಾತುಗಳು, ಸೋನು ಕೊಡುವ ಸ್ಟೇಟ್ಮೆಂಟ್ ಗಳು ಭಾರಿ ವೈರಲ್ ಆಗುತ್ತಿದ್ದವು.
ರಾಕೇಶ್ ಜೊತೆ ಗುರುತಿಸಿಕೊಂಡಿದ್ದ ಸೋನು, ಮನೆಯಲ್ಲಿ ಸಣ್ಣ ಪುಟ್ಟ ಕಾರಣಗಳಿಗೆ ಎಲ್ಲರ ಜೊತೆಗು ಜಗಳ ಆಡುತ್ತಿದ್ದರು. ಆ ಜಗಳದ ಜೊತೆಗೆ ಒಳ್ಳೆಯ ಮನರಂಜನೆ ಸಹ ಕೊಡುತ್ತಿದ್ದರು, ಸೋನು ವಿಡಿಯೋ ಗಳು ಲಕ್ಷಗಟ್ಟಲೆ ವೀಕ್ಷಣೆ ಗಳಿಸುತ್ತಿದ್ದವು. ಹಾಗಾಗಿ ಕಂಟೆಂಟ್ ಕ್ವೀನ್ ಸೋನು ಇಲ್ಲದ ಬಿಗ್ ಬಾಸ್ ಡಲ್ ಹೊಡೆಯುತ್ತಿದೆ. ಇತ್ತ ಸೋನು ವಾಹಿನಿಗಳಲ್ಲಿ ಸಂದರ್ಶನಗಳನ್ನು ಕೊಡುತ್ತಾ ಇದ್ದಾರೆ. ಇದೀಗ ಕೇಳಿ ಬರುತ್ತಿರುವ ಹೊಸ ವಿಚಾರ ಏನೆಂದರೆ, ಸೋನು ಇಲ್ಲದೆ ಬಿಗ್ ಬಾಸ್ ಶೋ ಡಲ್ ಹೊಡೆಯುತ್ತಿರುವ ಕಾರಣದಿಂದ ಮತ್ತೊಮ್ಮೆ ಸೋನು ಅವರಿಗೆ ಬಾಗ್ ಬಾಸ್ ಕಡೆಯಿಂದ ಕರೆ ಹೋಗಿದ್ಯಾ ಎನ್ನುವ ಗುಸುಗುಸು ಶುರುವಾಗಿದೆ.