ಮೂವತ್ತು ವರ್ಷಕ್ಕೂ ಹೆಚ್ಚು ವಯಸ್ಸಾಗಿದ್ದರೂ ಕೂಡ ಇನ್ನು ಮದುವೆಯಾಗದೆ ಉಳಿದಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೆ??
ಭಾರತ ಚಿತ್ರರಂಗದಲ್ಲಿ ಬಾಲಿವುಡ್ ಗೆ ಹೆಚ್ಚಿನ ಬೇಡಿಕೆ ಇತ್ತು, ಆದರೆ ಈಗ ದಕ್ಷಿಣ ಭಾರತ ಚಿತ್ರರಂಗ ಅತ್ಯಂತ ಎತ್ತರಕ್ಕೆ ಬೆಳೆದು ನಿಂತಿದೆ. ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಿ ಸಿನಿಪ್ರಿಯರು ಬಹಳ ಇಷ್ಟಪಡುತ್ತಿದ್ದಾರೆ. ಈಗ ಬಾಲಿವುಡ್ ನಟಿಯರಿಗಿಂತ ಹೆಚ್ಚಾಗಿ, ನಮ್ಮ ದಕ್ಷಿಣ ಭಾರತದ ನಟಿಯರಿಗೆ ಡಿಮ್ಯಾಂಡ್ ಜಾಸ್ತಿ ಎಂದೇ ಹೇಳಬಹುದು. ರಶ್ಮಿಕಾ ಮಂದಣ್ಣ ಪೂಜಾ ಹೆಗ್ಡೆ ಇವರೆಲ್ಲರಿಗು ಸಹ ಬಾಲಿವುಡ್ ನಲ್ಲಿ ಭಾರಿ ಬೇಡಿಕೆ ಇದೆ. ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗ ವಯಸ್ಸು 30 ದಾಟಿದ್ದರು ಸಹ ಮದುವೆ ಆಗದೆ ಇರುವ ನಟಿಯರಿದ್ದಾರೆ. ಅವರ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಅನುಷ್ಕಾ ಶೆಟ್ಟಿ :- ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಅವರಿಗೆ ಬೇಡಿಕೆ ಹೆಚ್ಚಾಗಿದ್ದು ಅರುಂಧತಿ ಸಿನಿಮಾ ಮೂಲಕ. ಈ ಸಿನಿಮಾ ಇಂದ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ಬಹುಬೇಡಿಕೆ ಹೆಚ್ಚಾಗಿ, ಎರಡು ಚಿತ್ರರಂಗದ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಟಾಪ್ ನಟಿಯಾಗಿ ಬೆಳೆದರು ಅನುಷ್ಕಾ. ಬಾಹುಬಲಿ ಸಿನಿಮಾ ಇಂದ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡರು. ಅನುಷ್ಕಾ ಅವರು ಸಿನಿಮಾ ಮಾಡಿ ಬಹಳ ಸಮಯ ಆಗಿದ್ದರು ಸಹ, ಅನುಷ್ಕಾ ಅವರಿಗೆ ಇರುವ ಬೇಡಿಕೆ ಅಂತೂ ಕಡಿಮೆ ಆಗಿಲ್ಲ. ಪ್ರಸ್ತುತ ಅನುಷ್ಕಾ ಶೆಟ್ಟಿ ಅವರಿಗೆ 39 ವರ್ಷ ವಯಸ್ಸು, ಆದರೆ ಅನುಷ್ಕಾ ಅವರು ಇನ್ನು ಮದುವೆಯಾಗಿಲ್ಲ.
ತ್ರಿಷಾ ಕೃಷ್ಣನ್ :- ತಮಿಳು ಚಿತ್ರರಂಗದ ಖ್ಯಾತ ನಟಿ ತ್ರಿಷಾ ಅವರು ಇಂದು ಪೊನ್ನಿಯಿನ್ ಸೆಲ್ವನ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ತ್ರಿಷಾ ಅವರಿಗೆ ಈಗ 38 ವರ್ಷ ವಯಸ್ಸು, ಇವರ ಹೆಸರು ನಟ ರಾಣಾ ದಗ್ಗುಬಾಟಿ ಅವರ ಜೊತೆಗೆ ಕೇಳಿಬಂದಿತ್ತು, ಹಾಗೆಯೇ ಉದ್ಯಮಿ ವರುಣ್ ಮನಿಯನ್ ಅವರ ಜೊತೆಗೆ ಎಂಗೇಜ್ಮೆಂಟ್ ಸಹ ಮಾಡಿಕೊಂಡಿದ್ದರು, ಆದರೆ ಅದು ಮುರಿದು ಬಿತ್ತು. ಈಗ ತ್ರಿಷಾ ಅವರು ಒಂಟಿಯಾಗಿದ್ದಾರೆ..
ಪೂಜಾ ಹೆಗ್ಡೆ :- ಕರಾವಳಿ ಬೆಡಗಿ ಪೂಜಾ ಹೆಗ್ಡೆ ಅವರು ತುಳುನಾಡಿನ ಹುಡುಗಿ, ಇಂದು ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಕಡೆ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ರಾಧೆ ಶ್ಯಾಮ್ ಮತ್ತು ಬೀಸ್ಟ್ ಸಿನಿಮಾದಲ್ಲಿ ನಟಿಸಿದ್ದರು. ಪ್ರಸ್ತುತ ಸಲ್ಮಾನ್ ಖಾನ್ ಅವರೊಡನೆ ನಟಿಸುತ್ತಿದ್ದಾರೆ. ಇವರಿಗೆ ವಯಸ್ಸು 30 ಆಗಿದ್ದರು ಸಹ, ಇನ್ನು ಮದುವೆ ಆಗುವ ಮನಸ್ಸು ಮಾಡಿಲ್ಲ.
ಶ್ರುತಿ ಹಾಸನ್ :- ಇವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್, ನಟಿಯಾಗಿ ಮತ್ತು ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮಿಳು, ತೆಲುಗಿನಲ್ಲಿ ಫೇಮಸ್ ಆಗಿರುವ ಶ್ರುತಿ ಅವರು, ಬಾಲಿವುಡ್ ನಲ್ಲಿ ಸಹ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡುತ್ತಿರುವ ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ನಿತ್ಯಾ ಮೆನನ್ :- ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಕೇರಳ ಕುಟ್ಟಿ ನಿತ್ಯಾ ಮೆನನ್ ಅವರು ಕನ್ನಡದ ಹುಡುಗಿಯೇ ಎನ್ನಿಸುವಷ್ಟು ಸುಂದರವಾಗಿ ಕನ್ನಡ ಮಾತನಾಡುತ್ತಾರೆ ನಟಿ ನಿತ್ಯಾ ಮೆನನ್. ಇವರು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಎಲ್ಲಾ ಭಾಷೆಗಳಲ್ಲೂ ಬಹಳಷ್ಟು ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿ. ಇವರಿಗೆ ವಯಸ್ಸು 33 ಆಗಿದ್ದರು ಸಹ ಇನ್ನು ಮದುವೆಯಾಗಿಲ್ಲ.
ರಮ್ಯಾ :- ಚಂದನವನದ ಪದ್ಮಾವತಿ, ಸ್ಯಾಂಡಲ್ ವುಡ್ ಕ್ವೀನ್ ಎಂದು ಹೆಸರು ಮಾಡಿರುವ ರಮ್ಯಾ ಅವರು ಇದೀಗ ಸಿನಿಮಾರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ನಿರ್ಮಾಪಕಿಯಾಗಿ ಮತ್ತು ನಟಿಯಾಗಿ ಕಂಬ್ಯಾಕ್ ಮಾಡುತ್ತಿದ್ದು, ಇವರ ಸಿನಿಮಾಗೆ ಸ್ವಾತಿ ಮುತ್ತಿನ ಮಳೆಹನಿಯೇ ಎಂದು ಹೆಸರಿಡಲಾಗಿದೆ. ಸಿನಿಮಾ ಇಂದ ದೂರ ಉಳಿದಿದ್ದರು ಅದೇ ಕ್ರೇಜ್ ಉಳಿಸಿಕೊಂಡಿರುವ ರಮ್ಯಾ ಅವರಿಗೆ 39 ವರ್ಷವಾಗಿದ್ದರು ಸಹ ಇನ್ನು ಅವರು ಮದುವೆ ಆಗುವ ಮನಸ್ಸು ಮಾಡಿಲ್ಲ.