ಡೂಪ್ಲಿಕೇಟ್ ಸಿಮ್ ಕೊಳ್ಳಲು ಶಾಪ್ ಗೆ ತೆರಳಿದ ನಟಿಯನ್ನೇ ಕೂಡಿ ಹಾಕಿದ ಸಿಬ್ಬಂದಿ: ಯಾಕೆ ಗೊತ್ತೇ?? ಕೊನೆಗೆ ಏನಾಗಿದೆ ಗೊತ್ತೇ??

34

Get real time updates directly on you device, subscribe now.

ಮಲಯಾಳಂ ಚಿತ್ರರಂಗ ಒಳ್ಳೆಯ ಕಂಟೆಂಟ್ ಇರುವ ಕಥೆಗಳ ಮೂಲಕ ಒಳ್ಳೆಯ ಹೆಸರು ಪಡೆದಿದೆ ಆದರು ನಾಯಕಿಯರ ಮೇಲೆ ನಡೆಯುವ ದೌರ್ಜನ್ಯದ ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತದೆ. ಇದರಿಂದ ಮಲಯಾಳಂ ಸಿನಿಪ್ರಿಯರಿಗೂ ಬಹಳ ಬೇಸರ ಆಗಿರುವುದಂತು ಖಂಡಿತ. ಮಲಯಾಳಂ ಚಿತ್ರರಂಗದಲ್ಲಿ ಈ ಹಿಂದೆ ನಟಿಯ ಮೇಲೆ ನಡೆದಿರುವ ದೌರ್ಜನ್ಯದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು, ಇತ್ತೀಚೆಗೆ ನಟಿಯೊಬ್ಬರು ಸಿನಿಮಾ ಪ್ರೊಮೋಷನ್ ಗೆ ಹೋಗಿದ್ದಾಗ, ಅಭಿಮಾನಿಯೊಬ್ಬ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದ ವಿಡಿಯೋ ಸಹ ವೈರಲ್ ಆಗಿತ್ತು, ಇದೀಗ ಮತ್ತೊಬ್ಬ ನಟಿಯ ಮೇಲೆ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಅಂಗಮಲೈ ಡೈರೀಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅನ್ನಾ ರಾಜನ್ ಅವರ ಮೇಲೆ ದೌರ್ಜನ್ಯ ನಡೆದಿದೆ ಎಂದು ಮಾಹಿತಿ ಸಿಕ್ಕಿದೆ. ಟೆಲಿಕಾಂ ಸಂಸ್ಥೆಯಲ್ಲಿ ನಟಿಯನ್ನು ಕೂಡಿ ಹಾಕಲಾಗಿತ್ತು. ಕೇರಳದ ಆಳುವದ ಮುನ್ಸಿಪಾಲಿಟಿ ಕಚೇರಿ ಹತ್ತಿರ ಇರುವ ಟೆಲಿಕಾಂ ಕಂಪನಿ ಕಚೇರಿಗೆ ನಟಿ ಅನ್ನಾ ರಾಜನ್ ಸಿಮ್ ಖರೀದಿ ಮಾಡುವ ಸಲುವಾಗಿ ಹೋಗಿದ್ದರು, ಅದ ಕಚೇರಿಯ ಸಿಬ್ಬಂದಿ ಮತ್ತು ಅನ್ನಾ ರಾಜನ್ ನಡುವೆ ಜಗಳ ನಡೆದಿದ್ದು, ಇದರಿಂದಾಗಿ ಕಚೇರಿ ಸಿಬ್ಬಂದಿಗಳಲ್ಲಿ ಒಬ್ಬ ಅನ್ನಾ ರಾಜನ್ ಅವರನ್ನು ಎಳೆದುಕೊಂಡು ಹೋಗಿ ಕಚೇರಿಯಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಅನ್ನಾ ರಾಜನ್ ಅವರು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಕೂಡಲೇ ಬಂದ ಪೊಲೀಸರು ನಟಿಯನ್ನು ರಕ್ಷಣೆ ಮಾಡಿದ್ದಾರೆ.

ಟೆಲಿಕಾಂ ಕಂಪನಿ ಕಚೇರಿಯ ಸಿಬ್ಬಂದಿಗಳ ಮೇಲೆ ಅನ್ನಾ ರಾಜನ್ ಅವರು ದೂರು ನೀಡುತ್ತೇನೆ ಎಂದಿದ್ದು, ಮಧ್ಯ ಪ್ರವೇಶಿಸಿದ ಪೊಲೀಸರು, ದೂರು ತೆಗೆದುಕೊಳ್ಳದೆ, ಇಬ್ಬರಿಗೂ ಕಾಂಪ್ರೋಮೈಸ್ ಮಾಡಿಸಿ ಕಳಿಸಿದ್ದಾರೆ. ಈ ಘಟನೆ ಹೊರಬಂದ ಸಿನಿಪ್ರಿಯರಿಗೆ ನಿಜಕ್ಕೂ ಶಾಕ್ ಆಗಿದೆ. ಅನ್ನಾ ರಾಜನ್ ಅವರು ಸಹ ಇದರಿಂದಾಗಿ ಕೋಪಗೊಂಡಿದ್ದಾರೆ. ಇವರು ನಟಿಸಿದ ಮೊದಲ ಸಿನಿಮಾ ಅಂಗಮಲೈ ಡೈರೀಸ್ ಸಿನಿಮಾ ಸೂಪರ್ ಹಿಟ್ ಆಗಿತ್ತು, ಬಳಿಕ ಇವರು ವೆಳೀಪಡಿಂಡೆ ಪುಸ್ತಕಮ್ ಸಿನಿಮಾದಲ್ಲಿ ನಟಿಸಿದ್ದರು, ಅಯ್ಯಪ್ಪನಂ ಕೊಶಿಯುಮ್ ಸಿನಿಮಾದಲ್ಲಿ ನಟ ಪೃಥ್ವಿ ರಾಜ್ ಅವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದರು ಅನ್ನಾ ರಾಜನ್.

Get real time updates directly on you device, subscribe now.