ಇಷ್ಟು ದಿವಸ ದುಬೈ ನಲ್ಲಿ ಇದ್ದು, ವಾಪಸ್ಸು ಬಂದು ಕಾಂತಾರ ಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ, ಡಾಲಿ ಧನಂಜಯ್ ಹೇಳಿದ್ದೆ ಬೇರೆ.
ಪ್ರಸ್ತುತ ಇರುವ ಕನ್ನಡದ ಮೋಸ್ಟ್ ಬ್ಯುಸಿಯೆಸ್ಟ್ ನಟರಲ್ಲಿ ಡಾಲಿ ಧನಂಜಯ್ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ನಟ ರಾಕ್ಷಸ ಎಂದೇ ಹೆಸರು ಮಾಡಿರುವ ಧನಂಜಯ್ ಅವರು ಎಂಥದ್ದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ಅಭಿನಯಿಸುತ್ತಾರೆ. ನಾಯಕ ಮತ್ತು ಖಳ ನಟನಾಗಿ ಎರಡು ರೀತಿಯ ಪಾತ್ರಗಳಲ್ಲೂ ಈಗಾಗಲೇ ಮಿಂಚಿರುವ ಧನಂಜಯ್ ಅವರು ಇತ್ತೀಚೆಗೆ ರಾಜ್ ಕಪ್ ಟೂರ್ನಿಗಾಗಿ ದುಬೈ ಗೆ ಹೋಗಿದ್ದರು. ದುಬೈ ಇಂದ ಬರುತ್ತಿದ್ದ ಹಾಗೆಯೇ ಧನಂಜಯ್ ಅವರು ಕಾಂತಾ ಸಿನಿಮಾ ಬಗ್ಗೆ ಮಾತನಾಡಿದ್ದಾರೆ..
ಈ ವರ್ಷ ಕನ್ನಡದಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿ ಯಶಸ್ಸು ಪಡೆದಿರುವ ನಟ ಎಂದರೆ ಡಾಲಿ ಧನಂಜಯ್ ಎಂದೇ ಹೇಳಬೇಕು, ಧನಂಜಯ್ ಅವರು ಅಭಿನಯದ 21 ಅವರ್ಸ್, ಭೈರಾಗಿ, ಮಾನ್ಸೂನ್ ರಾಗ ಮತ್ತು ತೋತಾಪುರಿ ಸಿನಿಮಾ ಬಿಡುಗಡೆ ಆಗಿದ್ದು, ಹೆಡ್ ಬುಶ್, ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ ಹಾಗು ಇನ್ನೊಂದು ತಮಿಳು ಸಿನಿಮಾ ಬಿಡುಗಡೆ ಆಗಲು ಸಿದ್ಧವಾಗಿದೆ. ಹೆಡ್ ಬುಶ್ ಸಿನಿಮಾಗಾಗಿ ವಿಭಿನ್ನವಾದ ರೀತಿಯಲ್ಲಿ ಪ್ರಚಾರಗಳನ್ನು ಮಾಡುತ್ತಿದ್ದಾರೆ ಡಾಲಿ. ಇನ್ನು ದುಬೈ ಇಂದ ಧನಂಜಯ್ ಅವರು ಬೆಂಗಳೂರಿಗೆ ವಾಪಸ್ ಬಂದ ಬಳಿಕ ವಿಮಾನ ನಿಲ್ದಾಣದಲ್ಲೇ ಅವರನ್ನು ಕೆಲವು ಯೂಟ್ಯೂಬ್ ಚಾನೆಲ್ ಗಳು ಸಂದರ್ಶನ ಮಾಡಿದ್ದು, ಧನಂಜಯ್ ಅವರು ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಧನಂಜಹ್ ಅವರು ದುಬೈಗೆ ಹೋದ ಬಳಿಕ ಕಾಂತಾರ ಸಿನಿಮಾ ಬಿಡುಗಡೆ ಆಯಿತು, ಈ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಉತ್ತರ ಕೊಟ್ಟಿರುವ ಧನಂಜಯ್ ಅವರು, “ಸಿನಿಮಾದ ಸಾಮರ್ಥ್ಯ ಅಂಥದ್ದು, ಆ ಸಾಮರ್ಥ್ಯದಿಂದಲೇ ಸಿನಿಮಾ ಗೆದ್ದಿದೆ, ಕಾಂತಾರ ಸಿನಿಮಾ ನೋಡಲು ಜನರು ನುಗ್ಗಿ ಥಿಯೇಟರ್ ಗೆ ಬರುತ್ತಿರುವುದನ್ನು ನೋಡಲು ಸಂತೋಷ ಆಗುತ್ತದೆ. ಕಾಂತಾರ ಸಿನಿಮಾಗೆ ಸಪೋರ್ಟ್ ಮಾಡಿದ ರೀತಿಯಲ್ಲೇ ಜನರು ನಮ್ಮ ಹೆಡ್ ಬುಶ್ ಸಿನಿಮಾಗು ಸಪೋರ್ಟ್ ಮಾಡಬೇಕು. ದುಬೈ ನಲ್ಲಿ ಇದ್ದಿದ್ರಿಂದ ಸಿನಿಮಾ ನೋಡಲು ಆಗಿಲ್ಲ. ಈಗ ಮೊದಲು, ಕಾಂತಾರ, ಗುರು ಶಿಷ್ಯರು ಮತ್ತು ತೋತಾಪುರಿ ಸಿನಿಮಾ ನೋಡಬೇಕು..” ಎಂದು ಹೇಳಿದ್ದಾರೆ ಧನಂಜಯ್.