ಕಾಂತಾರ ಸಿನೆಮಾ ಬಾರಿ ಸದ್ದು ಮಾಡುತ್ತಿರುವಾಗ ಖ್ಯಾತ ನಟ ಕಿಶೋರ್ ಸಿನಿಮಾ ಬಗ್ಗೆ ಹೇಳಿದ್ದೆ ಬೇರೆ. ತಮಿಳು ನಟರು..

136

Get real time updates directly on you device, subscribe now.

ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು ಕಿಶೋರ್ ಅವರು ಎಂದು ಹೇಳಬಹುದು. ನಾಯಕನಾಗಿ, ಪೋಷಕ ಪಾತ್ರಗಳಲ್ಲಿ, ಖಳ ನಾಯಕನ ಪಾತ್ರಗಳಲ್ಲಿ, ಹಾಸ್ಯ ಪಾತ್ರಗಳಲ್ಲಿ ಹೀಗೆ ಎಂಥದ್ದೇ ಪಾತ್ರ ಕೊಟ್ಟರು ಅಚ್ಚುಕಟ್ಟಾಗಿ ಅಭಿನಯಿಸುತ್ತಾರೆ. ಕನ್ನಡದಲ್ಲಿ ಮಾತ್ರವಲ್ಲದೆ, ತಮಿಳಿನಲ್ಲಿ ಕಿಶೋರ್ ಅವರಿಗೆ ಭಾರಿ ಡಿಮ್ಯಾಂಡ್ ಇದೆ ಅವರನ್ನು ಹುಡುಕಿಕೊಂಡು ಅತ್ಯುತ್ತಮವಾದ ಪಾತ್ರಗಳೇ ಬರುತ್ತದೆ. ಇದೀಗ ಕಿಶೋರ್ ಅವರು ಕನ್ನಡದ ಕಾಂತಾರ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 30ರಂದು ಕಾಂತಾರ ಸಿನಿಮಾ ಬಿಡುಗಡೆ ಆಗಿದೆ.

ಕಾಂತಾರ ಸಿನಿಮಾಗೆ ಎಲ್ಲಾ ಕಡೆ ಎಂತಹ ಪ್ರತಿಕ್ರಿಯೆ ಸಿಗುತ್ತಿದೆ ಎನ್ನುವ ವಿಚಾರ ನಮಗೆಲ್ಲ ಗೊತ್ತೇ ಇದೆ, ಅದೇ ದಿನ ತಮಿಳಿನ ಮತ್ತೊಂದು ದೊಡ್ಡ ಸಿನಿಮಾ ಬಿಡುಗಡೆ ಆಯಿತು, ಅದು ಪೊನ್ನಿಯಿನ್ ಸೆಲ್ವನ್, ಈ ಸಿನಿಮಾ ತಮಿಳು ಚಿತ್ರರಂಗದ 70 ವರ್ಷಗಳ ಕನಸು ಎಂದೇ ಹೇಳಬಹುದು. ಈ ಸಿನಿಮಾದಲ್ಲಿ ಕೂಡ ಕಿಶೋರ್ ಅವರು ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಯಿತು ಎನ್ನುವ ಬಗ್ಗೆ ಕಿಶೋರ್ ಅವರನ್ನು ಪ್ರಶ್ನೆ ಕೇಳಿದಾಗ ಅವರು ಹೇಳಿದ್ದು ಹೀಗೆ..

“ಎರಡು ಸಿನಿಮಾಗಳಲ್ಲಿ ಕತೆಗೆ ಪೂರಕವಾದ ಒಂದು ಪುಟ್ಟ ಪಾತ್ರ ನನ್ನದು. ತಮಿಳಿನಲ್ಲಿ ಅದು ತುಂಬಾ ದೊಡ್ಡ ಸಿನಿಮಾ, 70 ವರ್ಷಗಳ ಕನಸು, ಮೊದಲು ಎಂಜಿಆರ್ ಸರ್ ಆ ಸಿನಿಮಾ ಮಾಡಬೇಕು ಅಂದುಕೊಂಡಿದ್ರು, ನಂತರ ಕಮಲ್ ಸರ್ ಅಂದುಕೊಂಡಿದ್ರು ಆಗಲು ಆಗ್ಲಿಲ್ಲ ಈಗಲೂ ಈ ಸಿನಿಮಾ ಆಗುತ್ತಾ ಇಲ್ಲವಾ ಅಂತಾನೆ ಎಲ್ಲರ್ಚ್ ಅಂದುಕೊಂಡಿದ್ರು, ಕೊನೆಗೆ ಮಣಿರತ್ನಂ ಅವರಿಂದ ಈ ಸಿನಿಮಾ ಆಗಿದೆ. ಅಂತಹ ಒಬ್ಬ ನಿರ್ದೇಶಕನಿಂದ ಮಾತ್ರ ಎಲ್ಲಾ ನಟರನ್ನು ಹೀಗೆ ಒಂದೇ ಕಡೆ ಸೇರಿಸೋದಕ್ಕೆ ಸಾಧ್ಯ. ನಾವೆಲ್ಲರೂ ಮಣಿರತ್ನಂ ಅನ್ನುವ ಆ ಒಂದು ಹೆಸರಿನಿಂದಲೇ ಹೋಗಿ ಸಿನಿಮಾದಲ್ಲಿ ನಟಿಸಿದ್ದು, ತಮಿಳುನಾಡಿನ ಅಂತಹ ಒಂದು ದೊಡ್ಡ ಸಿನಿಮಾದಲ್ಲಿ ನಾನು ಒಂದು ಭಾಗವಾಗಿ ನಟಿಸಿದ್ದೀನಿ ಅಂತ ಸಂತೋಷ ಇದೆ. ಕಾಂತಾರ ಸಿನಿಮಾ ಕೂಡ ಅದೇ ರೀತಿ..” ಎಂದು ಹೇಳಿದ್ದಾರೆ ಕಿಶೋರ್ ಅವರು.

Get real time updates directly on you device, subscribe now.