ಭಾರತವೇ ಹೆಮ್ಮೆ ಪಡುವಂತಹ ಸಿನಿಮಾಗಳನ್ನು ಮಾಡಿರುವ ಪ್ರಭಾಸ್ ರವರ ಒಟ್ಟು ಆಸ್ತಿಯ ಮೂಲ್ಯ ಎಷ್ಟು ಗೊತ್ತೇ?? ನಿಜವಾಗಲೂ ರಾಜನೇ .
ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಇರುವಂಥ ಕ್ರೇಜ್ ಸಾಮಾನ್ಯವಾದದ್ದಲ್ಲ, ತೆಲುಗಿನ ಯಾವುದೇ ಹೀರೋಗಳಿಗೂ ಇರದಷ್ಟು ಕ್ರೇಜ್ ಪ್ರಭಾಸ್ ಅವರ ಅಭಿಮಾನಿಗಳು ಮೇಲಿದೆ. ಕೃಷ್ಣಮ್ ರಾಜು ಅವರ ವಾರಸುದಾರನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಭಾಸ್ ಅವರು ತಮ್ಮ ಸ್ವಂತ ಪರಿಶ್ರಮದಿಂದ ಇಷ್ಟು ಎತ್ತರಕ್ಕೆ ಬೆಳೆದರು. ತಮ್ಮ ದೊಡ್ಡಪ್ಪನಿಗಿಂತ ದೊಡ್ಡ ಸ್ಟಾರ್ ನಟನಾಗಿ ಹೆಸರು ಪಡೆದರು, ನಿಜ ಹೇಳಬೇಕು ಎಂದರೆ, ತಮ್ಮ ಸ್ವಂತ ಪರಿಶ್ರಮದಿಂದಲೇ ಪ್ರಭಾಸ್ ಅವರು ಇಷ್ಟು ಎತ್ತರಕ್ಕೆ ಏರಿದರು. ಪ್ರಭಾಸ್ ಅಂದ್ರೆ ಹುಡುಗಿಯರ ಕನಸಿನ ರಾಜಕುಮಾರ, ಆರಡಿ ಎತ್ತರದ ಅಂದವಾದ ನಟ ಎಂದು ಕರೆಯುತ್ತಾರೆ.
ಇಂತಹ ರೇಂಜ್ ನಲ್ಲಿರುವ ಪ್ರಭಾಸ್ ಅವರ ಸಿನಿಮಾಗಳು ಸೂಪರ್ ಹಿಟ್ ಎನ್ನಿಸಿಕೊಳ್ಳುತ್ತಿದ್ದವು. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಎನ್ನಿಸಿಕೊಂಡಿದ್ದು, ಈಗ ಅವರ ಲೈನಪ್ ನಲ್ಲಿ ಇರುವವರೆಲ್ಲಾ ದೊಡ್ಡ ದೊಡ್ಡ ಡೈರೆಕ್ಟರ್ ಗಳೇ ಆಗಿದ್ದಾರೆ. ಹೀಗೆ ಪ್ರಭಾಸ್ ಅವರ ಸಿನಿಮಾ ಕೆರಿಯರ್ ಸಾಗುತ್ತಿರುವಾಗ, ಅವರ ಆಸ್ತಿ ವಿವರಗಳ ಬಗ್ಗೆ ಈಗ ಸುದ್ದಿಗಳು ವೈರಲ್ ಆಗುತ್ತಿದೆ. ಇವರ ಒಟ್ಟು ಆಸ್ತಿ ನೂರಾರು ಕೋಟಿಗಳು ಎಂದು ಹೇಳಲಾಗುತ್ತಿದೆ. ಪ್ರಸ್ತುತ ಪ್ರಭಾಸ್ ಅವರು ಒಂದು ಸಿನಿಮಾಗೆ ನೂರು ಕೋಟಿ ವರೆಗು ಸಂಭಾವನೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಪ್ರಭಾಸ್ ಅವರು ಕೆಲವು ಬ್ರಾಂಡೆಡ್ ಆಡ್ಸ್ ಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.
ಇಷ್ಟೇ ಅಲ್ಲದೆ, ತಂದೆ ಮತ್ತು ತಾತನ ಕಡೆಯಿಂದ ಸಹ ಒಂದಷ್ಟು ಕೋಟಿ ಆಸ್ತಿ ಬಂದಿದೆ. ಇಷ್ಟೇ ಅಲ್ಲದೆ, ಪ್ರಭಾಸ್ ಅವರ ಬಳಿ ಒಂದು ಗ್ರಾನೈಟ್ ಫ್ಯಾಕ್ಟರಿ ಇದೆ, ಅಷ್ಟೇ ಅಲ್ಲದೆ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಕೆಲವು ಕಂಪನಿಗಳು ಸಹ ಪ್ರಭಾಸ್ ಅವರ ಹೆಸರಿನಲ್ಲಿದೆ. ಅಷ್ಟೇ ಅಲ್ಲದೆ, ನೂರು ಎಕರೆ ತೆಂಗಿನ ತೋಟ, ಫಾರ್ಮ್ ಹೌಸ್ ಗಳು ಮತ್ತು ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ಪ್ರಭಾಸ್ ಅವರ ಬಳಿ ಇದೆ, ಇವುಗಳ ಒಟ್ಟು ಮೊತ್ತ ಸುಮಾರು 700 ಕೋಟಿ ರೂಪಾಯಿಗಳ ವರಗು ಇರಬಹುದು ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.