ಇದ್ದಕ್ಕಿದ್ದ ಹಾಗೆ ಕಲರ್ಸ್ ಕನ್ನಡ ವಾಹಿನಿಗೆ ಬಂದ ಪುಟ್ಟಕ್ಕನ್ನ ಮಕ್ಕಳು ನಟಿ: ಯಾಕೆ ಗೊತ್ತೇ?? ಕಾರಣ ತಿಳಿದರೆ ಖುಷಿ ಪಡ್ತಿರಾ.
ಪುಟ್ಟಕ್ಕನ ಮಕ್ಕಳು ಧಾರವಾಹಿ ಪ್ರಸ್ತುತ ಕನ್ನಡ ಕಿರುತೆರೆ ಲೋಕದ ನಂಬರ್1 ಧಾರವಾಹಿ ಆಗಿದೆ, ಪ್ರತಿವಾರ ಟಿ.ಆರ್.ಪಿ ಲಿಸ್ಟ್ ನಲ್ಲಿ ಟಾಪ್ ಸ್ಥಾನದಲ್ಲಿರುತ್ತದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಈ ಧಾರವಾಹಿಯ ಎಲ್ಲಾ ಪಾತ್ರಗಳು ಜನರಿಗೆ ಬಹಳ ಇಷ್ಟವಾಗಿದೆ ಪುಟ್ಟಕ್ಕನ ಮಕ್ಕಳು ಧಾರವಾಹಿ ಸಾಗುತ್ತಿರುವ ಕಥೆಯ ಶೈಲಿಯನ್ನು ಜನರು ಇಷ್ಟಪಡುತ್ತಿದ್ದಾರೆ. ಒಂದು ಕಡೆ ಪುಟ್ಟಕ್ಕನ ಮಕ್ಕಳು ಧಾರವಾಹಿ ಒಳ್ಳೆಯ ಹಂತದಲ್ಲಿ ಸಾಗುತ್ತಿರುವಾಗ ಈ ಧಾರವಾಹಿಯ ಪ್ರಮುಖ ನಟಿ ಕಲರ್ಸ್ ಕನ್ನಡ ವಾಹಿನಿಗೆ ಎಂಟ್ರಿ ಕೊಡುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಸಹ ಒಳ್ಳೆಯ ಸದಭಿರುಚಿ ಧಾರವಾಹಿಗಳನ್ನು ಕಾರ್ಯಕ್ರಮಗಳನ್ನು ಕಿರುತೆರೆ ವೀಕ್ಷಕರಿಗೆ ನೀಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಟಿ.ಎನ್.ಸೀತಾರಾಮ್ ಅವರು ನಿರ್ದೇಶನ ಮಾಡಲಿರುವ ಹೊಸ ಧಾರವಾಹಿ ಮತ್ತೆ ಮಾಯಾಮೃಗ ಶುರುವಾಗಲಿದೆ. ಸೀತಾರಾಮ್ ಅವರ ಧಾರಾವಾಹಿಗಳು ಎಂದರೆ ಕಿರುತೆರೆ ವೀಕ್ಷಕರು ರು ಬಹಳ ಇಷ್ಟಪಟ್ಟು ನೋಡುತ್ತಾರೆ, ಅವರು ವೀಕ್ಷಕರಿಗೆ ನೀಡುವ ಕಥೆ ಹಾಗಿರುತ್ತದೆ. ಇದೀಗ ಮತ್ತೆ ಮಾಯಾಮೃಗ ಧಾರಾವಾಹಿಗೆ ಪುಟ್ಟಕ್ಕನ ಮಕ್ಕಳು ತಂಡದ ಮುಖ್ಯ ಪಾತ್ರಧಾರಿ ಬಂಗಾರಮ್ಮ ಸೇರ್ಪಡೆಯಾಗುತ್ತಿದ್ದಾರೆ..

ಕಂಠಿ ತಾಯಿ, ಗಟ್ಟಿಗಿತ್ತಿ ಬಂಗಾರಮ್ಮನ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮಂಜು ಭಾಷಿಣಿ ಅವರು ಇನ್ನುಮುಂದೆ ಮತ್ತೆ ಮಾಯಾಮೃಗ ಧಾರವಾಹಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಹಿಂದೆ ಮಂಜು ಅವರು ಮಾಯಾಮೃಗ ಧಾರವಾಹಿಯಲ್ಲಿ ಸಹ ನಟಿಸಿದ್ದರು. ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಸಿಲ್ಲಿ ಲಲ್ಲಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಜೀಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ನಟಿಸುತ್ತಿದ್ದರು ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.