ಎಲ್ಲಾ ಓಕೆ, ಆದರೆ ದಿವ್ಯ ಉರುಡುಗ ರವರ ಸಿನೆಮಾಗೆ ಅರವಿಂದ್ ನಾಯಕನಾಗಿದ್ದು ಯಾಕೆ ಗೊತ್ತೇ?? ಕಾರಣ ಏನು ಅಂತೇ ಗೊತ್ತೇ??

20

Get real time updates directly on you device, subscribe now.

ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೂಲಕ ಸದ್ದು ಮಾಡಿದ ಸ್ಪರ್ಧಿ ಅಂತಾರಾಷ್ಟ್ರೀಯ ಬೈಕ್ ರೇಸರ್ ಅರವಿಂದ್ ಕೆಪಿ ಅವರು. ಬಿಗ್ ಮನೆಯೊಳಗೆ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಅರವಿಂದ್ ಅವರು, ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದರು. ಬಿಗ್ ಮನೆಯಲ್ಲಿ ಇವರ ಸರಳತೆ ಜನರಿಗೆ ಬಹಳ ಇಷ್ಟವಾಗಿತ್ತು. ಬಿಬಿಕೆ8 ರ ಫೇವರೆಟ್ ಸ್ಪರ್ಧಿಯಾಗಿದ್ದರು ಅರವಿಂದ್. ಇದೀಗ ಅರವಿಂದ್ ಅವರು ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ, ಅದು ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ಮೂಲಕ.

ಬಿಗ್ ಬಾಸ್ ಮನೆಯಲ್ಲಿದ್ದಾಗ ದಿವ್ಯ ಉರುಡುಗ ಅವರ ಜೊತೆಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದರು ಅರವಿಂದ್. ದಿವ್ಯ ಅರವಿಂದ್ ಪ್ರೀತಿ ಮಾಡುತ್ತಿದ್ದಾರೆ ಮದುವೆ ಆಗುತ್ತಾರೆ ಎನ್ನುವ ಸುದ್ದಿಗಳು ಸಹ ಕೇಳಿಬಂದಿದ್ದವು. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಅರ್ಧಂಬರ್ಧ ಪ್ರೇಮಕಥೆ ಸಿನಿಮಾದಲ್ಲಿ ದಿವ್ಯ ಮತ್ತು ಅರವಿಂದ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯನ್ನು ತೆರೆಮೇಲೆ ತರುತ್ತಿರುವ ನಿರ್ದೇಶಕರು ಅರವಿಂದ್ ಕೌಶಿಕ್. ದಿವ್ಯ ಉರುಡುಗ ಅವರ ಸಿನಿಮಾಗೆ ಅರವಿಂದ್ ಅವರನ್ನೇ ನಾಯಕನಾಗಿ ಹಾಕಿಕೊಳ್ಳಲು ಕಾರಣ ಏನು ಎಂದು ಅರವಿಂದ್ ಕೌಶಿಕ್ ಅವರನ್ನು ಪ್ರಶ್ನೆ ಕೇಳಲಾಗಿದ್ದು, ಅದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ. “ನನ್ನ ಸಿನಿಮಾಗೆ ಎಂಥಹ ನಾಯಕ ಬೇಕು ಎಂದು ನಾನು ಒಂದು ಐಡಿಯಾ ಇಟ್ಟುಕೊಂಡಿದ್ದೆ, ಈಗಾಗಲೇ ಹೀರೋ ಆಗಿರುವ ನಾಯಕ ನನ್ನ ಸಿನಿಮಾ ಮೂಲಕ ಮತ್ತೊಂದು ಸಾರಿ ನಿಜವಾದ ಹೀರೋ ಆಗಬೇಕು, ಅಂತಹ ನಾಯಕನನ್ನು ಹುಡುಕುತ್ತಿದ್ದೆ.

ನಾಯಕಿಯಾಗಿ ದಿವ್ಯ ಉರುಡುಗ ಆಯ್ಕೆಯಾಗಿದ್ದರು, ಹೀರೋ ಆಗಿ ಯಾರನ್ನು ಹಾಕಿಕೊಳ್ಳುವುದು ಎಂದು ಚರ್ಚೆ ಮಾಡುವಾಗ ನನ್ನ ಪತ್ನಿ, ಅರವಿಂದ್ ಕೆಪಿ ಅವರನ್ನು ಹಾಕಿಕೊಂಡರೆ ಚೆನ್ನಾಗಿರುತ್ತದೆ ಎಂದು ಸಲಹೆ ನೀಡಿದರು. ಬಿಗ್ ಬಾಸ್ ನಲ್ಲಿ ಆರಾವಿಂದ್ ನನ್ನ ಮೆಚ್ಚಿನ ಮೆಚ್ಚಿನ ಸ್ಪರ್ಧಿ ಆಗಿದ್ದರು. ಈ ಸಿನಿಮಾದಲ್ಲಿ ಅರವಿಂದ್ ಅವರ ನಟನೆ ನೋಡಿದರೆ ಮೊದಲ ಸಾರಿ ನಟಿಸುತ್ತಿದ್ದಾರೆ ಎಂದು ಅನ್ನಿಸುವುದಿಲ್ಲ. ಅಷ್ಟು ಚೆನ್ನಾಗಿ ಅಭಿನಯಿಸಿದ್ದಾರೆ, ಡ್ಯಾಶಿಂಗ್, ಡೈನಾಮಿಕ್ ಆಗಿ ಆಕ್ಟ್ ಮಾಡಿದ್ದಾರೆ..” ಎಂದು ನಾಯಕ ಅರವಿಂದ್ ಕೆಪಿ ಅವರ ಆಯ್ಕೆ ಹೇಗೆ ಆಯಿತು ಎಂದು ನಿರ್ದೇಶಕರು ತಿಳಿಸಿದ್ದಾರೆ. ಅರವಿಂದ್ ಕೆಪಿ ಅವರು ಸಹ ಸಿನಿಮಾ ಬಗ್ಗೆ ಮಾತನಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ. ದಿವ್ಯ ಅರವಿಂದ್ ಜೋಡಿಯನ್ನು ಜೊತೆಯಾಗಿ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾಯುತ್ತಿದ್ದಾರೆ.

Get real time updates directly on you device, subscribe now.