ಕ್ಯಾಮೆರಾ ಮುಂದೆ ಬಂದು ನಡೆದ ಎಲ್ಲಾ ಸತ್ಯವನ್ನು ಬಿಚ್ಚಿಟ್ಟ ಖ್ಯಾತ ನಟಿ ದಿವ್ಯ: ಮತ್ತಷ್ಟು ಷಾಕಿಂಗ್ ಸತ್ಯ ಹೊರಗೆ. ಲವ್
ಕನ್ನಡದಲ್ಲಿ ಆಕಾಶದೀಪ ಧಾರವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯ ಆಗಿದ್ದ ನಟಿ ದಿವ್ಯ ಶ್ರೀಧರ್ ನಿಮಗೆಲ್ಲರಿಗೂ ನೆನಪಲ್ಲಿ ಇರುತ್ತಾರೆ, ಆ ಧಾರವಾಹಿ ನಂತರ ದಿವ್ಯ ಅವರು ಕನ್ನಡದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಅವಕಾಶಕ್ಕಾಗಿ ತಮಿಳಿಗೆ ಹೋದ ನಟಿಯ ಪರಿಸ್ಥಿತಿ ಈಗ ಯಾರಿಗೂ ಬೇಡ ಎನ್ನುವ ಹಾಗೆ ಆಗಿದೆ. ಅರ್ನವ್ ಎನ್ನುವ ನಟನ ಜೊತೆಗೆ ಮದುವೆಯಾಗಿದ್ದು, ಇವರಿಗೆ ಮಗು ಸಹ ಇದೆ, ಆದರೆ ಈಗ ಪತಿ ಅರ್ನವ್ ತಮ್ಮನ್ನು ದೂರ ಇಟ್ಟಿರುವುದಾಗಿ ಹೇಳಿಕೊಂಡ ದಿವ್ಯ ಶ್ರೀಧರ್ ಕಣ್ಣೀರು ಹಾಕಿದ್ದಾರೆ, ದಿವ್ಯ ಅವರು ಪ್ರಸ್ತುತ ಚೆನ್ನೈನ ಆಸ್ಪತ್ರೆಯಲ್ಲಿದ್ದು, ನಡೆದ ಎಲ್ಲಾ ಘಟನೆಯನ್ನು ತಿಳಿಸಿ ಕಣ್ಣಿರು ಹಾಕಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಟಿ ದಿವ್ಯ ಅವರು ಇತ್ತೀಚೆಗೆ ತಮ್ಮ ಮದುವೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು, ಮೂರು ವರ್ಷದ ಹಿಂದೆಯೇ ಮದುವೆ ಆಗಿದ್ದು, ಇಷ್ಟು ದಿನ ಮುಚ್ಚಿಟ್ಟು ಈಗ ಹೇಳಿಕೊಂಡಿದ್ದಾರೆ ಎಂದು ಟೀಕೆಗೆ ಸಹ ಒಳಗಾಗಿದ್ದರು, ಆದರೆ ಈಗ ಗಂಡನಿಂದ ಮೋಸ ಆಗಿದೆ ಎಂದು ತಿಳಿಸಿದ್ದಾರೆ. 2017ರಲ್ಲಿ ಇವರಿಬ್ಬರು ಒಂದೇ ಧಾರವಾಹಿಯಲ್ಲಿ ನಟಿಸುವಾಗ, ಪರಿಚಯವಾಗಿ ಫ್ರೆಂಡ್ಶಿಪ್ ಬೆಳೆದು, ಇಬ್ಬರಿಗೂ ಪ್ರೀತಿ ಶುರುವಾಗಿ ಮದುವೆಯಾದರು, ಚೆನ್ನಾಗಿಯೇ ಇದ್ದರು, ಒಂದು ಮಗು ಸಹ ಆಯಿತು. ಲಾಕ್ ಡೌನ್ ಸಮಯದಲ್ಲಿ ಅರ್ನವ್ ಗೆ ಕೆಲಸ ಇಲ್ಲದೆ ಇದ್ದಾಗ, ದಿವ್ಯ ಅವರೇ ಗಂಡನ ಎಲ್ಲಾ ಬೇಕು ಬೇಡಗಳನ್ನು ನೋಡಿಕೊಂಡಿದ್ದಾರೆ.
ಇತ್ತೀಚೆಗೆ ತಮ್ಮ ಹಣ ನೀಡಿ, ಮನೆಯನ್ನು ಖರೀದಿ ಮಾಡಿದ್ದಾರೆ, ಆದರೆ ಅರ್ನವ್ ಈಗ ದಿವ್ಯ ಅವರಿಗೆ ಚಿತ್ರಹಿಂಸೆ ಕೊಡುತ್ತಿದ್ದು, ಆಸ್ಪತ್ರೆಗೆ ಅಡ್ಮಿಟ್ ಆಗುವ ಹಾಗೆ ಮಾಡಿದ್ದಾರೆ ಎಂದಿದ್ದಾರೆ ದಿವ್ಯ. ಮದುವೆ ಆದ ವಿಚಾರವನ್ನು ಯಾರಿಗೂ ಹೇಳಬಾರದು, ಸೋಷಿಯಲ್ ಮೀಡಿಯಾದಲ್ಲಿ ಮದುವೆ ಆಗಿದೆ ಎಂದು ಫೋಟೋ ಅಪ್ಲೋಡ್ ಮಾಡಬಾರದು ಎಂದು ಅರ್ನವ್ ರೀಸ್ಟ್ರಿಕ್ಟ್ ಮಾಡಿದ್ದು, ಅದನ್ನು ಮೀರಿ ದಿವ್ಯ ಫೋಟೋಗಳನ್ನು ಹಂಚಿಕೊಂಡಿದ್ದಕ್ಕೆ, ಹಿಂಸೆ ನೀಡಿ ದಿವ್ಯ ಅವರನ್ನು ದೂರ ಮಾಡಿದ್ದಾರಂತೆ ಪತಿ ಅರ್ನವ್, ಗಂಡ ಏನೇ ಮಾಡಿದ್ದರು ತಮಗೆ ಅವನೇ ಬೇಕು ಎಂದು ದಿವ್ಯ ಕಣ್ಣೀರು ಹಾಕುತ್ತಿದ್ದು, ತಮಗೆ ಮತ್ತು ತಮ್ಮ ಮಗನ ಪರವಾಗಿ ಎಲ್ಲರೂ ದೇವರಲ್ಲಿ ಪ್ರಾರ್ಥನೇ ಮಾಡಿ ಎಂದು ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ಬೇಡಿಕೊಂಡಿದ್ದಾರೆ.