ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಿ ಬೆವರಿಳಿಸಿದ ಚೆಲುವೆ: ಕ್ರಿಕೆಟ್ ಫ್ಯಾನ್ಸ್ ಅಂತೂ ಫುಲ್ ಫಿದಾ: ಈಕೆಯನ್ನು ಕಳುಹಿಸಿ ಕಪ್ ಗೆಲ್ಲಿಸುತ್ತಾರೆ ಎಂದ ಫ್ಯಾನ್ಸ್.

32

Get real time updates directly on you device, subscribe now.

್ರಿಕೆಟ್ ಎನ್ನುವುದು ಬರಿ ಆಟವಲ್ಲ ಭಾರತದಲ್ಲಿ ಕ್ರಿಕೆಟ್ ಎನ್ನುವುದು ಒಂದು ಧರ್ಮ ಇದ್ದ ಹಾಗೆ ಎಂದರೆ ತಪ್ಪಲ್ಲ. ಕ್ರಿಕೆಟ್ ಆಡಬೇಕು ಎಂದು ಇಷ್ಟಪಟ್ಟವರು ಒಂದು ಸಾರಿ ಕ್ರಿಕೆಟ್ ಆಡಲು ಶುರು ಮಾಡಿದರೆ ಪದೇ ಪದೇ ಆಡಬೇಕೆಂದು ಬಯಸುತ್ತಾರೆ. ಕ್ರಿಕೆಟ್ ಆಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎನ್ನುವ ಮಾತಂತು ಸತ್ಯ. ಇದೇ ರೀತಿ ಈಗ ಹುಡುಗಿಯೊಬ್ಬರು ನೆಟ್ಸ್ ಒಳಗೆ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಾ ಬೆವರಿಳಿಸಿದ್ದು ಆಕೆಯ ವಿಡಿಯೋ ವೈರಲ್ ಆಗಿದೆ, ನೆಟ್ಸ್ ನಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿರುವ ಹುಡುಗಿ ಮತ್ಯಾರು ಅಲ್ಲ, ಬಾಲಿವುಡ್ ನ ಖ್ಯಾತ ನಟಿ ಜಾನ್ವಿ ಕಪೂರ್.

ಜಾನ್ವಿ ಕಪೂರ್ ಅವರು ಖ್ಯಾತ ನಟಿ ಶ್ರೀದೇವಿ ಅವರ ಮಗಳು, ಚಿಕ್ಕ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಹಲವು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ನಟಿಸುವ ಸಿನಿಮಾಗಳು ಹೆಚ್ಚು ಯಶಸ್ಸು ಕಾಣದೆ ಇದ್ದರು ಸಹ ಜಾನ್ವಿ ಅಭಿನಯ ಮಾತ್ರ ಎಲ್ಲರಿಗೂ ಬಹಳ ಇಷ್ಟವಾಗಿದೆ. ಸಾಲು ಸಾಲು ಅವಕಾಶಗಳು ಸಹ ಜಾನ್ವಿ ಅವರನ್ನು ಹುಡುಕಿಕೊಂಡು ಬರುತ್ತಲಿವೆ. ಇದೀಗ ಜಾನ್ವಿ ಕಪೂರ್ ಅವರು ಕ್ರಿಕೆಟ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ .

ಜಾನ್ವಿ ಅವರು ನೆಟ್ಸ್ ನಲ್ಲಿ ಕವರ್ ಡ್ರೈವ್ ಶಾಟ್ ಹೊಡೆದಿದ್ದು, ಇದನ್ನು ನೋಡಿ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದು, ಈ ವಿಡಿಯೋ ಅನ್ನು ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಜಾನ್ವಿ ಕಪೂರ್ ಅವರ ಈ ಕ್ರಿಕೆಟ್ ಆಟಕ್ಕೆ ಎಲ್ಲರೂ ಮನಸೋತಿದ್ದು, “ಟಿ20 ವರ್ಲ್ಡ್ ಕಪ್ ನಲ್ಲಿ ನಮಗೆ ನಂಬಿಕೆ ಇರುವುದು ಇವರ ಮೇಲೆ ಮಾತ್ರ, ಇವರು ವಿಶ್ವಕಪ್ ನಲ್ಲಿ ಭಾರತ ತಂಡದಲ್ಲಿ ಇರಬೇಕಿತ್ತು..” ಎನ್ನುವಂಥ ಮಾತುಗಳನ್ನು ಆಡುತ್ತಿದ್ದಾರೆ. ಸಧ್ಯಕ್ಕೆ ಜಾನ್ವಿ ಕಪೂರ್ ಅವರ ಈ ವಿಡಿಯೋ ವೈರಲ್ ಆಗಿದ್ದು, ನೀವು ಕೂಡ ತಪ್ಪದೇ ನೋಡಿ..

Get real time updates directly on you device, subscribe now.