51 ನೇ ವಯಸ್ಸಿನಲ್ಲಿಯೂ ಮದುವೆಯಾಗದೆ ಉಳಿದಿದ್ದ ತಬು ರವರಿಗೆ ಈಗ ಬದಲಾಗಿದೆ ಮನಸ್ಸು: ಈ ವಯಸಿನಲ್ಲಿ ಇವೆಲ್ಲ ಬೇಕಾ ಎಂದ ಫ್ಯಾನ್ಸ್. ಏನಾಗಿದೆ ಗೊತ್ತೇ?

31

Get real time updates directly on you device, subscribe now.

ಹಿರಿಯನಟಿ ತಬು ಅವರ ರಿಲೇಶನ್ಷಿಪ್ ಗಳ ವಿಚಾರ ಈಗ ಭಾರಿ ಚರ್ಚೆಗೆ ಒಳಗಾಗಿದೆ. 90ರ ದಶಕದಲ್ಲಿ ನಟಿ ತಬು ಅವರು ತಮ್ಮ ಕಣ್ಣುಗಳಿಂದಲೇ ಎಲ್ಲರೂ ಫಿದಾ ಆಗುವ ಹಾಗೆ ಮಾಡುತ್ತಿದ್ದರು. ಎಲ್ಲಾ ಟಾಪ್ ಹೀರೋಗಳ ಜೊತೆಗೂ ನಾಯಕಿಯಾಗಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ ತಬು. ಹೆಚ್ಚು ಕಮ್ಮಿ 3 ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ ತಬು ಅವರು ಆಗಿನ ಸಮಯದಲ್ಲಿ ಇಬ್ಬರು ನಟರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದರು ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಗಾಸಿಪ್ ಗಳ ಬಗ್ಗೆ ತಬು ಅವರು ಪ್ರತಿಕ್ರಿಯೆ ಕೊಡಲು ಹೋಗಲಿಲ್ಲ. ಸಾಮಾನ್ಯವಾಗಿ ಸಿನಿಮಾ ನಟಿಯರು, ವಯಸ್ಸಾದ ಮೇಲು ಡೇಟಿಂಗ್ ಮಾಡುತ್ತಾರೆ, ರಹಸ್ಯವಾಗಿ ರಿಲೇಶನ್ಷಿಪ್ ನಲ್ಲಿರುತ್ತಾರೆ.

ಕೆಲವು ಕಲಾವಿದರು ಇಂಥದ್ದನ್ನು ರಹಸ್ಯವಾಗಿ ಮಾಡುತ್ತಾರೆ, ಇನ್ನು ಕೆಲವರು ಬಹಿರಂಗವಾಗಿ ಮಾಡುತ್ತಾರೆ. ಇಂಥಹ ಸಂಸ್ಕೃತಿ ಈಗ ಚಿತ್ರರಂಗದಲ್ಲಿ ಮಾತ್ರವಲ್ಲ ಬೇರೆ ಉದ್ಯಮಗಳಲ್ಲೂ ಕಂಡುಬರುತ್ತಿದೆ. ಸ್ಟಾರ್ ಹೀರೋಗಳ ಮಕ್ಕಳು ಸಹ ಇದೇ ರೀತಿ ಮಾಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಚಿತ್ರರಂಗದಲ್ಲಿ ಲವ್, ರಿಲೇಶನ್ಷಿಪ್, ಲಿವ್ ಇನ್ ರಿಲೇಶನ್ಷಿಪ್, ಡೇಟಿಂಗ್ ಇವುಗಳಲ್ಲಿ ಇರಲು ವಯಸ್ಸು ಮುಖ್ಯವಲ್ಲ ಎಂದು ಸಹ ಹೇಳುತ್ತಾರೆ. ಮಗಳ ವಯಸ್ಸಿನ ನಾಯಕಿಯರನ್ನು ಪ್ರೀತಿಸಿ ಮದುವೆಯಾದ ನಾಯಕರು, ತಮಗಿಂತ ಹೆಚ್ಚು ವಯಸ್ಸಿನ ನಾಯಕಿಯರನ್ನು ಪ್ರೀತಿಸಿ ಮದುವೆಯಾದ ನಾಯಕರು ಇದ್ದಾರೆ.

ಮದುವೆಯಾಗಿ ವಿಚ್ಛೇದನ ಪಡೆದಿರುವ ಹಿರಿಯನಟಿ ಜೊತೆಗೆ ಬಾಲಿವುಡ್ ನ ಯುವ ಹೀರೋ ಒಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದೆ, ಅಷ್ಟೇ ಅಲ್ಲದೆ ತಬು ಅವರು ಸಹ ಈಗ ಇದೇ ಹಾದಿ ಹಿಡಿಯುತ್ತಾರೆ ಎನ್ನಲಾಗುತ್ತಿದೆ. ಸೀನಿಯರ್ ಹೀರೋ ಒಬ್ಬರ ಜೊತೆಗೆ ರಿಲೇಶನ್ಷಿಪ್ ನಲ್ಲಿರಲು ರೆಡಿ ಆಗಿದ್ದಾರಂತೆ ತಬು. ಈವರೆಗು ಮದುವೆ ಆಗದೆ ಇದ್ದ ತಬು ಅವರು ಈಗ ಐವತ್ತರ ಹರೆಯದಲ್ಲಿ ಹಿರಿಯನಟನ ಜೊತೆಗೆ ರಿಲೇಶನ್ಷಿಪ್ ಇಟ್ಟುಕೊಳ್ಳಲು ರೆಡಿ ಆಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಬಹಳ ಹಿಂದೆ ತೆಲುಗಿನ ಖ್ಯಾತ ನಟ ನಾಗಾರ್ಜುನ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ಅವರೊಡನೆ ತಬು ರಿಲೇಶನ್ಷಿಪ್ ನಲ್ಲಿದ್ದರು ಎನ್ನುವ ವರದಿ ಇತ್ತು, ಈಗ ಮತ್ತೊಂದು ರಿಲೇಶನ್ಷಿಪ್ ಗೆ ನಟಿ ತಬು ರೆಡಿ ಆಗಿರುವ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

Get real time updates directly on you device, subscribe now.