ಕ್ರಾಂತಿ ಸಿನಿಮಾ ನಟಿ ರಚಿತಾ ರಾಮ್ ರವರ ಹುಟ್ಟು ಹಬ್ಬಕ್ಕೆ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತೇ?? ಶಾಕ್ ಆದ ರಚ್ಚು.
ಕನ್ನಡ ಚಿತ್ರರಂಗದಲ್ಲಿ ಬುಲ್ ಬುಲ್ ಎಂದೇ ಖ್ಯಾತಿ ಆಗಿರುವವರು ನಟಿ ರಚಿತಾ ರಾಮ್. ರಚಿತಾ ಅವರು ಈಗ ಕನ್ನಡ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ. ಅರಸಿ ಧಾರವಾಹಿ ಮೂಲಕ ಶುರುವಾದ ಇವರ ನಟನೆಯ ಪಯಣ ಇಂದು ಕ್ರಾಂತಿ ಸಿನಿಮಾವರೆಗು ಮುಂದುವರೆದಿದೆ. ರಚಿತಾ ರಾಮ್ ಅವರು ದರ್ಶನ್ ಅವರೊಡನೆ ಬುಲ್ ಬುಲ್ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಕನ್ನಡದ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆಯಲ್ಲಿ ನಟಿಸಿದ್ದಾರೆ, ಇವರು ನಟಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ.
ಕನ್ನಡದ ಮೋಸ್ಟ್ ಬ್ಯುಸಿಯೆಸ್ಟ್ ನಟಿ ಮತ್ತು ಕನ್ನಡದ ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ ರಚಿತಾ. ಸೂಪರ್ ಮಚ್ಚಿ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ರಚಿತಾ ಅವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ, ನಿನ್ನೆಯಷ್ಟೇ ರಚಿತಾ ಅವರು 30ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಮಧ್ಯ ರಾತ್ರಿ ಇಂದಲೇ ಅಭಿಮಾನಿಗಳು ರಚಿತಾ ಅವರ ಮನೆಯ ಬಳಿ ಹಾಜರಿದ್ದರು. ಮಧ್ಯರಾತ್ರಿಯಲ್ಲೇ ಕೇಕ್ ತಂದು, ರಚಿತಾ ಅವರ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ರಚಿತಾ ಅವರು ತಮ್ಮ ಅಭಿಮಾನಿಗಳ ಕಡೆಯಿಂದ ಇಷ್ಟು ಪ್ರೀತಿ ಸಿಗುತ್ತಿರುವುದನ್ನು ನೋಡಿ ಬಹಳ ಸಂತೋಷ ಪಟ್ಟಿದ್ದಾರೆ.
ರಚಿತಾ ರಾಮ್ ಅವರ ಹುಟ್ಟುಹಬ್ಬದ ಸ್ಪೆಷಲ್ ದಿನದಂದು ನಟ ದರ್ಶನ್ ಅವರು ರಚಿತಾ ರಾಮ್ ಅವರಿಗೆ ಸ್ಪೆಷಲ್ ಗಿಫ್ಟ್ ಒಂದನ್ನು ಕಳಿಸಿಕೊಟ್ಟಿದ್ದಾರೆ. ಮೊದಲಿಗೆ ದರ್ಶನ್ ಅವರು ಸೋಷಿಯಲ್ ಮೀಡಿಯಾ ಮೂಲಕ ರಚಿತಾ ರಾಮ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದರು. “ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ ನಮ್ಮ ಬುಲ್ ಬುಲ್ ಗೆ ಹುಟ್ಟು ಹಬ್ಬದ ಶುಭಾಶಯಗಳು ನಿಮ್ಮ ಇಷ್ಟಾರ್ಥಗಳೆಲ್ಲ ಈಡೇರಲಿ. ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ..” ಎಂದು ಬರೆದು ವಿಶ್ ಮಾಡಿದ್ದಾರೆ ನಟ ದರ್ಶನ್, ಅಷ್ಟೇ ಅಲ್ಲದೆ, ದರ್ಶನ್ ಅವರು ಒಂದು ದುಬಾರಿ ವಾಚ್ ಅನ್ನು ರಚಿತಾ ರಾಮ್ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಡಿಬಾಸ್ ಅವರಿಂದ ಸಿಕ್ಕಿರುವ ಗಿಫ್ಟ್ ನೋಡಿ, ರಚಿತಾ ರಾಮ್ ಬಹಳ ಸಂತೋಷ ಪಟ್ಟಿದ್ದಾರೆ.