ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ನಟನೆ ಮಾಡಲು ಶಮಂತ್ ರವರ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?? ಇದ
ಸೋಷಿಯಲ್ ಮೀಡಿಯಾದಲ್ಲಿ ಬ್ರೋಗೌಡ ಎಂದು ಫೇಮಸ್ ಆಗಿರುವ ಶಮಂತ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಬಂದಿದ್ದರು. ಇವರ ಬಗ್ಗೆ ಹೇಳುವುದಾದರೆ, ಬ್ರೋಗೌಡ ಶಮಂತ್ ಮೂಲತಃ ದಾವಣಗೆರೆ ಜಿಲ್ಲೆಯವರು. ವಿದ್ಯಾಭ್ಯಾಸದ ಸಲುವಾಗಿ ಬೆಂಗಳೂರಿಗೆ ಬಂದರು. ಬೆಂಗಳೂರಿನ ಶ್ರೀ ಭಗವಾನ್ ಮಹಾವೀರ್ ಜೈನ್ ಯೂನಿವರ್ಸಿಟಿಯಲ್ಲಿ ಪಿಯುಸಿ ಶಿಕ್ಷಣ ಮುಗಿಸಿದರು ಶಮಂತ್. ನಂತರ ಪೆಸಿಟ್ ಯೂನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಶಮಂತ್ ಅವರು ಓದಿದ್ದು ಇಂಜಿನಿಯರಿಂಗ್ ಆದರೂ ಆಯ್ಕೆ ಮಾಡಿಕೊಂಡಿದ್ದು ಬಣ್ಣದ ಪ್ರಪಂಚವನ್ನು. ಶಮಂತ್ ಒಬ್ಬ ವಿವಿಧ ಪ್ರತಿಭೆಗಳು ಇರುವ ವ್ಯಕ್ತಿ.
ಇವರು ಒಬ್ಬ ನಟ, ಗಾಯಕ, ಡೈರೆಕ್ಟರ್, ಪ್ರೊಡ್ಯೂಸರ್ ಮತ್ತು ಸೋಷಿಯಲ್ ಮೀಡಿಯಾ influencer ಕೂಡ ಹೌದು. ಶಿಕ್ಷಣ ಮುಗಿಸಿದ ನಂತರ ಶಮಂತ್ ಅವರು ಕೆಲವು ಮ್ಯೂಸಿಕ್ ಆಲ್ಬಮ್ ಗಳಲ್ಲಿ ಕಾಣಿಸಿಕೊಂಡರು. ಜೊತೆಗೆ ಕೆಲವು ಶಾರ್ಟ್ ಫಿಲ್ಮ್ ಗಳಲ್ಲಿ ಕೂಡ ನಟಿಸಿದರು. ಶಮಂತ್ ಅವರಿಗೆ ಬ್ರೋಗೌಡ ಎಂದು ಹೆಸರು ಬರಲು ಕಾರಣ ಒಂದು ಪಾತ್ರ. ತಮ್ಮ ತಂಡದ ಜೊತೆ ಸೇರಿ ವರ್ಜಿನ್ ಬಾಯ್ಸ್ ಹೆಸರಿನಲ್ಲಿ ಒಂದು ವೆಬ್ ಸೀರಿಸ್ ಶುರು ಮಾಡಿದರು ಶಮಂತ್. ಇದರಲ್ಲಿ ಶಮಂತ್ ನಿರ್ವಹಿಸಿದ ಪಾತ್ರದ ಹೆಸರು ಬ್ರೋಗೌಡ. ಈ ಪಾತ್ರ ಬಹಳ ಫೇಮಸ್ ಆಗಿ ಬ್ರೋಗೌಡ ಹೆಸರು ಫೇಮಸ್ ಆಯಿತು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದ ಬಾ ಗುರು ಸ್ಲೋಗನ್ ಮೇಲೆ ಹಾಡು ರಚಿಸಿ, ಅದನ್ನು ತಾವೇ ಹಾಡಿ ಬಹಳ ಸುದ್ದಿಯಾಗಿದ್ದರು ಶಮಂತ್.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಅಲ್ಲಿ ಹಲವು ವಾರಗಳ ಕಾಲ ಪ್ರಯಾಣ ಮುಗಿಸಿದ ನಂತರ ಪ್ರಸ್ತುತ ಶಮಂತ್, ಗಾನ ಬಜಾನಾ ಶೋನಲ್ಲಿ ಸ್ಪರ್ಧಿಯಾಗಿ ಬರುತ್ತಿದ್ದರು. ಇತ್ತೀಚೆಗೆ ಐಷಾರಾಮಿ ಕಾರ್ ಖರೀದಿ ಮಾಡಿ ಸುದ್ದಿಯಾಗಿದ್ದರು. ಇದೀಗ ಶಮಂತ್ ಅವರು ಹೊಸ ಪ್ರಯತ್ನ ಶುರು ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗಲಿರುವ ಹೊಸ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಶಮಂತ್, ಶೀಘ್ರದಲ್ಲೇ ಶುರುವಾಗಲಿರುವ ಭಾಗ್ಯ ಲಕ್ಷ್ಮಿ ಧಾರವಾಹಿಯಲ್ಲಿ ನಟಿಸುತ್ತಿದ್ದು, ಒಂದು ಎಪಿಸೋಡ್ ಗೆ 80 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಮೊದಲ ಧಾರವಾಹಿಗೆ ಇಷ್ಟು ದುಬಾರಿ ಸಂಭಾವನೆ ಪಡೆಯುತ್ತಿದ್ದಾರ ಎಂದು ಜನರಿಗೆ ಶಾಕ್ ಆಗಿದ್ದಾರೆ.