ಅಪ್ಪು ಅವರನ್ನು ಮರೆಯಲು ಕಷ್ಟ ಪಡುತ್ತಿರುವ ತೆಲುಗಿನ ರಾಣಾ ದಗ್ಗುಬಾಟಿ: ಮರೆಯಲಾಗದೆ ಎಂತಹ ಕೆಲಸ ಮಾಡಿದ್ದಾರೆ ಗೊತ್ತೇ??

35

Get real time updates directly on you device, subscribe now.

ನಮ್ಮೆಲ್ಲರ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೊಡನೆ ಇಲ್ಲ. ಅಪ್ಪು ಅವರು ಆಗಲಿ ಇನ್ನೇನು ಒಂದು ವರ್ಷ ಕಳೆಯುತ್ತಿದೆ. ಆದರೆ ಇಂದಿಗೂ ಅಪ್ಪು ಅವರ ನೆನಪುಗಳು ಹಾಗೆಯೇ ಇದೆ. ಅಪ್ಪು ಅವರ ಸಮಾಧಿ ಸ್ಥಳಕ್ಕೆ ಪ್ರತಿದಿನ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಚಿತ್ರರಂಗದ ತಾರೆಯರು ಅಪ್ಪು ಅವರ ಜೊತೆಗಿನ ನೆನಪುಗಳನ್ನು ಸಂದರ್ಶನಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಾರೆ. ಅಪ್ಪು ಅವರು ಸ್ನೇಹಕ್ಕೆ ವಿಶ್ವಾಸಕ್ಕೆ ಇನ್ನೊಂದು ಹೆಸರಿನ ಹಾಗಿದ್ದರು.

ಅಪ್ಪು ಅವರ ಬಗ್ಗೆ ಎಷ್ಟು ಹೇಳುತ್ತಾ ಹೋದರು ಕಡಿಮೆಯೇ, ಚಂದನವನದಲ್ಲಿ ಎಲ್ಲರ ಜೊತೆಗೂ ಚೆನ್ನಾಗಿದ್ದ ಅಪ್ಪು ಅವರು ಹೊಸಬರನ್ನು ಪ್ರೋತ್ಸಾಹಿಸುತ್ತಿದ್ದರು, ಇಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಕಲಾವಿದರ ಜೊತೆಗೂ ಒಳ್ಳೆಯ ಸ್ನೇಹ ಬಾಂಧವ್ಯ ಇಟ್ಟುಕೊಂಡಿದ್ದರು. ಅಪ್ಪು ಅವರು ಹೋದ ಬಳಿಕ ಅನೇಕ ಕಲಾವಿದರು ಬಂದು ಅವರ ಅಂತಿಮ ದರ್ಶನ ಪಡೆದರು, ಹಾಗು ಅಪ್ಪು ಅವರ ಮನೆಗೆ ಬಂದು, ಶಿವಣ್ಣ ಹಾಗು ಅಶ್ವಿನಿ ಅವರಿಗೆ ಸಾಂತ್ವನ ಹೇಳಿದ್ದರು. ಹಲವಾರು ಕಲಾವಿದರು ಈಗಲೂ ಅಪ್ಪು ಅವರನ್ನು ನೆನೆಯುತ್ತಾರೆ. ಇದೀಗ ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಬಾಟಿ ಅವರು ಸಹ ಪುನೀತ್ ರಾಜ್ ಕುಮಾರ್ ಅವರ ನೆನಪು ಮಾಡಿಕೊಂಡಿದ್ದಾರೆ.

ರಾಣಾ ಅವರ ಆಫೀಸ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆಯನ್ನು ಇರಿಸಿದ್ದು, ಅದರ ಫೋಟೋ ತೆಗೆದು ರಾಣಾ ದಗ್ಗುಬಾಟಿ ಅವರು ಟ್ವೀಟ್ ಮಾಡಿದ್ದಾರೆ, “ಈ ಸುಂದರವಾದ ಸ್ಮರಣಿಕೆ ಇಂದು ನನ್ನ ಕಚೇರಿಗೆ ಬಂದಿದೆ. ಮಿಸ್ ಯು ಮೈ ಫ್ರೆಂಡ್.. ಪುನೀತ್ ರಾಜ್ ಕುಮಾರ್..” ಎಂದು ಬರೆದು ಟ್ವೀಟ್ ಮಾಡಿದ್ದಾರೆ ನಟ ರಾಣಾ ದಗ್ಗುಬಾಟಿ. ಇದರಿಂದ ಅಪ್ಪು ಅವರು ರಾಣಾ ಅವರೊಡನೆ ಎಂಥಹ ಬಾಂಧವ್ಯ ಇಟ್ಟುಕೊಂಡಿದ್ದರು ಎನ್ನುವುದು ಗೊತ್ತಾಗುತ್ತದೆ. ಅಪ್ಪು ಅವರು ಇನ್ನಿಲ್ಲವಾದಾಗ ಕೂಡ ರಾಣಾ ಅವರು ಬಂದು ಅಂತಿಮ ದರ್ಶನ ಪಡೆದಿದ್ದರು. ಈಗ ಮತ್ತೊಮ್ಮೆ ಅಪ್ಪು ಅವರ ನೆನಪು ಮಾಡಿಕೊಂಡಿದ್ದು, ಈ ಟ್ವೀಟ್ ಗೆ ಹಲವು ಅಭಿಮಾನಿಗಳು ರಿಪ್ಲೈ ಮಾಡಿ, ರಾಣಾ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಪ್ಪು ಅವರನ್ನು ನೆನಪು ಮಾಡಿಕೊಂಡಿದ್ದಾರೆ.

Get real time updates directly on you device, subscribe now.