ಬಿಗ್ ಬಾಸ್ ಮನೆಯಲಿ ಶುರುವಾಯ್ತು ಮರ್ಯಾದೆ ಪ್ರಶ್ನೆ: ಮಂಗಳ ಗೌರಿ ರೀತಿಯಲ್ಲಿ ಕಣ್ಣೀರು ಇತ್ತ ಕಾವ್ಯಶ್ರೀ. ಅಸಲಿಗೆ ನಡೆದದ್ದೇನು ಗೊತ್ತೇ??
ಬಿಗ್ ಬಾಸ್ ಮನೆ ಹೆಚ್ಚಾಗಿ ಸುದ್ದಿಯಾಗುವುದು ಜಗಳಗಳಿಂದ, ಒಂದಲ್ಲಾ ಒಂದು ವಿಚಾರಕ್ಕೆ ಜಗಳಗಳು ನಡೆಯುತ್ತಲೇ ಇರುತ್ತದೆ. ಬಿಬಿಕೆ9 ಸಹ ಯಾವುದೇ ಜಗಳಕ್ಕೆ ಕಡಿಮೆ ಇಲ್ಲ, ಮೊದಲ ವಾರ ಪ್ರಶಾಂತ್ ಸಂಭರ್ಗಿ ಮತ್ತು ರೂಪೇಶ್ ರಾಜಣ್ಣ ನಡುವೆ ಜಗಳ ಪ್ರಾರಂಭವಾಗಿತ್ತು, ನಂತರ ಮತ್ತಿಬ್ಬರು ಸ್ಪರ್ಧಿಗಳ ನಡುವೆ ಜಗಳ ಶುರುವಾಗಿ, ಎರಡನೇ ವಾರ ಕೂಡ ಇವರಿಬ್ಬರ ಜಗಳ ಮುಂದುವರೆದಿದೆ. ಈ ಜಗಳ ನಡೆಯುತ್ತಿರುವುದು ಮಂಗಳಗೌರಿ ಮದುವೆ ಧಾರವಾಹಿ ಖ್ಯಾತಿಯ ನಟಿ ಕಾವ್ಯಶ್ರೀಗೌಡ ಮತ್ತು ಗಿಚ್ಚಿ ಗಿಲಿಗಿಲಿ ಖ್ಯಾತಿಯ ವಿನೋದ್ ಗೊಬ್ಬರಗಾಲ ನಡುವೆ. ಮೊದಲ ವಾರದಿಂದಲೂ ಇವರಿಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ ಆಗುತ್ತಿತ್ತು.
ತಮಾಷೆಯಿಂದ ಶುರುವಾಗುತ್ತಿದ್ದ ಮಾತುಗಳು, ಜಗಳಕ್ಕೆ ತಿರುಗುತ್ತಿತ್ತು. ಪ್ರಾಸಬದ್ಧವಾಗಿ ಮಾತನಾಡುವಾಗ, ಕಾವ್ಯ ಅವರು ವಿಕ್ರಾಂತ್ ರೋಣದಲ್ಲಿ ಇದ್ದಾರೆ ಗುಮ್ಮ, ನೀ ನನ್ನ ದೊಡ್ಡ ತಮ್ಮ ಎಂದಿದ್ದರು. ಆಗ ವಿನೋದ್ ಸಹ ತಮಾಷೆ ಮಾಡುತ್ತಾ ಕಾವ್ಯ ಅವರನ್ನು ಆಂಟಿ ಎಂದರು, ಆಗ ಕೋಪಗೊಂಡ ಕಾವ್ಯ ಇನ್ನೊಂದುಸಾರಿ ನನ್ನ ಜೊತೆ ಮಾತನಾಡಬೇಡ, ನಾನು ನಿನ್ನ ಜೊತೆ ಮಾತನಾಡುವುದಿಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದರು. ಹೀಗಾಗಿದ್ದರು ಕಾವ್ಯಶ್ರೀ ಅವರನ್ನು ವಿನೋದ್ ಮಾತನಾಡಿಸಲು ಪ್ರಯತ್ನಿಸಿ ಮತ್ತೊಮ್ಮೆ ಜಗಳವಾಗಿ, ಕಾವ್ಯ ವಿನೋದ್ ಅವರಿಗೆ ಬೈದಿದ್ದರು. ಮೊದಲ ಇದೆಲ್ಲಾ ನಡೆದು ಇದೀಗ ಎರಡನೇ ವಾರ ಕೂಡ ಇವರಿಬ್ಬರ ಜಗಳ ಮುಂದುವರೆದಿದೆ, ಇಬ್ಬರು ಮತ್ತೊಮ್ಮೆ ಅಸಮಾಧಾನಗೊಂಡಿದ್ದಾರೆ.
9ನೇ ದಿನದ ಎಪಿಸೋಡ್ ನ ಪ್ರೋಮೋ ನಲ್ಲಿ ನೋಡಿದರೆ, ವಿನೋದ್ ಕಾವ್ಯ ನಡುವೆ ಮತ್ತೊಮ್ಮೆ ಜಗಳವಾಗಿದೆ, ಎಲ್ಲರು ಊಟ ಮಾಡುವಾಗ, ವಿನೋದ್ ಅವರು ಕಾವ್ಯ ಅವರಿಗೆ ಅನ್ನ ಹಾಕು ಎಂದು ಕೇಳುತ್ತಾರೆ, ಆಗ ಕೋಪಗೊಳ್ಳುವ ಕಾವ್ಯ ನಾನೇನು ಅವನ ಮನೆ ಆಳ ಎಂದು ಹೇಳಿ, ಬೇಸರ ಮಾಡಿಕೊಳ್ಳುತ್ತಾರೆ, ನಂತರ ವಿನೋದ್ ಅವರೇ ಕಾವ್ಯ ಅವರನ್ನು ಮಾತನಾಡಿಸಲು ಹೋದರೆ, ನನಗೆ ಇಷ್ಟ ಇಲ್ಲದ ಕಪಿ ನನ್ನನ್ನು ಮಾತನಾಡಿಸಲು ಬಂದಿದೆ ಎಂದು ಹೇಳುತ್ತಾರೆ, ಆಗ ಮತ್ತೊಮ್ಮೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಕಾವ್ಯ ವಿನೋದ್ ಇಬ್ಬರು ಸಹ ಬೇಸರ ಮಾಡಿಕೊಂಡಿದ್ದು, ಮನೆಯ ಸ್ಪರ್ಧಿಗಳು ಇವರಿಬ್ಬರನ್ನು ಸಮಾಧಾನ ಮಾಡಿದ್ದಾರೆ.