ಲೈಗೆರ್ ಸಿನಿಮಾ ಸೋತಾಗ ವಿಜಯ್ ದೇವೆರಕೊಂಡ ರವರಿಗೆ ರಶ್ಮಿಕಾ ಹೇಳಿದ್ದೇನು ಗೊತ್ತೇ?? ಕಷ್ಟದ ಸಮಯದಲ್ಲಿ ಹೇಳಿದ್ದೇನು ಗೊತ್ತೇ??
ನಟಿ ರಶ್ಮಿಕಾ ಮಂದಣ್ಣ ಈಗ ಬಹಳ ಬ್ಯುಸಿ ಆಗಿರುವ ನಟಿ ಎಂದರೆ ತಪ್ಪಲ್ಲ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲಾ ಚಿತ್ರರಂಗದಲ್ಲು ರಶ್ಮಿಕಾ ಅವರದ್ದೇ ಹವಾ, ಪ್ರಸ್ತುತ ರಶ್ಮಿಕಾ ಅಭಿನಯದ ಹಿಂದಿ ಸಿನಿಮಾ ಗುಡ್ ಬೈ ಬಿಡುಗಡೆಗೆ ಸಿದ್ಧವಾಗಿದ್ದು ಮುಂದಿನ ಶುಕ್ರವಾರ ತೆರೆಕಾಣಲಿದೆ. ಈ ಸಿನಿಮಾ ಪ್ರಚಾರ ಕೆಲಸಗಳಲ್ಲಿ ರಶ್ಮಿಕಾ ಬಹಳ ಬ್ಯುಸಿ ಆಗಿದ್ದಾರೆ. ಬೇರೆ ಬೇರೆ ಊರುಗಳಲ್ಲಿ ಗುಡ್ ಬೈ ಸಿನಿಮಾ ಪ್ರೊಮೋಶನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ರಶ್ಮಿಕಾ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಅಮಿತಾಭ್ ಬಚ್ಚನ್ ಅವರೊಡನೆ ತೆರೆ ಹಂಚಿಕೊಂಡಿದ್ದಾರೆ..
ಗುಡ್ ಬೈ ಸಿನಿಮಾ ಪ್ರೊಮೋಶನ್ ಸಮಯದಲ್ಲಿ ಲೈಗರ್ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದ್ದು, ಅದಕ್ಕೆ ಕೂಲ್ ಆದ ಉತ್ತರ ಕೊಟ್ಟಿದ್ದಾರೆ ರಶ್ಮಿಕಾ ಮಂದಣ್ಣ. ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಈ ವರ್ಷ ಹೀನಾಯವಾಗಿ ಸೋತಿತು, ಈ ಸಿನಿಮಾ ಮೇಲೆ ಎಲ್ಲರಿಗು ಬಹಳ ನಿರೀಕ್ಷೆ ಇದ್ದರು ಸಹ, ಸಿನಿಮಾ ಸೋಲನ್ನು ಕಂಡಿತು. ಇನ್ನು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಬಹಳ ಕ್ಲೋಸ್ ಎನ್ನುವ ವಿಚಾರ ಗೊತ್ತೇ ಇದೆ. ಹಾಗಾಗಿ ಈ ಸಿನಿಮಾ ಬಗ್ಗೆ ರಶ್ಮಿಕಾ ಏನು ಹೇಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗು ಇತ್ತು, ಇತ್ತೀಚಿನ ಸಂದರ್ಶನದಲ್ಲಿ ಲೈಗರ್ ಸಿನಿಮಾ ನೋಡಿದ್ರ ಎನ್ನುವ ಬಗ್ಗೆ ಪ್ರಶ್ನೆ ಕೇಳಲಾಯಿತು, ಅದಕ್ಕೆ ರಶ್ಮಿಕಾ ಮಂದಣ್ಣ ಅವರು ಉತ್ತರ ಕೊಟ್ಟಿದ್ದು ಹೀಗೆ..
“ಮಾಸ್ ಸಿನಿಮಾ ಇಷ್ಟಪಡುವ ಸಿನಿಪ್ರಿಯಳಾಗಿ ನಾನು ಲೈಗರ್ ಸಿನಿಮಾ ನೋಡಿದೆ.. ನನಗೆ ವಿಜಯ್ ದೇವರಕೊಂಡ ಅವರ ಅಭಿನಯ ತುಂಬಾ ಇಷ್ಟ ಆಯ್ತು.” ಎಂದಿದ್ದಾರೆ ರಶ್ಮಿಕಾ. ಈ ಮೂಲಕ ತಮಗೆ ಸಿನಿಮಾ ಇಷ್ಟ ಆಯ್ತು ಎಂದು ಹೇಳಿದ್ದಾರೆ. ಜೊತೆಗೆ ವಿಜಯ್ ದೇವರಕೊಂಡ ಅವರ ಬಾಡಿ ಟ್ರಾನ್ಸ್ಫರ್ಮೆನೇಷನ್ ಬಗ್ಗೆ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯ್ ಮತ್ತು ರಶ್ಮಿಕಾ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದಾರೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಭಾರಿ ಸುದ್ದಿಯಾಗಿತ್ತು, ಜೊತೆಗೆ ರಶ್ಮಿಕಾ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಇಬ್ಬರ ನಡುವೆ ಅಂತರ ಶುರುವಾಗಿದೆ, ಬ್ರೇಕಪ್ ಮಾಡಿಕೊಂಡಿದ್ದಾರೆ, ಎನ್ನುವ ವಿಚಾರ ಕೂಡ ಸದ್ದು ಮಾಡುತ್ತಿದೆ. ಆದರೆ ಈ ವಿಚಾರದ ಬಗ್ಗೆ ಇಬ್ಬರು ಕೂಡ ಪ್ರತಿಕ್ರಿಯೆ ನೀಡಿಲ್ಲ.