ಪ್ರತಿ ಬಾರಿಯೂ ರೂಪೇಶ್ ರಾಜಣ್ಣನೇ ಟಾರ್ಗೆಟ್: ಬಿಗ್ ಬಾಸ್ ಮನೆಯಲ್ಲಿ ದಿನಕ್ಕೊಂದು ಕ್ಯಾತೆ: ಈ ಬಾರಿ ಏನಾಗಿದೆ ಗೊತ್ತೇ??
ಹೊರಗಿನ ಜೀವನವೇ ಒಂದು ರೀತಿಯಾದರೆ, ಬಿಗ್ ಬಾಸ್ ಮನೆಯೊಳಗಿನ ಜೀವನ ಮತ್ತೊಂದು ರೀತಿ. ಹೊರಗಡೆ ಯಾವುದೇ ರೀತಿಯಲ್ಲಿ ವರ್ತಿಸಿದರು, ಬಿಗ್ ಬಾಸ್ ಮನೆಯೊಳಗೆ ಆ ರೀತಿ ಇರಲು ಆಗುವುದಿಲ್ಲ. ಈ ಪರಿಸ್ಥಿತಿಯನ್ನು ಈಗ ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಅನುಭವಿಸುತ್ತಿದ್ದಾರೆ. ರೂಪೇಶ್ ರಾಜಣ್ಣ ಅವರು ಕನ್ನಡಪರ ಹೋರಾಟಗಾರ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಇವರು ಕನ್ನಡದ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರು, ಕನ್ನಡ ಭಾಷೆಯ ಮೇಲೆ ಬೇರೆ ಭಾಷೆಯ ಹೇರಿಕೆ ಹೆಚ್ಚಾದರು, ಅದನ್ನು ಖಂಡಿಸುತ್ತಿದ್ದರು.
ಬಿಗ್ ಬಾಸ್ ಮನೆಯಲ್ಲೂ ಕನ್ನಡಪರ ಹೋರಾಟ ಶುರು ಮಾಡಿಕೊಂಡಿದ್ದರು. ಕೆಲವೊಮ್ಮೆ ಇವರು ಕನ್ನಡದ ಬಗ್ಗೆ ಅತಿಯಾಗಿ ಮಾತನಾಡಿ, ಅಥವಾ ನೀತಿ ಪಾಠ ಮಾಡಲು ಹೋಗಿ ಬೈಗುಳ ಕೇಳಿರುವ ಸಂದರ್ಭಗಳು ಇದೆ. ಇಲ್ಲಿ ನೀತಿ ಪಾಠ ಕೇಳೋ ಅಂಥವರು ಯಾರು ಇಲ್ಲ ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದರು. ಮಯೂರಿ ಅವರು ಕೂಡ ರೂಪೇಶ್ ರಾಜಣ್ಣ ಅವರ ಈ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂದ ರೂಪೇಶ್ ರಾಜಣ್ಣ ಅವರಿಗೆ ಈ ವಾರ ಕಳಪೆ ಪಟ್ಟಕ್ಕಾಗಿ ಬಹುತೇಕರು ಇವರನ್ನೇ ಆಯ್ಕೆ ಮಾಡಿಕೊಂಡರು. ಇದರಿಂದ ರೂಪೇಶ್ ರಾಜಣ್ಣ ಅವರು ಕೋಪಗೊಂಡು ವರ್ತಿಸಿದರು.

ನೀವು ಫೇಕ್ ಅನ್ನಿಸುತ್ತೀರಾ ಎಂದು ನೇಹಾ ಗೌಡ ಅವರು ಹೇಳಿದಾಗ, ರೂಪೇಶ್ ರಾಜಣ್ಣ ಅವರು ಕೋಪಗೊಂಡು, ನಾನು ಒರಿಜಿನಲ್ ಆಗಿ ಇರುವುದೇ ಹೀಗೆ ನಾಟಕ ಮಾಡುತ್ತಾ ಇರೋದು ಯಾರು ಅಂತ ನನಗೆ ಗೊತ್ತು ಎಂದು ಹೇಳುತ್ತಾರೆ. ಆಗ ದೀಪಿಕಾ ದಾಸ್ ಅವರು ಇಲ್ಲಿ ಹೋರಾಟ ಮಾಡೋದಕ್ಕೆ ಕರೆಸಿಲ್ಲ ಎಂದು ಹೇಳುತ್ತಾರೆ, ಮತ್ತೆ ಕೋಪಗೊಳ್ಳುವ ರೂಪೇಶ್ ರಾಜಣ್ಣ ಅವರು, ನಾನು ಮಧ್ಯ ಮಾತನಾಡುವಾಗ ನೀವು ಮಾತನಾಡಬೇಡಿ ಎಂದು ದೀಪಿಕಾ ಅವರಿಗೆ ಹೇಳುತ್ತಾರೆ. ಇನ್ನು ದೀಪಿಕಾ ಇರುವ ವಿಷಯ ಮಾತ್ರ ಮಾತನಾಡಿ ಎಂದು ಹೇಳಿದಾಗ, ರೂಪೇಶ್ ರಾಜಣ್ಣ ಅವರು ಕೋಪಗೊಂಡು, ಮೈಕ್ ಬಿಸಾಕಿ ಬೆಡ್ ರೂಮ್ ಗೆ ಹೋಗುತ್ತಾರೆ, ಈ ವರ್ತನೆಯಿಂದ ಅವರು ಜೈಲಿಗೆ ಹೋಗುವ ಹಾಗೆ ಆಗಿದೆ.