ಸಮಂತಾ ರವರ ಅಭಿಮಾನಿಗಳಿಗೆ ಷಾಕಿಂಗ್ ಸುದ್ದಿ: ಈ ರೀತಿ ಕಹಿ ಸುದ್ದಿ ನೀಡುತ್ತಾರೆ ಎಂದು ಯಾರು ಅಂದು ಕೊಂಡಿರಲಿಲ್ಲ. ಏನಾಗಿದೆ ಗೊತ್ತೇ??
ನಟಿ ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಕೆರಿಯರ್ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಬಾಲಿವುಡ್ ನಲ್ಲಿ ಸಮಂತಾ ಅವರಿಗೆ ಭಾರಿ ಬೇಡಿಕೆ ಇದೆ, ಫ್ಯಾಮಿಲಿ ಮ್ಯಾನ್ 2 ಸಕ್ಸಸ್ ಇಂದ ಹಿಂದಿ ಚಿತ್ರರಂಗದಲ್ಲಿ ಸಮಂತಾ ಅವರಿಗೆ ಬಹಳಷ್ಟು ಹೊಸ ಆಫರ್ ಗಳು ಹುಡುಕಿಕೊಂಡು ಬರುತ್ತಲಿದೆ. ಇತ್ತ ಸೌತ್ ನಲ್ಲಿ ಸಮಂತಾ ಅವರು ಹೊಸ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ಸುದ್ದಿ ಇಲ್ಲ, ಆದರೆ ಸಮಂತಾ ಅವರು ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಯಶೋಧ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಒಳ್ಳೆಯ ಮೆಚ್ಚುಗೆ ಗಳಿಸಿತು.
ಇತ್ತೀಚೆಗಷ್ಟೇ ಸಮಂತಾ ಅಭಿನಯದ ಮತ್ತೊಂದು ಸಿನಿಮಾ ಶಾಕುಂತಲಂ, ಇದರ ರಿಲೀಸ್ ಡೇಟ್ ಕೂಡ ಘೋಷಣೆ ಮಾಡಲಾಗಿತ್ತು. ನವೆಂಬರ್ 4ರಂದು ಶಾಕುಂತಲಂ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನಲಾಯಿತು. ಆದರೆ ಇದೀಗ ಸಮಂತಾ ಅವರ ಅಭಿಮಾನಿಗಳಿಗೆ ಶಾಕುಂತಲಂ ಸಿನಿಮಾ ತಂಡದ ಕಡೆಯಿಂದ ಒಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಶಾಕುಂತಲಂ ಸಿನಿಮಾ ನವೆಂಬರ್ 4ರಂದು ಬಿಡುಗಡೆ ಆಗುತ್ತಿಲ್ಲ, ಸಿನಿಮಾ ಬಿಡುಗರೆ ಪೋಸ್ಟ್ ಪೋನ್ ಆಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ನವೆಂಬರ್ 4ರ ಒಳಗೆ ಶಾಕುಂತಲಂ ಸಿನಿಮಾದ ವಿ.ಎಫ್.ಎಕ್ಸ್ ಮತ್ತು 3ಡಿ ಕೆಲಸಗಳನ್ನು ಮುಗಿಸಲು ಸಮಯ ಸಾಲದ ಕಾರಣ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ತಿಳಿಸಿದ ಚಿತ್ರತಂಡ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದೆ.
ಶಾಕುಂತಲಂ ಸಿನಿಮಾದಲ್ಲಿ ಮೊದಲ ಬಾರಿಗೆ ಸಮಂತಾ ಅವರು ಐತಿಹಾಸಿಕ ಪಾತ್ರದಲ್ಲಿ ನಟಿಸಿದ್ದಾರೆ. ಮೋಹನ್ ಬಾಬು, ಅಲ್ಲು ಅರ್ಜುನ್ ಅವರ ಮುದ್ದಿನ ಮಗಳು ಅಲ್ಲು ಅರ್ಹ ಸೇರಿದಂತೆ ಶಾಕುಂತಲಂ ಸಿನಿಮಾದಲ್ಲಿ ಒಳ್ಳೆಯ ತಾರಾಬಳಗ. ಸಮಂತಾ ಅವರು ವಿಚ್ಛೇದನ ಪಡೆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೊದಲ ಸಿನಿಮಾ ಆಗಿದೆ ಶಾಕುಂತಲಂ. ಹಾಗಾಗಿ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಸಮಂತಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು, ಆದರೆ ಈಗ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿರುವುದು ಬೇಸರ ತಂದಿದೆ. ಹೊಸ ರಿಲೀಸ್ ಡೇಟ್ ಅನ್ನು ಚಿತ್ರತಂಡ ತಿಳಿಸದೆ ಇರುವುದು ಇನ್ನು ಹೆಚ್ಚು ಆತಂಕಕ್ಕೆ ಕಾರಣವಾಗಿದೆ.