ರಶ್ಮಿಕಾ ಕ್ರೇಜ್ ಮತ್ತಷ್ಟು ಜಾಸ್ತಿ: ನನಗೆ ಎದೆ ಮೇಲೆ ಆಟೋಗ್ರಾಫ್ ಬೇಕು ಎಂದು ಪಟ್ಟು ಹಿಡಿದ ಅಭಿಮಾನಿ. ಕೊನೆಗೆ ಏನಾಯ್ತು ಗೊತ್ತೇ??
ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್. ಪುಷ್ಪ ಸಿನಿಮಾ ಸಕ್ಸಸ್ ಬಳಿಕ ರಶ್ಮಿಕಾ ಅವರ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ ಎನ್ನಬಹುದು. ರಶ್ಮಿಕಾ ಮಂದಣ್ಣ ಅವರು ಕನ್ನಡ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಈಗ ಕಾಲಿವುಡ್, ಬಾಲಿವುಡ್, ಟಾಲಿವುಡ್ ಎಲ್ಲಾ ಇಂಡಸ್ಟ್ರಿ ಗಳಲ್ಲು ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅವರು ಎಲ್ಲಾ ಭಾಷೆಯ ಸಿನಿಮಾಗಳಲ್ಲು ನಟಿಸುತ್ತಿರುವ ಕಾರಣ, ಮುಂಬೈ, ಹೈದರಾಬಾದ್ ಹೀಗೆ ಎಲ್ಲಾ ಕಡೆ ಓಡಾಡುತ್ತಿರುತ್ತಾರೆ. ಪ್ರಸ್ತುತ ರಶ್ಮಿಕಾ ಅವರು ಗುಡ್ ಬೈ ಸಿನಿಮಾ ಪ್ರೊಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಇದು ರಶ್ಮಿಕಾ ಅವರು ಹಿಂದಿಯಲ್ಲಿ ನಟಿಸಿರುವ ಎರಡನೇ ಸಿನಿಮಾ ಆಗಿದೆ, ಆದರೆ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಆಗಿದೆ.
ಈ ಸಿನಿಮಾದಲ್ಲಿ ರಶ್ಮಿಕಾ ಅವರು ಅಮಿತಾಭ್ ಬಚ್ಚನ್ ಅವರೊಡನೆ ತೆರೆಹಂಚಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಈಗ ದೊಡ್ಡ ಫ್ಯಾನ್ ಬೇಸ್ ಇರುವ ಕಾರಣ, ಅವರು ಎಲ್ಲಿಯೇ ಹೋದರು, ಅಭಿಮಾನಿಗಳು ರಶ್ಮಿಕಾ ಅವರನ್ನು ಸುತ್ತುವರೆಯುತ್ತಾರೆ., ಮೆಚ್ಚಿನ ನಟಿಯ ಜೊತೆಗೆ ಒಂದೇ ಒಂದು ಫೋಟೋ ತೆಗೆಸಿಕೊಂಡರೆ ಸಾಕು, ಒಂದೇ ಒಂದು ಸಾರಿ ಅವರನ್ನು ನೋಡಿ, ಆಟೋಗ್ರಾಫ್ ಪಡೆದರೆ ಸಾಕು ಎಂದು ಅಭಿಮಾನಿಗಳು ಕಾಯುತ್ತಿರುತ್ತಾರೆ. ರಶ್ಮಿಕಾ ಅವರು ಸಾರ್ವಜನಿಕವಾಗಿ ಏರ್ ಪೋರ್ಟ್ ಅಥವ ಇನ್ನೆಲ್ಲೇ ಕಾಣಿಸಿಕೊಳ್ಳಲಿ, ಜನರು ಅವರನ್ನು ಮುತ್ತಿಗೆ ಹಾಕುವುದನ್ನು ನೋಡಬಹುದು.
ಇದೀಗ ಮತ್ತೊಬ್ಬ ಅಭಿಮಾನಿ ರಶ್ಮಿಕಾ ಅವರಿಗೆ ಇದೇ ರೀತಿ ಮಾಡಿದ್ದಾರೆ. ಅಭಿಮಾನಿಯೊಬ್ಬ ರಶ್ಮಿಕಾ ಅವರೊಡನೆ ಫೋಟೋ ತೆಗೆಸಿಕೊಳ್ಳಬೇಕು ಎಂದು ಗೋಗರೆಯುತ್ತಾರೆ. ಆಗ ರಶ್ಮಿಕಾ ಅವರು ಫೋಟೋ ತೆಗೆಸಿಕೊಳ್ಳುತ್ತಾರೆ, ನಾನು ನಿಮ್ಮ ದೊಡ್ಡ ಫ್ಯಾನ್, ನೀವಂದ್ರೆ ತುಂಬಾ ಇಷ್ಟ ಎಂದು ಹೇಳಿದಾಗ, ರಶ್ಮಿಕಾ ಸಹ ಸಂತೋಷಪಡುತ್ತಾರೆ, ನಂತರ ಆ ಅಭಿಮಾನಿ ಆಟೋಗ್ರಾಫ್ ಬೇಕು ಎಂದು ಕೇಳುತ್ತಾನೇ, ರಶ್ಮಿಕಾ ಅವರು ಸರಿ ಅಂದ ನಂತರ, ತನ್ನ ಎದೆಯ ಮೇಲೆ ಆಟೋಗ್ರಾಫ್ ಹಾಕಲೇಬೇಕು ಎಂದು ಬಲವಂತ ಮಾಡಿದ್ದು, ಕೊನೆಗೆ ರಶ್ಮಿಕಾ ಅವರು ಆತನ ಎದೆಯ ಮ್ಸ್ಗೆ ಆಟೋಗ್ರಾಫ್ ಹಾಕಿದ್ದಾದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.