ಮತ್ತೊಮ್ಮೆ ರೊಚ್ಚಿಗೆದ್ದ ಸೈಕ್ ನವಾಜ್; ಬಿಗ್ ಬಾಸ್ ಮನೆಯಲ್ಲಿ ನವಾಜ್ ವಾರ್ನಿಂಗ್ ಗೆ ಬೆಚ್ಚಿದ ಮನೆ ಮಂದಿ. ಬಿಗ್ ಬಾಸ್ ಮನೆಯಲ್ಲಿ ಏನಾಗಿದೆ ಗೊತ್ತೇ??
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ 19 ವರ್ಷದ ಹುಡುಗ ನವಾಜ್ ಇದೀಗ ಮನೆಯ ಸದಸ್ಯರಿಗೆ ಭಯ ತರಿಸುವಂತಹ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈಗ ಜೋಡಿ ಟಾಸ್ಕ್ ನಡೆಯುತ್ತಿರುವುದರಿಂದ ಎಲ್ಲರೂ ಜೋಡಿಯಾಗಿ ಓಡಾಡಬೇಕಿದೆ. ಹೀಗಾಗಿ ನವಾಜ್ ಹಾಗು ಅರುಣ್ ಸಾಗರ್ ಅವರು ಜೋಡಿಯಾಗಿದ್ದಾರೆ. ಅರುಣ್ ಸಾಗರ್ ಅವರೊಡನೆ ಓಪನ್ ಅಪ್ ಆಗುತ್ತಿರುವ ನವಾಜ್ ತಮ್ಮ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ನಾನು ಸರಿಯಿಲ್ಲ. ನಮ್ಮ ಮನೆಯಲ್ಲಿ ನನ್ನನ್ನ ಒಂದು ದಿನವೂ ರಾತ್ರಿ ಸಮಯದಲ್ಲಿ ಒಬ್ಬನನ್ನೇ ಎಲ್ಲಿಗು ಕಳಿಸೋದಿಲ್ಲ.
ಪ್ರೀತಿ ಇರೋದ್ರಿಂದ ಆ ಥರಾ ಮಾಡ್ತಾರೆ ಅಂತ ಅಲ್ಲ.. ಅವರಿಗೆ ಭಯ ಇದೆ. ನಾನು ರಾತ್ರಿ ಎಲ್ಲಾದ್ರು ಒಬ್ಬನೇ ಹೋಗಿ, ಏನಾದರು ಕಿರಿಕ್ ಮಾಡ್ಕೊಂಡು ಜಗಳ ಮಾಡ್ಕೋತೀನಿ ಅಂತ ಭಯ ನಮ್ಮ ಅಪ್ಪ ಅಮ್ಮನಿಗೆ ಅದಕ್ಕೆ ನನ್ನ ರಾತ್ರಿ ಸಮಯದಲ್ಲಿ ಮನೆಯಿಂದ ಆಚೆ ಕಳಿಸಲ್ಲ. ಇಲ್ಲು ನನಗೆ ಕೆಲವರನ್ನ ನೋಡಿದ್ರೆ ತುಂಬಾ ಕೋಪ ಬರ್ತಿದೆ, ದರ್ಶ್, ಆರ್ಯವರ್ಧನ್ ಮತ್ತು ಇನ್ನು ಕೆಲವರನ್ನ ನೋಡಿದ್ರೆ ಹೊಡೀಬೇಕು ಅನ್ನಿಸ್ತಿದೆ ಆದರೆ ಕಂಟ್ರೋಲ್ ಮಾಡ್ಕೊಂಡು ಇದ್ದೀನಿ. ನಾನು ಮರಿಯಾದೆಗೆ ಭಯ ಪಡೋದಿಲ್ಲ, ನನಗೆ ಬೇಗ ಕೋಪ ಬರುತ್ತೆ..” ಎಂದು ನವಾಜ್ ಹೇಳಿಕೆ ನೀಡಿದ್ದಾರೆ.
ಇದರಿಂದ ಮನೆಯ ಕೆಲವು ಸದಸ್ಯರಿಗೆ ಆತಂಕ ಶುರುವಾಗಿದೆ, ಪ್ರಶಾಂತ್ ಸಂಬರ್ಗಿ ಅವರು ಸಹ ನವಾಜ್ ಅವರ ಈ ಮಾತುಗಳನ್ನ ಕೇಳಿ ಶಾಕ್ ಆಗಿದ್ದಾರೆ, ನವಾಜ್ ಹೇಳಿದ್ದು ಭಾಗ ತರಿಸಿತು ಎಂದಿದ್ದಾರೆ. ಹೊಡೀತೀನಿ ಅನ್ನೋದು ಸರಿಯಲ್ಲ, ಮೆಚೂರ್ಡ್ ಆಗಿ ಯೋಚನೇ ಮಾಡಿ ವರ್ತಿಸಬೇಕು ಇದು ಸರಿಯಿಲ್ಲ ಎಂದಿದ್ದಾರೆ ರಾಕೇಶ್. ನವಾಜ್ ಜಗಳ ಆಡಬೇಕು ಹೊಡೀಬೇಕು ಅಂತ ಕಾಯ್ತಿದ್ದಾನೆ ಎಂದಿದ್ದಾರೆ. ಒಟ್ಟಿನಲ್ಲಿ ಮೊದಲ ವಾರವೇ ನವಾಜ್ ಅವರು ಮನೆಯ ಸ್ಪರ್ಧಿಗಳಿಗೆ ಭಯ ತರಿಸಿದ್ದಾರೆ.