ಗುರು ಶಿಷ್ಯರು ಚಿತ್ರಕ್ಕೆ ಬಂದ ಪ್ರತಿಕ್ರಿಯೆ ನೋಡಿ, ಬಿಕ್ಕಿ ಬಿಕ್ಕಿ ಅತ್ತ ಶರಣ್ ಮಗ ಮತ್ತು ಪ್ರೇಮ್ ಮಗ ಯಾಕೆ ಗೊತ್ತೇ??
ಕನ್ನಡ ಚಿತ್ರರಂಗ ಈಗ ಎತ್ತರಕ್ಕೆ ಬೆಳೆಯುತ್ತಿದೆ, ಕ್ವಾಲಿಟಿ ಕಂಟೆಂಟ್ ಗಳನ್ನು ಕನ್ನಡ ಸಿನಿಮಾಗಳಲ್ಲಿ ನಾವು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಕನ್ನಡದ ಸಿನಿಮಾಗಳು ಹೊರ ರಾಜ್ಯಗಳಲ್ಲಿ ಸಹ ಮನ್ನಣೆ ಪಡೆಯುತ್ತಿದೆ. ಅದೇ ಸಾಲಿಗೆ ಈಗ ಗುರು ಶಿಷ್ಯರು ಸಿನಿಮಾ ಸಹ ಸೇರಿದೆ. ನಟ ಶರಣ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದಾಗಿದೆ, ಜಡೇಷಾ ಕೆ ಹಂಪಿ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದು, ತರುಣ್ ಸುಧೀರ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಶರಣ್ ಅವರು ಶಾಲೆಯ ಪಿಟಿ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ನಾಯಕಿಯಾಗಿ ನಿಷ್ವಿಕಾ ನಾಯ್ಡು ನಟಿಸಿದ್ದು, ಹಿರಿಯನಟ ದತ್ತಣ್ಣ ಹಾಗೂ ಇನ್ನಿತತರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಖೋ ಖೋ ಆಟದ ಮೇಲೆ ಕೇಂದ್ರೀಕರಿತವಾಗಿದ್ದು, ಶರಣ್ ಅವರ ಸ್ಟುಡೆಂಟ್ಸ್ ಪಾತ್ರದಲ್ಲಿ ಕನ್ನಡದ ಸ್ಟಾರ್ ಕಲಾವಿದರಾದ ಲವ್ಲಿ ಸ್ಟಾರ್ ಪ್ರೇಮ್ ಅವರ ಮಗ, ಶರಣ್ ಅವರ ಮಗ ಹಾಗೂ ಇನ್ನಿತತರು ಗುರು ಶಿಷ್ಯರು ಸಿನಿಮಾದಲ್ಲಿ ಅಭಿನಯಿಸಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕಳೆದ ಶುಕ್ರವಾದ ಸಿನಿಮಾ ಬಿಡುಗಡೆ ಆಗಿದ್ದು, ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾ ನೋಡಿದ ಸಿನಿಪ್ರಿಯರು ಕ್ರೀಡೆ ಬಗ್ಗೆ ಹೆಣೆದಿರುವ ಈ ಕಥೆಯನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿರುವುದನ್ನು ನೋಡಿ, ಇಡೀ ಚಿತ್ರತಂಡ ಸಂತೋಷ ಪಟ್ಟಿದೆ. ಅದರಲ್ಲೂ ನಟ ಶರಣ್ ಅವರ ಮಗ ಹಾಗೂ ನಟ ಪ್ರೇಮ್ ಅವರ ಮಗ ಇಬ್ಬರು ಸಹ ಭಾವುಕರಾಗಿ, ಏನು ಮಾತನಾಡಬೇಕು ಎಂದು ತಿಳಿಯದೆ ಕಣ್ಣೀರು ಹಾಕಿದ್ದಾರೆ. ಮೊದಲ ಸಿನಿಮಾಗೆ ಇಂತಹ ಪ್ರತಿಕ್ರಿಯೆ ಬಂದಿರುವುದು ಅವರಿಬ್ಬರಿಗೂ ಬಹಳ ಸಂತೋಷ ತಂದಿದೆ.