ಬಿಗ್ ಬಾಸ್ ಮನೆಗೆ ಖಡಕ್ ವಾರ್ನಿಂಗ್ ಕೊಟ್ಟ ಮಂಗಳ ಗೌರಿ ಖ್ಯಾತಿಯ ಕಾವ್ಯಶ್ರೀ: ಏನಂದ್ರು ಗೊತ್ತೇ??
ಬಿಗ್ ಬಾಸ್ ಕನ್ನಡ ಸೀಸನ್9 ಶೋಗೆ ನಿನ್ನೆ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿ 18 ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿಕೊಟ್ಟಿರುವ ಪ್ರೀಮಿಯರ್ ಎಪಿಸೋಡ್ ನಿನ್ನೆ ಸಂಜೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದು, 18 ಸ್ಪರ್ಧಿಗಳು ಈಗ ಬಿಗ್ ಬಾಸ್ ಮನೆಯ ವಾಸವನ್ನು ಶುರು ಮಾಡಿದ್ದಾರೆ. ಬಿಬಿಕೆ9 ಗೆ 17ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟವರು ಮಂಗಳಗೌರಿ ಮದುವೆ ಧಾರವಾಹಿ ಖ್ಯಾತಿಯ ಕಾವ್ಯಶ್ರೀ ಗೌಡ, ಇವರು ಸ್ಟೇಜ್ ಮೇಲೆ ಹೇಳಿದ್ದೇನು ಗೊತ್ತಾ?
ಕಾವ್ಯಶ್ರೀ ಗೌಡ ಮೂಲತಃ ಚೆನ್ನಪಟ್ಟಣದವರು, ಚಿಕ್ಕ ವಯಸ್ಸಿನಿಂದಲು ಸಿನಿಮಾ ಹೀರೋಯಿನ್ ಆಗಬೇಕು ಎಂದು ಕನಸು ಕಂಡಿದ್ದ ಹುಡುಗಿ, ಜರ್ನಲಿಸಂ ಓದಿ, ಟಿವಿ ಶೋಗಳಿಗೆ ಎಂಟ್ರಿ ಕೊಟ್ಟು, ನಂತರ ಕಿರುತೆರೆ ಲೋಕಕ್ಕೆ ಬಂದರು. ಮಂಗಳಗೌರಿ ಮದುವೆ ಧಾರವಾಹಿಯಿಂದ ಕಾವ್ಯಶ್ರೀ ಗೌಡ ಗುರುತಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಬಹಳ ಮಾಡರ್ನ್ ಆಗಿದ್ದಾಈ. ಮಂಗಳಗೌರಿ ಧಾರವಾಹಿ 3000 ಎಪಿಸೋಡ್ ಪ್ರಸಾರವಾಗಿದೆ. ಮಂಗಳಗೌರಿ ಮದುವೆ ಧಾರವಾಹಿ ಇಂದ ಈ ನಟಿ ಟ್ರೋಲ್ ಆಗಿದ್ದು ಉಂಟು, ಇದೆಲ್ಲದರ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಕಾವ್ಯಶ್ರೀ ಗೌಡ ಹೇಳಿದ್ದು ಹೀಗೆ..
“ಮಂಗಳಗೌರಿ ಮದುವೆ ಧಾರವಾಹಿ 3000 ಎಪಿಸೋಡ್ ಕಂಪ್ಲೀಟ್ ಮಾಡಿದೆ, ಜನರಿಂದ ತುಂಬಾ ಪ್ರೀತಿ ಸಿಕ್ಕಿದೆ..ಕೆಲವರು ಟ್ರೋಲ್ ಸಹ ಮಾಡಿದರು. ನಿಜ ಜೇವನದಲ್ಲಿ ನನಗೆ ಧೈರ್ಯ ಇಲ್ಲ. ಆದರೆ ಧಾರವಾಹಿಯಲ್ಲಿ, ಒಂದು ಸಾರಿ ಹೊಡೆದರು ಅಲ್ಲಿದ್ದವರು ಹಾರಿ ಬೀಳ್ತಿದ್ರು. ಜನರಿಂದ ಟ್ರೋಲ್ ಆದರು ಕೂಡ ಅದನ್ನೆಲ್ಲ ತಲೆಯಲ್ಲಿ ಇಟ್ಟುಕೊಳ್ಳದೆ ಕೆಲಸ ಮಾಡಿದ್ದೀನಿ. ನಾನು ನಿಜ ಜೀವನದಲ್ಲೂ ಮಂಗಳಗೌರಿ ಅಂದುಕೊಂಡು ಕೆಲವು ಜನ ನೀನು ತುಂಬಾ ಮುಗ್ಧೆ, ಕಂದ ಅಂತ ಬೈದಿದ್ದು ಇದೆ. ಅಳುಮುಂಜಿ ಪಾತ್ರಗಳಿಗೆ ಹೆಚ್ಚು ಆಫರ್ ಗಳು ಬರ್ತಿವೆ. ನಾನು ಎಲ್ಲಾ ರೀತಿಯ ಪಾತ್ರಗಳಲ್ಲು ನಟಿಸುತ್ತೇನೆ. ನಮ್ಮಮ್ಮ ತುಂಬಾ ಸ್ಟ್ರಾಂಗ್, ನಾನು ಅವರಿಂದಲೇ ಸ್ಟ್ರಾಂಗ್ ಆಗಿದ್ದೇನೆ..” ಎಂದು ಕಿಚ್ಚನ ಎದುರು ಹೇಳಿದ್ದಾರೆ ಕಾವ್ಯಶ್ರೀ ಗೌಡ.