ಎಲ್ಲರ ಲೆಕ್ಕಾಚಾರಗಳು ಉಲ್ಟಾ: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವಿನ್ನರ್ ಆದ ಸಧ್ವಿನ್ – ಶಾರಿಕಾ ಅವರಿಗೆ ಸಿಕ್ಕ ಒಟ್ಟು ಹಣ ಎಷ್ಟು ಗೊತ್ತಾ??
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್. ನಿನ್ನೆಯಷ್ಟೇ ಈ ಶೋನ 6ನೇ ಸೀಸನ್ ಫಿನಾಲೆ ನಡೆದಿದೆ. ಡಿಕೆಡಿ ಶೋ ಈ ವರ್ಷ ಬಹಳ ಸ್ಪೆಶಲ್ ಆಗಿತ್ತು, ಅದಕ್ಕೆ ಕಾರಣ ಶಿವಣ್ಣ ಅವರು ಡಿಕೆಡಿ ಶೋಗೆ ಜಡ್ಜ್ ಆಗಿ ಬಂದಿದ್ದು. ಶಿವಣ್ಣ ಅವರು ಬಂದ ಬಳಿಕ ಈ ಶೋ ರಂಗು ಮೆರುಗು ಎಲ್ಲವೂ ಹೆಚ್ಚಾಯಿತು. ಇನ್ನು ಈ ಸೀಸನ್ ನಲ್ಲಿ ಕರ್ನಾಟಕದ ಮೂಲೆ ಮೂಲೆಗಳಿಂದ ಅದ್ಭುತವಾಗಿ ಡ್ಯಾನ್ಸ್ ಮಾಡುವ ಪ್ರತಿಭೆಗಳನ್ನು ಹುಡುಕಿ ಕರೆತರಲಾಗಿತ್ತು.
ಇದೀಗ ಈ ಶೋ ಮುಕ್ತಾಯವಾಗಿದೆ. 7 ಜೋಡಿಗಳು ಫಿನಾಲೆಗೆ ಸೆಲೆಕ್ಟ್ ಆಗಿದ್ದರು. ಅವರಲ್ಲಿ ಮೂವರು ವಿನ್ನರ್ ಗಳಾಗಿದ್ದಾರೆ. ಡಿಕೆಡಿ ಶೋ ವಿನ್ನರ್ ಯಾರಾಗಬಹುದು? ಪವರ್ ಟ್ರೋಫಿ ಯಾರಿಗೆ ಸಿಗಬಹುದು ಎನ್ನುವ ಕುತೂಹಲಕ್ಕೆ ಈಗ ಉತ್ತ ಸಿಕ್ಕಿದೆ. ಪುಟ್ಟ ಮಕ್ಕಳಾದ ಪ್ರಣಮ್ಯ ಮತ್ತು ದಕ್ಷಿತ್ ಗೌಡ ಜೋಡಿ ಫಿನಾಲೆವರೆಗೂ ಬಂದು ನಿನ್ನೆಯ ಫಿನಾಲೆ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದಾರೆ. ಇನ್ನು ಶಾರಿಕ ಮತ್ತು ಸಧ್ವಿನ್ ಹಾಗೂ ಮಹೇಶ್ ಚಾಹತ್ ಈ ಇಬ್ಬರಲ್ಲಿ ವಿನ್ನರ್ ಯಾರಾಬಹುದು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಶಾರೀಕ ಮತ್ತು ಸಧ್ವಿನ್ ಜೋಡಿ ವಿನ್ನರ್ ಗಳಾಗಿ ಗೆದ್ದಿದ್ದಾರೆ. ಈ ಜೋಡಿಗೆ ವಿನ್ನರ್ ಗಳಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇರುವ ಟ್ರೋಫಿ ಸಿಕ್ಕಿದೆ, ಜೊತೆಗೆ 20 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ಸಹ ಸಿಕ್ಕಿದ್ದು, ಅದರಲ್ಲಿ ಟ್ಯಾಕ್ಸ್ ಗಾಗಿ 6 ಲಕ್ಷ ರೂಪಾಯಿ ಕಟ್ ಮಾಡಿ, 14 ಲಕ್ಷ ರೂಪಾಯಿ ನೀಡಲಾಗಿದೆ. ಈ ಜೋಡಿ ಮೊದಲ ಸಂಚಿಕೆಯಿಂದಲು ಅದ್ಭುತವಾದ ಪರ್ಫಾರ್ಮೆನ್ಸ್ ಮೂಲಕ ಜಡ್ಜ್ ಗಳು ಹಾಗೂ ವೀಕ್ಷಕರು ಫಿದಾ ಆಗುವ ಹಾಗೆ ಮಾಡುತ್ತಿದ್ದರು. ಇದೀಗ ಇವರು ವಿನ್ನರ್ ಆಗಿರುವುದು ಎಲ್ಲರಿಗು ಬಹಳ ಸಂತೋಷ ತಂದಿದೆ.