ನನ್ನಮ್ಮ ಸೂಪರ್ ಸ್ಟಾರ್ ಎರಡನೇ ಸೀಸನ್ ಗೆ ಮಹತ್ವದ ಬದಲಾವಣೆ: ನಿರೂಪಕಿ ಯಾರಂತೆ ಗೊತ್ತೇ?? ಅದೃಷ್ಟ ಕುಲಾಯಿಸಿದ್ದು ಯಾರಿಗೆ ಗೊತ್ತೆ??
ವಂಶಿಕಾ ಅಂಜನಿ ಕಶ್ಯಪ ಕನ್ನಡ ಕಿರುತೆರೆಯಲ್ಲಿ ಬಹಳ ಚಿಕ್ಕ ವಯಸ್ಸಿಗೆ ಯಶಸ್ಸು ಸಾಧಿಸಿರುವ ಪುಟ್ಟ ಮಗು ಆಗಿದ್ದಾಳೆ. ಕನ್ನಡದ ಖ್ಯಾತ ಹಾಸ್ಯನಟ ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿ ದಂಪತಿಯ ಮುದ್ದಿನ ಮಗಳ ವಂಶಿಕಾ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ವಂಶಿಕಾ ಕಿರುತೆರೆಗೆ ಎಂಟ್ರಿ ಕೊಟ್ಟು, ಪಟಪಟ ಮಾತಿನಿಂದ ಕಿರತೆರೆ ವೀಕ್ಷಕರ ಪ್ರೀತಿ ಗಳಿಸಿಕೊಂಡಳು. ನನ್ನಮ್ಮ ಸೂಪರ್ ಸ್ಟಾರ್ ಶೋ ವಿನ್ನರ್ ಸಹ ಆದರು ವಂಶಿಕಾ ಮತ್ತು ಯಶಸ್ವಿನಿ ಆನಂದ್.
ಬಳಿಕ ಗಿಚ್ಚಿ ಗಿಲಿ ಗಿಲಿ ಶೋ ಮೂಲಕ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಟ್ಟರು. ಈ ಶೋನಲ್ಲಿ ವಂಶಿಕಾ ಅಭಿನಯವನ್ನು ನೋಡಿ ಮಾರುಹೋಗದವರಿಲ್ಲ. ಜಡ್ಜ್ ಗಳು ವಂಶಿ ಅಭಿನಯ ನೋಡಿ ಫಿದಾ ಆಗಿದ್ದರು. ಹಿರಿಯನಟಿ ಶ್ರುತಿ ಅವರಂತು ವಂಶಿಕಾಳ ಬಗ್ಗೆ ಬಹಳಷ್ಟು ಸಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಶೋಗೆ ಬರುವ ಗೆಸ್ಟ್ ಗಳು ಸಹ, ವಂಶಿಕಾಳ ಅಭಿನಯಕ್ಕೆ ಫಿದಾ ಆಗುತ್ತಿದ್ದರು. ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಸಹ ವಂಶಿಕಾ ವಿನ್ನರ್ ಆಗಿದ್ದಾಳೆ. ಇದಾದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಸಿನಿಮಾಗಳಲ್ಲಿ ಸಹ ಮಿಂಚಲು ರೆಡಿ ಆಗಿದ್ದಾಳೆ ಈ ಮುದ್ದು ಹುಡುಗಿ.

ಖ್ಯಾತ ನಟ ವಸಿಷ್ಠ ಸಿಂಹ ಅವರ ಲವ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಇಷ್ಟೇ ಅಲ್ಲದೆ, ಇದೀಗ ಮತ್ತೊಮ್ಮೆ ವಂಶಿಕಾ ಕಿರುತೆರೆಗೆ ಬರಲು ಸಜ್ಜಾಗಿದ್ದಾಳೆ, ಇನ್ನೇನು ಕೆಲವೇ ದಿನಗಳಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಸೀಸನ್2 ಶುರುವಾಗಲಿದ್ದು, ಈ ಶೋ ನಿರೂಪಣೆ ಮಾಡುವುದು ವಂಶಿಕಾ ಎಂದು ಹೇಳಲಾಗುತ್ತಿದೆ. ಬಾಲ ಕಲಾವಿದೆಯಾಗಿ ಮಿಂಚಿದ್ದ ವಂಶಿಕಾ, ಇದೀಗ ನಿರೂಪಣೆಯಲ್ಲಿ ಸಹ ಮಿಂಚಲು ತಯಾರಾಗಿದ್ದು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ವಂಶಿಕಾ ನಿರೂಪಣೆ ಇಂದ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.