ಕಾಂತಾರ ಸಿನೆಮಾಗೆ ನಿಜಕ್ಕೂ ಅಪ್ಪು ರವರು ಆಯ್ಕೆ ಯಾಗಿದ್ದರೇ?? ಕೊನೆಗೂ ಸತ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತೇ??
ಚಂದನವನದಲ್ಲಿ ತಯಾರಾಗಿರುವ ಮತ್ತೊಂದು ಬಹು ನಿರೀಕ್ಷಿತ ಪ್ರಯೋಗಾತ್ಮಕ ಸಿನಿಮಾ ಕಾಂತಾರ. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ರಿಷಬ್ ಶೆಟ್ಟಿ ಅವರು ಸಿನಿಮಾ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ್ದಾರೆ. ಮುಂದಿನ ವಾರ ಸಿನಿಮಾ ಬಿಡುಗಡೆ ಆಗಲಿದ್ದು, ಈಗಾಗಲೇ ಕಾಂತಾರ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಸಿನಿಪ್ರಿಯರನ್ನು ಇಂಪ್ರೆಸ್ ಮಾಡಿದೆ. ಸಿನಿಮಾ ತಂಡ ಪ್ರೊಮೋಷನ್ ಕೆಲಸಗಳಲ್ಲಿ ಬ್ಯುಸಿ ಆಗಿದೆ. ಕಾಂತಾರ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲು ಇದೀಗ ಕಾಂತಾರ ಸಿನಿಮಾ ಬಗ್ಗೆ ಸುದ್ದಿಯೊಂದು ಕೇಳಿಬಂದಿದೆ..
ಅದೇನೆಂದರೆ, ಕಾಂತಾರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರು ನಟಿಸಬೇಕಿತ್ತು, ಈ ಸಿನಿಮಾವನ್ನು ಪ್ರತ್ಯೇಕ ಕಾಲಘಟ್ಟದಲ್ಲಿ ಚಿತ್ರೀಕರಣ ಮಾಡಬೇಕಿದ್ದ ಕಾರಣ, ಕಾಂತಾರ ಸಿನಿಮಾಗೆ ಪುನೀತ್ ಅವರ ಡೇಟ್ಸ್ ಸಮಸ್ಯೆ ಇಂದಾಗಿ ರಿಷಬ್ ಶೆಟ್ಟಿ ಅವರೇ ನಟಿಸಲಿ ಎಂದು ಅಪ್ಪು ಅವರೇ ಸಲಹೆ ನೀಡಿದರು ಎಂದು ಕಾಂತಾರ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ತಿಳಿಸಿದ್ದರು. ಇದೇ ವಿಚಾರದ ಬಗ್ಗೆ ರಿಷಬ್ ಶೆಟ್ಟಿ ಅವರನ್ನು ಸಹ ಪ್ರೊಮೋಶನ್ ನ ಒಂದು ಇಂಟರ್ವ್ಯೂ ನಲ್ಲಿ ಕೇಳಲಾಗಿದ್ದು, ಅಸಲಿ ವಿಷಯ ಏನು ಎಂದು ತಿಳಿಸಿದ್ದಾರೆ..
“ಸಿನಿಮಾ ಕಥೆ ಬರೆಯುವಾಗ ನಾಯನ ಶಿವ ಪಾತ್ರದಲ್ಲಿ ನಟಿಸೋದು ನಾನೇ ಅಂತ ಬರೆದಿದ್ದೆ.. ಹೊಂಬಾಳೆ ಪ್ರೊಡಕ್ಷನ್ಸ್ ಜೊತೆಗೆ ಮಾತುಕತೆ ನಡೆಯುವಾಗ, ಈ ಪಾತ್ರದಲ್ಲಿ ಸ್ಟಾರ್ ನಟ ಅಭಿನಯಿಸುವುದಾದರೆ ಯಾರು ಸೂಟ್ ಆಗ್ತಾರೆ ಅಂತ ವಿಜಯ್ ಸರ್ ಕೇಳಿದ್ರು..ಈ ಸಿನಿಮಾದಲ್ಲಿ ಆಕ್ಷನ್ ಸೀಕ್ವೆನ್ಸ್, ಕಂಬಳ ದೃಶ್ಯ ಎಲ್ಲ ಇರೋದ್ರಿಂದ, ಅಪ್ಪು ಸರ್ ಆದ್ರೆ ಚೆನ್ನಾಗಿರುತ್ತೆ ಅನ್ನಿಸುತ್ತೆ. ತಕ್ಷಣ ಅಪ್ಪು ಸರ್ ಗೆ ಕಾಲ್ ಮಾಡಿ ಹೇಳಿದ್ರು, ಅಪ್ಪು ಸರ್ ಬಂದು ಕಥೆ ಕೇಳಿ, ಈ ಥರ ವಿಭಿನ್ನ ಸಿನಿಮಾದಲ್ಲಿ ನಟಿಸೋಕೆ ಸಂತೋಷ ಆಗುತ್ತೆ ಅಂತ ಸಿನಿಮಾ ಒಪ್ಪಿಕೊಂಡರು. ಆದರೆ ಈ ಸಿನಿಮಾನ ಚಳಿಗಾಲ, ಮಳೆಗಾಲ, ಬೇಸಿಗೆಕಾಲದಲ್ಲಿ ಚಿತ್ರೀಕರಣ ಮಾಡಬೇಕಿತ್ತು, ಅಪ್ಪು ಸರ್ ಆಗ ಜೇಮ್ಸ್ ಮತ್ತು ದ್ವಿತ್ವ ಸಿನಿಮಾದಲ್ಲಿ ಬ್ಯುಸಿ ಆಗಿದ್ರು, ಅಪ್ಪು ಸರ್ ಡೇಟ್ಸ್ ಇಲ್ಲದೆ ಇದ್ದಿದ್ರಿಂದ, ನಾನು ನಟಿಸೋಕೆ ಇನ್ನು 1 ವರ್ಷ ಆಗುತ್ತೆ, ನೀವೇ ನಟಿಸಿಬಿಡಿ ರಿಷಬ್..ಅಂತ ಅಪ್ಪು ಸರ್ ಹೇಳಿದ್ರು.. ಎಂದು ಈ ವಿಷಯದ ಬಗ್ಗೆ ಕ್ಲಾರಿಟಿ ನೀಡಿದ್ದಾರೆ ನಟ ನಿರ್ದೇಶಕ ರಿಷಬ್ ಶೆಟ್ಟಿ.