ನನ್ನಮ್ಮ ಸೂಪರ್ ಷೋ ಕಾರ್ಯಕ್ರಮದ ನಿರೂಪಕರಲ್ಲಿ ಮತ್ತೊಮ್ಮೆ ಬದಲಾವಣೆ: ಈ ಬಾರಿಯೂ ಅನುಪಮಾ ಅಲ್ಲ. ಮತ್ಯಾರು ಗೊತ್ತೇ??

53

Get real time updates directly on you device, subscribe now.

ನನ್ನಮ್ಮ ಸೂಪರ್ ಸ್ಟಾರ್, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಶೋ ಬಹಳ ಯಶಸ್ವಿಯಾಗಿತ್ತು, ಅಮ್ಮ ಮಗುವಿನ ನಡುವೆ ಇರುವ ಬಾಂಧವ್ಯವನ್ನು ಹೆಚ್ಚು ಮಾಡಿದ್ದ ಶೋ ಇದು. ಮೊದಲ ಸೀಸನ್ ನಲ್ಲಿ ಯಶಸ್ವಿನಿ ಆನಂದ್ ಹಾಗೂ ವಂಶಿಕಾ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 1 ವಿನ್ನರ್ ಆಗಿದ್ದರು. ಇದೀಗ ಎರಡನೇ ಸೀಸರ್ ಶುರುವಾಗಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಕಳೆದ ವಾರವಷ್ಟೇ ಗಿಚ್ಚಿ ಗಿಲಿ ಗಿಲಿ ಶೋ ಫಿನಾಲೆ ನಡೆದಿದ್ದು, ಇನ್ನೇನು ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಶುರುವಾಗಲಿದೆ.

ಈ ಶೋ ನಿರೂಪಣೆ ಮಾಡುವುದು ಯಾರು ಎನ್ನುವ ಚರ್ಚೆ ಸಹ ಶುರುವಾಗಿದೆ. ಮೊದಲ ಸೀಸನ್ ಅನ್ನು ಅನುಪಮಾ ಗೌಡ ನಿರೂಪಣೆ ಮಾಡಿದ್ದರು, ರಾಜ ರಾಣಿ ಶೋ ಮೊದಲ ಸೀಸನ್ ಸಹ ಅನುಪಮಾ ಗೌಡ ಅವರೇ ನಿರೂಪಣೆ ಮಾಡಿದ್ದರು. ಆದರೆ ರಾಜ ರಾಣಿ ಸೀಸನ್ 2 ನಿರೂಪಣೆಯನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡಲಿಲ್ಲ, ಕಾರಣಾಂತರಗಳಿಂದ ರಿಯಾಲಿಟಿ ಶೋ ಇಂದ ದೂರ ಉಳಿದರು. ಇದೀಗ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಸಹ ಅನುಪಮಾ ಗೌಡ ಅವರು ನಿರೂಪಣೆ ಮಾಡುವುದಿಲ್ಲ ಎನ್ನಲಾಗುತ್ತಿದೆ. ಅನುಪಮಾ ಅವರ ಬದಲಾಗಿ ನಿರಂಜನ್ ದೇಶಪಾಂಡೆ ಈ ಶೋ ನಿರೂಪಣೆ ಮಾಡಲಿದ್ದಾರೆ.

ನಿರಂಜನ್ ಅವರು ಈ ಮೊದಲು ಗಿಚ್ಚಿ ಗಿಲಿ ಗಿಲಿ ಶೋ ನಿರೂಪಣೆ ಮಾಡಿದ್ದರು, ಈ ಶೋ ಯಶಸ್ವಿಯಾಗಿ ಮುಗಿದಿದೆ. ಇದೀಗ ನನ್ನಮ್ಮ ಸೂಪರ್ ಸ್ಟಾರ್ ಶೋ ಅನ್ನು ಸಹ ನಿರಂಜನ್ ಅವರೇ ನಿರೂಪಣೆ ಮಾಡುತ್ತಿದ್ದಾರೆ. ಈಗಾಗಲೇ ನಿರಂಜನ್ ಅವರೊಡನೆ ಪ್ರೊಮೋಶೂಟ್ ಸಹ ನಡೆದಿದ್ದು, ಶೀಘ್ರದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೋಮೋ ಪ್ರಸಾರವಾಗಲಿದೆ. ಈ ಬಾರಿ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಸೆಲೆಬ್ರಿಟಿ ಅಮ್ಮ ಮಗು ಮಾತ್ರವಲ್ಲ ಸಾಮಾನ್ಯ ಜನರಿಗೂ ಅವಕಾಶ ಕೊಡಲಾಗಿದ್ದು, ಈ ಹೊಸ ಕಾನ್ಸೆಪ್ಟ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Get real time updates directly on you device, subscribe now.