ಉಪೇಂದ್ರ ಹಾಗೂ ಸುದೀಪ್ ರವರು ಎಂಟ್ರಿ ಕೊಟ್ಟ ರೇಂಜಿಗೆ ಪಾನ್ ಇಂಡಿಯಾ ನಡುಕ: ಏನಾಗುತ್ತಿದೆ ಗೊತ್ತೇ??
ಕಬ್ಜ ಸಿನಿಮಾ ಟೀಸರ್ ಉಪೇಂದ್ರ ಅವರ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆಯಾಗಿ ಇಂದು ಭಾರಿ ಸದ್ದು ಮಾಡುತ್ತಿದೆ. ಕಬ್ಜ ಟೀಸರ್ ನೋಡಿ ಸಿನಿ ಪ್ರಿಯರು ಫಿದಾ ಆಗಿದ್ದು, ಕನ್ನಡ ಇಂಡಸ್ಟ್ರಿಯಿಂದ ಮತ್ತೊಂದು ದೊಡ್ಡ ಮಟ್ಟದ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. ಉಪೇಂದ್ರ ಅವರು ಹಾಗೂ ಕಿಚ್ಚ ಸುದೀಪ್ ಅವರನ್ನು ಜೊತೆಯಾಗಿ ಥಿಯೇಟರ್ ನಲ್ಲಿ ನೋಡಿ ಸಿನಿಪ್ರಿಯರು ಹುಚ್ಚೆದ್ದು ಕುಣಿಯುವುದು ಖಂಡಿತ. ಒಂದೇ ಒಂದು ಟೀಸರ್ ಯೂಟ್ಯೂಬ್ ನಲ್ಲಿ 2.5 ಕೋಟಿಗಿಂತ ಹೆಚ್ಚು ವೀಕ್ಷಣೆ ಮೀರಿ ಸಾಗುತ್ತಿದೆ.
ಈ ಸಿನಿಮಾಗೆ ಕನ್ನಡ ಮಾತ್ರವಲ್ಲದೆ ತೆಲುಗು ತಮಿಳು ಹಾಗೂ ನಾರ್ತ್ ಇಂಡಿಯಾನಲ್ಲೂ ಬೇಡಿಕೆ ಹೆಚ್ಚಾಗಿದೆ. ಸಿನಿಮಾ ಮಾತ್ರವಲ್ಲದೆ ಟೀಸರ್ ಬಂದ ಬಳಿಕ ನಿರ್ದೇಶಕ ಆರ್.ಚಂದ್ರು ಅವರಿಗೂ ಬೇಡಿಕೆ ಹೆಚ್ಚಾಗಿದೆ. ಟೀಸರ್ ನೋಡಿದ ಹಲವು ಜನರು ಆರ್.ಚಂದ್ರು ಅವರು ಹುಡುಕಿಕೊಂಡು ಫೋನ್ ಮಾಡುತ್ತಿದ್ದಾರಂತೆ. ನಾರ್ತ್ ಇಂಡಿಯಾದಲ್ಲಿ, ಯು.ಎಸ್ ನಲ್ಲಿ, ಬೇರೆ ದೇಶಗಳಲ್ಲಿ ಕಬ್ಜ ಸಿನಿಮಾವನ್ನ ನಾವು ಬಿಡುಗಡೆ ಮಾಡಿಕೊಡ್ತೀವಿ ಎನ್ನುತ್ತಿದ್ದಾರಂತೆ, ತೆಲುಗು ಮತ್ತು ತಮಿಳಿನಲ್ಲಿ ಸಹ ಡಿಸ್ಟ್ರಿಬ್ಯುಟರ್ಸ್ ಸಿನಿಮಾ ಪಡೆಯಲು ದುಂಬಾಲು ಬಿದ್ದಿದ್ದಾರಂತೆ. ಚಂದ್ರು ಅವರಿಗೆ ಸಾಕಷ್ಟು ಫೋನ್ ಗಳು ಹಾಗೂ ಮೆಸೇಜ್ ಗಳು ಸಹ ಬರುತ್ತಿದೆಯಂತೆ.
ಇಷ್ಟೇ ಅಲ್ಲದೆ, ಚಂದ್ರು ಅವರಿಗೆ ತಮಿಳಿನ ಸ್ಟಾರ್ ನಟರೊಬ್ಬರು ಕರೆಮಾಡಿ, ಕಬ್ಜ ಟೀಸರ್ ಬಗ್ಗೆ ಹೊಗಳಿ ಯಾವುದಾದರು ಕಥೆ ಇದ್ರೆ ಹೇಳಿ ಮಾಡೋಣ ಎಂದು ಹೊಸ ಅಫರ್ ಸಹ ನೀಡಿದ್ದಾರಂತೆ, ಆದರೆ ಸಧ್ಯಕ್ಕೆ ಕಬ್ಜ ಸಿನಿಮಾದಲ್ಲಿ ಬ್ಯುಸಿ ಇರುವ ಚಂದ್ರು ಅವರು, ಆಫರ್ ಅನ್ನು ನಯವಾಗಿ ಬದಿಗಿಟ್ಟು, ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿದ್ದಾರಂತೆ. ಕಬ್ಜ ಸಿನಿಮಾ ಸಾಗುತ್ತಿರುವ ಹಾದಿ ನೋಡಿದರೆ, ಆರ್.ಚಂದ್ರು ಅವರು ಕೂಡ ಪ್ರಶಾಂತ್ ನೀಲ್ ಅವರ ಹಾಗೆ ಬೇರೆ ಭಾಷೆಗಳಲ್ಲಿ ಬ್ಯುಸಿ ಆಗುವ ಹಾಗೆ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ ಆಗಿಬಿಡುತ್ತಾರಾ ಎನ್ನುವ ಸಣ್ಣ ಗೊಂದಲ ಸಹ ಶುರುವಾಗಿದೆ.