ತೆರೆಯ ಮೇಲೆ ನಟಿಗಿಂತ ಹೆಚ್ಚಾಗಿ ಸದ್ದು ಮಾಡುವ ಪೋಷಕ ನಟಿ ನಧಿಯ ರವರ ನಿಜ ಜೀವನ ಹೇಗಿದೆ ಗೊತ್ತೇ??

28

Get real time updates directly on you device, subscribe now.

ಟಾಲಿವುಡ್ ಪ್ರೇಕ್ಷಕರಿಗೆ ನಟಿ ನದಿಯಾ ಅವರ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ನದಿಯಾ ಅವರು ನಟಿಯಾಗಿ ಉತ್ತಮ ಖ್ಯಾತಿ ಪಡೆದಿದ್ದಾರೆ. ನದಿಯಾ ಅವರ ನಿಜವಾದ ಹೆಸರು ಜರೀನಾ, ಆಕೆ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ನದಿಯಾ ಅವರು ಮೊದಲ ಬಾರಿಗೆ ತಮಿಳು ಸಿನಿಮಾ ಇಂದ ಚಿತ್ರರಂಗಕ್ಕೆ ಪ್ರವೇಶಿಸಿದರು. ನಂತರ ತೆಲುಗು ಸಿನಿಮಾಗಳಲ್ಲೂ ನಟಿಸಿದರು. ನಟಿ ನದಿಯಾ ಒಂದು ಕಾಲದಲ್ಲಿ ಹೀರೋಯಿನ್ ಆಗಿ ಮಿಂಚಿದವರು. ಮದುವೆ ನಂತರ ಸ್ವಲ್ಪ ಸಮಯ ಗ್ಯಾಪ್ ಕೊಟ್ಟು, ರೀ ಎಂಟ್ರಿ ಕೊಟ್ಟ ನದಿಯಾ ಅವರು ಅತ್ತೆ ಹಾಗು ಅಮ್ಮನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.

ಮಿರ್ಚಿ ಸಿನಿಮಾದಲ್ಲಿ ನಟ ಪ್ರಭಾಸ್ ಅವರ ತಾಯಿಯಾಗಿ. ಅತ್ತಾರಿಂಟಿಕಿ ದಾರೇದಿ ಸಿನಿಮಾದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಅತ್ತೆಯಾಗಿ ಪ್ರೇಕ್ಷಕರ ಮನಗೆದ್ದರು. ವೃತ್ತಿ ಜೀವನದ ಆರಂಭದಲ್ಲಿ ಹೀರೋಯಿನ್ ಆಗಿ ನಟಿಸಿದ್ದರೂ ಈಗಿನ ಪೋಷಕ ಪಾತ್ರಗಳು ಅವರಿಗೆ ವಿಶೇಷ ಮನ್ನಣೆ ತಂದುಕೊಟ್ಟಿವೆ ಎನ್ನಬಹುದು. ದೃಶ್ಯ ಸಿನಿಮಾದಪಾತ್ರಕ್ಕಾಗಿ ನದಿಯಾ ಅವರು ಉತ್ತಮ ಅಂಕ ಪಡೆದರು. ನದಿಯಾ ಅವರ ನಟನೆ ಕಟ್ಟುನಿಟ್ಟಾಗಿ ಕಾಣುತ್ತವೆ. ಇದಲ್ಲದೆ, ಅವರು ಅತ್ತಾರಿಂಟಿಕಿ ದಾರೇದಿ ಸಿನಿಮಾಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದಿದ್ದಾರೆ. ಇನ್ನು ನದಿಯಾ ಅವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ.

ನಟಿ ನದಿಯಾ ಅವರು ಅವರು 1988 ರಲ್ಲಿ ಹೂಡಿಕೆ ಬ್ಯಾಂಕರ್ ಶಿರೀಷ್ ಗೋಡ್ಬೋಲೆ ಅವರೊಡನೆ ಮದುವೆಯಾದ ಬಳಿಕ ವಿದೇಶದಲ್ಲಿ ನೆಲೆಸಿದರು. ನದಿಯಾ ಅವರಿಗೆ ಸನಮ್ ಮತ್ತು ಜಾನ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ದೊಡ್ಡ ಮಕ್ಕಳಿದ್ದರು ಸಹ ನಟಿ ನದಿಯಾ ಈಗಲೂ ಸುಂದರವಾಗಿ ಕಾಣುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಹ ನದಿಯಾ ಅವರು ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಕುಟುಂಬದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಬಿಡುವಿನ ವೇಳೆಯಲ್ಲಿ, ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗಿ ಎಂಜಾಯ್ ಮಾಡುತ್ತಾರೆ. ನದಿಯಾ ಅವರು ತಮ್ಮ ವೈಯಕ್ತಿಕ ಜೀವನದ ವಿಷಯಗಳನ್ನು ಹೆಚ್ಚು ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ಈಗಲೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ.

Get real time updates directly on you device, subscribe now.