ಏರ್ಪೋರ್ಟ್ ನಲ್ಲಿ ರಶ್ಮಿಕಾ ಮಂದಣ್ಣ ರವರಿಗೆ ಬಾರಿ ಮುಜುಗರ: ಸ್ಟೈಲಿಶ್ ಡ್ರೆಸ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾಗೆ ಬಾರಿ ಮುಜುಗರ. ಏನಾಯಿತು ಗೊತ್ತಾ ವಿಡಿಯೋ ನೋಡಿ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರಿಗಾಗಿ ನಿರ್ಮಾಪಕರು ಹಾಗೂ ನಿರ್ದೇಶಕರು ಕಾಯುತ್ತಿದ್ದಾರೆ. ಇವರ ಡೇಟ್ಸ್ ಸಿಗುವುದು ಈಗ ಬಹಳ ಕಷ್ಟವಾಗಿ ಹೋಗಿದೆ. ನ್ಯಾಷನಲ್ ಕ್ರಶ್ ಎಂದು ಖ್ಯಾತಿ ಪಡೆದಿರುವ ರಶ್ಮಿಕಾ ಮಂದಣ್ಣ ಅವರಿಗೆ ಸ್ಟಾರ್ ಹೀರೋಗಳ ಜೊತೆಗಿನ ಪ್ರಾಜೆಕ್ಟ್ ಗಳನ್ನೇ ಒಪ್ಪಿಕೊಳ್ಳುತ್ತಿದ್ದಾರೆ. ಗ್ಯಾಪ್ ಇಲ್ಲದೆ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಎರಡು ದಿನಗಳಿಗೆ ಒಂದು ಸಾರಿ ಮುಂಬೈ ಇಂದ ಹೈದರಾಬಾದ್ ಗೆ ಬರುವುದು, ಮತ್ತೆ ವಾಪಸ್ ಮುಂಬೈಗೆ ಹೋಗುವುದು ಹೀಗೆ ಪ್ರಯಾಣ ಮಾಡುತ್ತಿದ್ದಾರಂತೆ. ಇದರಿಂದಾಗಿ ಏರ್ ಪೋರ್ಟ್ ನಲ್ಲಿ ಅವರ ಕಷ್ಟ ಮಾಮೂಲಿಯಾಗಿಲ್ಲ ಎನ್ನಲಾಗುತ್ತಿದೆ.
ಕನ್ನಡ ಸಿನಿಮಾ ಕಿರಿಕ್ ಪಾರ್ಟಿ ಇಂದ ನಟನೆ ಶುರು ಮಾಡಿ, ಚಲೊ ಸಿನಿಮಾ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ ಬಹಳ ಕಡಿಮೆ ಸಮಯದಲ್ಲಿ ತೆಲುಗಿನಲ್ಲಿ ಸ್ಟಾರ್ ನಟಿ ಎನ್ನಿಸಿಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತರು. ವಿಜಯ್ ದೇವರಕೊಂಡ ಅವರೊಡನೆ ನಟಿಸಿದ ಗೀತಾ ಗೋವಿಂದಂ ಹಾಗೂ ಡಿಯರ್ ಕಾಮರೆಡ್ ಸಿನಿಮಾಗಳು ರಶ್ಮಿಕಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟವು. ಇತ್ತೀಚೆಗೆ ರಶ್ಮಿಕಾ ನಟಿಸಿದ ಪ್ಯಾನ್ ಇಂಡಿಯ ಸಿನಿಮಾ ಪುಷ್ಪ ಹಿಟ್ ಆಗಿರುವ ಕಾರಣ ರಶ್ಮಿಕಾ ಅವರ ಮೇಲಿರುವ ಕ್ರೇಜ್ ಜಾಸ್ತಿಯಾಗಿದೆ. ಪ್ರಸ್ತುತ ಪುಷ್ಪ2 ಸಿನಿಮಾ ಚಿತ್ರೀಕರಣಕ್ಕಾಗಿ ರೆಡಿ ಇರುವ ರಶ್ಮಿಕಾ, ಬಾಲಿವುಡ್ ಹಾಗೂ ತಮಿಳಿನಲ್ಲಿ ಸಹ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಅದರಿಂದಲೇ ಮುಂಬೈ, ಹೈದರಾಬಾದ್ ಎಂದು ಟ್ರಾವೆಲ್ ಮಾಡುವ ಹಾಗೆ ಆಗಿದೆ, ಶೀಘ್ರದಲ್ಲೇ ಅನಿಮಲ್ ಸಿನಿಮಾ ಚಿತ್ರೀಕರಣಕ್ಕೂ ಸೇರಿಕೊಳ್ಳಲಿದ್ದಾರೆ. ಈ ಸಿನಿಮಾದ ನಾಯಕನಾಗಿ ರಣಬೀರ್ ಕಪೂರ್ ಅವರು ನಟಿಸುತ್ತಿದ್ದು, ಅರ್ಜುನ್ ರೆಡ್ಡಿ ಸಿನಿಮಾ ನಿರ್ದೇಶಕ ಸಂದೀಪ್ ವಂಗ ನಿರ್ದೇಶನ ಮಾಡುತ್ತಿದ್ದಾರೆ. ಹೀಗೆ ರಶ್ಮಿಕಾ ಮಂದಣ್ಣ ಏರ್ ಪೋರ್ಟ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅಲ್ಲಿ ಫ್ಯಾನ್ಸ್ ಇಂದ ಅವರಿಗೆ ತೊಂದರೆ ಆಗುತ್ತಿದೆಯಂತೆ. ಫೋಟೋಗಾಗಿ ಹಿಂದೆ ಬರುತ್ತಿರುವ ಕಾರಣ ರಶ್ಮಿಕಾ ಅವರಿಗೆ ಇರುಸು ಮುರುಸು ಆಗುತ್ತಿದೆಯಂತೆ. ಇದರಿಂದಾಗಿ ತಮ್ಮ ದೇಹದ ಕೆಲವು ಭಾಗಗಳನ್ನು ಕವರ್ ಮಾಡಿಕೊಳ್ಳಲು ರಶ್ಮಿಕಾ ಅವರಿಗೆ ಮುಜುಗರ ಆಗುತ್ತಿದೆ ಎಂದು ನ್ಯಾಷನಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದು, ನೆಟ್ಟಿಗರು ಪಾಪ ರಶ್ಮಿಕಾ ಎಂದು ಕಮೆಂಟ್ಸ್ ಬರೆಯುತ್ತಿದ್ದಾರೆ.