ಕಾಂತಾರ ಸಿನೆಮಾದಲ್ಲಿ ಅಸಲಿಗೆ ಪುನೀತ್ ನಟನೆ ಮಾಡಬೇಕಿತ್ತು, ಆದರೆ ರಿಷಬ್ ಶೆಟ್ಟಿ ಆಯ್ಕೆ ಆಗಿದ್ದು ಹೇಗೆ ಗೊತ್ತೇ??
ಕನ್ನಡ ಚಿತ್ರರಂಗ ಕ್ವಾಲಿಟಿ ಕಂಟೆಂಟ್ ಕಥೆಗಳ ಸಿನಿಮಾಗಳನ್ನು ನೀಡುವ ಮೂಲಕ ಎತ್ತರಕ್ಕೆ ಏರುತ್ತಿದೆ. ಈಗಾಗಲೇ ಜೇಮ್ಸ್, ಕೆಜಿಎಫ್2, ಚಾರ್ಲಿ, ವಿಕ್ರಾಂತ್ ರೋಣ ಹೀಗೆ ಸದಭಿರುಚಿ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿ ಸಹ ನಮ್ಮ ಕನ್ನಡ ಸಿನಿಮಾಗಳಿಗೆ ಮೆಚ್ಚುಗೆ ಸಿಗುತ್ತಿದೆ. ಇದೇ ಸಾಲಿನಲ್ಲಿ ಈಗ ಕಾಂತಾರ ಸಿನಿಮಾ ಸಹ ಸಾಗುತ್ತಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ನಟಿಸಿದ್ದಾರೆ.
ಈಗಾಗಲೇ ಕಾಂತಾರ ಸಿನಿಮಾ ಟ್ರೇಲರ್ ಬಿಡುಗಡೆಯಾಗಿ ಸಿನಿಪ್ರಿಯರನ್ನು ಇಂಪ್ರೆಸ್ ಮಾಡಿದೆ, ಕರಾವಳಿ ಪ್ರದೇಶದ ಕಲ್ಚರ್ ಎಲ್ಲವೂ ಸಿನಿಪ್ರಿಯರಿಗೆ ಇಷ್ಟವಾಗಿದೆ. ಸೆಪ್ಟೆಂಬರ್ 30 ರಂದು ಕಾಂತಾರ ಸಿನಿಮಾ ತೆರೆಕಾಣುತ್ತಿದೆ. ಇದೀಗ ಈ ಸಿನಿಮಾ ಬಗ್ಗೆ ಯಾರಿಗೂ ಗೊತ್ತಿರದ ಒಂದ್ ಅಪ್ಡೇಟ್ ಸಿಕ್ಕಿದೆ, ಅದೇನೆಂದರೆ ಕಾಂತಾರ ಸಿನಿಮಾಗೆ ನಾಯಕನಾಗಬೇಕಿದ್ದವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು. ಅಪ್ಪು ಅವರು ಅಭಿನಯಿಸಬೇಕಿದ್ದ ಪಾತ್ರ ರಿಷಬ್ ಶೆಟ್ಟಿ ಅವರ ಪಾಲಾಯಿತು. ಅಪ್ಪು ಅವರ ಅಭಿಮಾನಿಗಳು ಈ ವಿಚಾರ ತಿಳಿದು ಬೇಸರಗೊಂಡಿದ್ದಾರೆ. ಅಪ್ಪು ಅವರನ್ನು ಇಂತಹ ಒಂದು ವಿಭಿನ್ನವಾದ ಪಾತ್ರದಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಮಿಸ್ ಆಯಿತು.
ಈ ವಿಚಾರವನ್ನು ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹಂಚಿಕೊಂಡಿದ್ದಾರೆ, ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಚಟುವಟಿಕೆ ನಡೆಸಿದ ಕಾರ್ತಿಕ್ ಗೌಡ ಅವರು ಈ ಮಾಹಿತಿ ನೀಡಿದ್ದಾರೆ, ಅಭಿಮಾನಿಯೊಬ್ಬರು ಕಾಂತಾರ ಸಿನಿಮಾದ ಒಂದು ಗ್ಲಿಂಪ್ಸ್ ಅನ್ನಾದರು ಅಪ್ಪು ಅವರು ನೋಡಿದ್ರ ಎಂದು ಪ್ರಶ್ನೆ ಕೇಳಿದ್ದರು, ಅದಕ್ಕೆ ಉತ್ತರಿಸಿದ ಕಾರ್ತಿಕ್ ಅವರು, “ಇದು ಯಾರಿಗೂ ಗೊತ್ತಿಲ್ಲ ವಿಷಯ, ಈ ಸಿನಿಮಾದ ನಾಯಕನಾಗಿ ಅಪ್ಪು ಅವರು ನಟಿಸಬೇಕಿತ್ತು, ಆದರೆ ಈ ಸಿನಿಮಾ ಪ್ರತ್ಯೇಕವಾದ ಕಾಲಮಾನದಲ್ಲಿ ಚಿತ್ರೀಕರಣ ಮಾಡಬೇಕಿತ್ತು, ಅಪ್ಪು ಅವರ ಡೇಟ್ಸ್ ಕ್ಲಾಶ್ ಆಗುತ್ತಿದ್ದ ಕಾರಣ, ರಿಷಬ್ ಶೆಟ್ಟಿ ಅವರೇ ನಟಿಸಲಿ ಎಂದು ಅಪ್ಪು ಅವರೇ ಸೂಚಿಸಿದರು.” ಎಂದಿದ್ದಾರೆ ಕಾರ್ತಿಕ್. ಈ ಮೂಲಕ ಅಭಿಮಾನಿಗಳಿಗೆ ಈ ವಿಷಯ ತಿಳಿದುಬಂದಿದೆ.