ನಿಮ್ಮ ಮನೆಯಲ್ಲಿ ಹಣದ ಮಳೆ ಸುರಿಯಬೇಕು ಎಂದರೆ ಈ ರೀತಿಯ ಗಿಡಗಳನ್ನು ಇಡಿ ಸಾಕು. ಹಣ ಬೇಡ ಬೇಡ ಸಾಕು ಅಂದ್ರು ಬರುತ್ತದೆ.
ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಸಹ ಕೆಲವೊಮ್ಮೆ ನಿಮ್ಮ ಮನೆಯಲ್ಲಿ ಹಣ ನಿಲ್ಲುವುದಿಲ್ಲ. ನಿಮಗೆ ಅರ್ಥವಾಗದ ರೀತಿಯಲ್ಲಿ ಹಣ ಖರ್ಚಾಗುತ್ತದೆ ಹೊರತು ಅದನ್ನು ಉಳಿಸಲು ನಿಮ್ಮಿಂದ ಸಾಧ್ಯ ಆಗುವುದಿಲ್ಲ. ಈ ಸಮಸ್ಯೆಗಳಿಂದ ಮುಕ್ತಿ ಒಅಡೆದು, ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿಯ ಕೃಪೆಯಿಂದ ಹಣ ಸದಾ ಇರಬೇಕು ಎಂದರೆ ನಿಮ್ಮ ಬಾಲ್ಕನಿಯಲ್ಲಿ ಈ ಗಿಡಗಳನ್ನು ನೆಟ್ಟರೆ ಸಾಲು, ನೀವು ಇಷ್ಟು ಹಣ ಸಾಕು ಇನ್ನು ಹೆಚ್ಚಿನ ಹಣ ಬೇಡ ಎಂದುಕೊಂಡರು ಸಹ ಹಣ ನಿಮ್ಮನ್ನು ಅರಸಿ ಬರುತ್ತದೆ. ನೀವು ನೆಡಬೇಕಾದ ಗಿಡಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
1.ಮನಿ ಪ್ಲಾಂಟ್ :- ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ನೆಡುವುದದಿಂದ ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಈ ಗಿಡವನ್ನು ಹಣ ಸಮೃದ್ಧಿ ಮಾಡುವ ಗಿಡ ಎಂದು ನಂಬಲಾಗುತ್ತದೆ. ಹಾಗಾಗಿ ನಿಮ್ಮ ಮನೆಯ ಬಾಲ್ಕನಿಯಲ್ಲಿ ಮನಿ ಪ್ಲಾಂಟ್ ನೆಡುವುದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಮನಿ ಪ್ಲಾಂಟ್ ಅನ್ನು ಉತ್ತರ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದು, ದಕ್ಷಿಣ ದಿಕ್ಕಿನಲ್ಲಿ ನೆಡಬಾರದು, ಈ ಮನಿ ಪ್ಲಾಂಟ್ ನ ಬಳ್ಳಿ ಕೆಳಗಿನಿಂದ ಮೇಲಕ್ಕೆ ಹೋಗಬೇಕು. 2.ತುಳಸಿ ಗಿಡ :- ಹಿಂದೂ ಧರ್ಮದ ಪ್ರಕಾರ ತುಳಸಿ ಪೂಜೆ ಮಾಡುವ ಗಿಡ ಆಗಿದೆ. ಲಕ್ಷ್ಮೀದೇವಿಯ ಸ್ವರೂಪ ಎಂದೆ ತುಳಸಿ ಗಿಡವನ್ನು ಕರೆಯಲಾಗುತ್ತದೆ. ಹಾಗಾಗಿ ತುಳಸಿ ಗಿಡವನ್ನು ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡುವ ಮನೆಯಲ್ಲಿ ಬಡತನ ಬರುವುದಿಲ್ಲ ಎಂದು ಹೇಳುತ್ತಾರೆ. ತುಳಸಿ ಗಿಡವನ್ನು ಮನೆಯ ಉತ್ತರ ದಿಕ್ಕು ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಮನೆಯ ಸಮೃದ್ಧಿ ಹೆಚ್ಚಾಗುತ್ತದೆ.
3.ನೆಬಾಜಿಯ ಗಿಡ :- ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈ ಗಿಡ ಎಷ್ಟು ಸುಂದರವಾಗಿದೆಯೋ ಅದೇ ರೀತಿ ಮನೆಗೆ ಹೊಸ ಮಾರ್ಗಗಳಿಂದ ಹಣ ಬರುವ ಹಾಗೆ ಮಾಡಲು ಸಹಾಯ ಮಾಡುತ್ತದೆ. ಈ ಗಿಡವನ್ನು ನೆಡುವ ಮನೆಯಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಆಗುತ್ತದೆ. 4.ಅರೇಕಾ ಪಾಮ್ ಟ್ರೀ :- ಇದನ್ನು ಕನ್ನಡದಲ್ಲಿ ತಾಳೆ ಮರ ಎಂದು ಕರೆಯುತ್ತದೆ. ನೋಡಲು ಬಹಳ ಸುಂದರವಾಗಿ ಕಾಣಿಸುವ ಈ ಮರ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ತಂದುಕೊಡುತ್ತದೆ. ಜೊತೆಗೆ ಮನೆಯವರ ಉತ್ತಮವಾದ ಆರೋಗ್ಯವನ್ನು ಸಹ ಚೆನ್ನಾಗಿರುವ ಹಾಗೆ ಮಾಡುತ್ತದೆ. ಮನೆಯಲ್ಲಿ ನೆಗಟಿವ್ ಎನರ್ಜಿಯನ್ನು ತೆಗೆದುಹಾಕಿ, ಪಾಸಿಟಿವ್ ಎನರ್ಜಿ ಬರುವ ಹಾಗೆ ಮಾಡುತ್ತದೆ. 5.ಕ್ರಾಸ್ಸುಲಾ ಗಿಡ :- ಈ ಗಿಡ ನಿಮ್ಮ ಮನೆಗೆ ಹಣವನ್ನು ಮ್ಯಾಗ್ನೆಟ್ ನ ರೀತಿಯಲ್ಲಿ ಆಕರ್ಷಿಸುತ್ತದೆ. ಈ ಗಿಡ ನೆಡುವುದದಿಂದ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕಡಿಮೆಯಾಗಿ ಹಣ ಬರುವುದು ಹೆಚ್ಚಾಗುತ್ತದೆ. ಶ್ರೀಮಂತರಾಗಬೇಕು ಎಂದು ನಿಮಗೆ ಆಸೆ ಇದ್ದರೆ ನಿಮ್ಮ ಮನೆಯಲ್ಲಿ ಕ್ರಾಸ್ಸುಲಾ ಗಿಡವನ್ನು ಬೆಳೆಸಿ.