ಸಿಗುವುದು ಕಷ್ಟ ಆದರೆ ಈ ನಾಲ್ಕು ಗುಣಗಳನ್ನು ಹೊಂದಿರುವ ಹುಡುಗಿ ಸಿಕ್ಕರೆ ಅವರಿಗಿಂತ ಅದೃಷ್ಟ ಪುರುಷ ಬೇರೆ ಯಾರು ಇರಲ್ಲ. ಯಾವ್ಯಾವ ಗುಣ ಗೊತ್ತೇ??

35

Get real time updates directly on you device, subscribe now.

ನಮ್ಮ ಹಿಂದೂ ಧರ್ಮದ ಬಹಳ ಮುಖ್ಯವಾದ ಗ್ರಂಥಗಳಲ್ಲಿ ಒಂದು ಗರುಡ ಪುರಾಣ. ಇದು ಭಗವಾನ್ ವಿಷ್ಣು ಮತ್ತು ಅವರ ವಾಹನ ಗರುಡನ ನಡುವೆ ನಡೆಯುವ ಸಂಭಾಷಣೆ ಆಗಿದೆ. ಗರುಡ ಪುರಾಣದಲ್ಲಿ ಹಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಮರಣಾನಂತರ ನಡೆಯುವ ವಿಚಾರಗಳ ಬಗ್ಗೆ, ಹಾಗೂ ಜೀವನ ಚೆನ್ನಾಗಿರುವ ಹಾಗೆ ಅನುಸರಿಸಲು ಕೆಲವು ನಿಯಮಗಳು, ವ್ರತ, ಪೂಜೆ ಪುನಸ್ಕಾರ ಇದೆಲ್ಲದರ ಬಗ್ಗೆಯೂ ಗರುಡ ಪುರಾಣದಲ್ಲಿ ವಿವರವಾಗಿ ಹೇಳಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಮನುಷ್ಯರು ಹೇಗೆ ಜೀವನ ಮಾಡಬೇಕು ಎನ್ನುವುದನ್ನು ಸಹ ಹೇಳಿದ್ದಾರೆ. ಹಾಗೆಯೇ ಗರುಡ ಪುರಾಣದಲ್ಲಿ ಹುಡುಗಿಯರ ಗುಣ ವಿಶೇಷತೆಗಳು ಹೇಗಿರಬೇಕು ಎಂದು ಹೇಳಲಾಗಿದ್ದು, ಹುಡುಗಿಯರಲ್ಲಿ ಕೆಲವು ವಿಶೇಷ ಗುಣಗಳು ಇರಬೇಕು, ಅಂತಹ ವಿಶೇಷ ಗುಣಗಳು ಇರುವ ಹುಡುಗಿಯರು ನಿಮ್ಮ ಜೀವನಕ್ಕೆ ಬಂದರೆ, ತಪ್ಪದೇ ಅವರನ್ನು ಮದುವೆಯಾಗಿ.

1.ಮನೆಕೆಲಸ ಚೆನ್ನಾಗಿ ಕಲಿತಿರಬೇಕು :- ಗರುಡ ಪುರಾಣದಲ್ಲಿ ಹೇಳಿರುವ ಪ್ರಕಾರ, ಮಹಿಳೆಯರು ಎಲ್ಲಾ ಕೆಲಸಗಳನ್ನು ಕಲಿತಿರಬೇಕು. ಮನೆಯಿಂದ ಹೊರಗೆ ಕೆಲಸ ಮಾಡುವುದು ಮಾತ್ರವಲ್ಲ, ಮನೆಯ ಕೆಲಸಗಳನ್ನು ಮಾಡಬೇಕು. ಸಮಯ ಯಾವಾಗಲೂ ಒಂದೇ ರೀತಿ ಇರುವುದಿಲ್ಲ, ಹಾಗಾಗಿ ಮನೆಯ ಕೆಲಸಗಳನ್ನು ಮಾಡಿ, ಕುಟುಂಬವನ್ನು ನೋಡಿಕೊಳ್ಳುವ ಸಾಮರ್ಥ್ಯ ಹೆಣ್ಣಿಗೆ ಇರಬೇಕು.
2.ಸಿಹಿಯಾದ ಮಾತುಗಳು :- ಎಲ್ಲರೂ ಸಹ ಆಡುವ ಮಾತು ಸಂಯಮದಿಂದ ಚೆನ್ನಾಗಿ ಇರಬೇಕು. ಮಾತು ಮಧುರವಾಗಿ ಇರಬೇಕು, ಹೆಣ್ಣಿನ ಮಾತು ಮಧುರವಾಗಿ ಇದ್ದರೆ ಮನೆಯಲ್ಲಿ ಅರ್ಧ ಸಮಸ್ಯೆ ಇರುವುದಿಲ್ಲ. ಹಾಗಾಗಿ ಹೆಣ್ಣು ಸಿಹಿಯಾಗಿ ಮಾತುಗಳನ್ನು ಆಡುವುದು ಒಳ್ಳೆಯದು.

3.ಧರ್ಮನಿಷ್ಠೆ ಪಾಲಿಸುವುದು :- ಧರ್ಮ ಪಾಲಿಸುವುದು ಬಹಳ ಮುಖ್ಯವಾದ ವಿಚಾರ. ಕಾಲ ಬದಲಾದ ಹಾಗೆ ಜೀವನ ಶೈಲಿ ಸಹ ಬದಲಾಗುತ್ತದೆ. ಜನರು ಮನೆಯ ಹೊರಗೆ ಸಮಾಜದ ಜೊತೆಗೆ ಸಹ ಬೆರೆಯಬೇಕಾಗುತ್ತದೆ. ಸಾಕಷ್ಟು ಸಮಯಗಳಲ್ಲಿ ಗಂಡ ಮತ್ತು ಕುಟುಂಬ ಹಾಗೂ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಬೆಂಬಲ ನೀಡಬೇಕು, ಇದು ಮಹಿಳೆಯರ ಧರ್ಮ ಎಂದು ನಂಬಲಾಗುತ್ತದೆ. ಈ ರೀತಿ ಪತ್ನಿ ಆದವಳು ಗಂಡನನ್ನು ಬೆಂಬಲಿಸಬೇಕು.
4.ಧರ್ಮದ ಅನುಸರಣೆ :- ಪ್ರತಿ ಮನೆಯಲ್ಲಿರುವ ಎಲ್ಲರೂ ಸಹ ಧರ್ಮ ಅನುಸರಣೆ ಮಾಡುವುದು ಬಹಳ ಮುಖ್ಯವಾದ ವಿಚಾರ ಆಗಿದೆ. ಅದರಲ್ಲೂ ಹೆಣ್ಣನ್ನು ಲಕ್ಷ್ಮಿಸ್ವರೂಪ ಎಂದು ಪರಿಗಣಿಸಲಾಗುತ್ತದೆ. ಹೆಣ್ಣು ಪ್ರತಿದಿನ ಸ್ನಾನ ಮಾಡಿ, ಮನೆಯಲ್ಲಿರುವ ಲಕ್ಷ್ಮೀದೇವಿಯನ್ನು ಪೂಜೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.

Get real time updates directly on you device, subscribe now.