ಮಹೇಶ್ ಬಾಬು ರವರ ಜೊತೇನೆ ಶಾಲೆಗೆ ಹೋಗಿ ಇಂದು ಸ್ಟಾರ್ ನಟರಾಗಿರುವ ಮೂವರು ಶಾಲಾ ಸ್ನೇಹಿತರು ಯಾರ್ಯಾರು ಗೊತ್ತೇ??

64

Get real time updates directly on you device, subscribe now.

ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಹೆಸರಿಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಮಹೇಶ್ ಬಾಬು ಅವರು ಚಿಕ್ಕ ವಯಸ್ಸಿನಲ್ಲೇ ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ನಟನೆ ಶುರು ಮಾಡಿದರು. ಇದರಿಂದ ಅವರಿಗೆ ಪ್ರಿನ್ಸ್ ಮಹೇಶ್ ಬಾಬು ಎಂದು ಹೆಸರು ಬಂದಿತು. ಮಹೇಶ್ ಬಾಬು ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ ರಾಜಕುಮಾರುಡು. ಈ ಸಿನಿಮಾ ಅಭಿನಯಕ್ಕೆ ಉತ್ತಮ ಹೊಸ ನಟ ಅವಾರ್ಡ್ ಪಡೆದುಕೊಂಡರು, 2003 ರಲ್ಲಿ ನಿಜಂ ಸಿನಿಮಾ ಅಭಿನಯಕ್ಕೆ ಮೊದಲ ನಂದಿ ಅವಾರ್ಡ್ ಪಡೆದುಕೊಂಡರು.

ಹೀಗೆ ಸಾಕಷ್ಟು ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ ಅವಾರ್ಡ್ ಗಳನ್ನು ಸ್ವಂತವಾಗಿಸಿಕೊಂಡಿದ್ದಾರೆ ಮಹೇಶ್ ಬಾಬು. ಅದರಲ್ಲೂ ಒಕ್ಕಡು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಅದಾದ ಬಳಿಕ ತೆರೆಕಂಡ ಕೆಲವು ಸಿನಿಮಾಗಳು ಆವರೇಜ್ ಎನ್ನಿಸಿಕೊಂಡರು ಸಹ, ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ ಪೋಕಿರಿ ಸಿನಿಮಾ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ತಮ್ಮದಾಗಿಸಿಕೊಂಡರು. ಇದೆಲ್ಲ ಒಂದು ವಿಚಾರ ಆದರೆ, ಮತ್ತೊಂದು ವಿಚಾರ ಏನೆಂದರೆ, ಮಹೇಶ್ ಬಾಬು ಅವರೊಡನೆ ಶಾಲೆಯಲ್ಲಿ ಓದಿದ ಸಹಪಾಠಿಗಳು ಸಹ ಚಿತ್ರರಂಗದಲ್ಲಿ ನಟಿಸುತ್ತಿದ್ದು, ಈಗಲೂ ಸಹ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ಯಾರು ಎಂದು ತಿಳಿದರೆ ನೀವು ಕೂಡ ಶಾಕ್ ಆಗುವುದು ಗ್ಯಾರಂಟಿ.

ಈ ವಿಚಾರವನ್ನು ಸ್ವತಃ ಮಹೇಶ್ ಬಾಬು ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು, ತಮಗೆ 25 ವರ್ಷವಾಗುವ ವರೆಗೂ ಚೆನ್ನೈ ನಲ್ಲಿ ಬೆಳೆದ ವಿಷಯ ತಿಳಿಸಿ, ಸೇಂಟ್ ಪೀಟರ್ ಲೋಯಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿಚಾರ ಶೇರ್ ಮಾಡಿಕೊಂಡಿದ್ದಾರೆ. ನಟರಾದ ಸೂರ್ಯ, ಕಾರ್ತಿ ಹಾಗೂ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಅವರು ತಮ್ಮ ಸ್ಕೂಲ್ ಮೇಟ್ಸ್ ಎಂದು ಹೇಳಿಕೊಂಡಿದ್ದಾರೆ. ಆದರೆ ಮಹೇಶ್ ಬಾಬು ಅವರು ಚಿಕ್ಕ ವಯಸ್ಸಿನಲ್ಲಿ ತಾವು ಸೂಪರ್ ಸ್ಟಾರ್ ಕೃಷ್ಣ ಅವರ ಮಗ ಎಂದು ಎಲ್ಲಿಯೂ ಹೇಳಿಕೊಂಡಿರಲಿಲ್ಲ ಎನ್ನುವ ವಿಚಾರ ಸಹ ತಿಳಿಸಿದ್ದಾರೆ. ಆ ರೀತಿ ಹೇಳಿಕೊಳ್ಳುವುದು ತಮ್ಮ ತಂದೆಗೂ ಇಷ್ಟವಿಲ್ಲ ಎಂದು ಹೇಳಿದರು. ಅದೇ ಸಂದರ್ಶನದಲ್ಲಿ ತಮಗೆ ರಾಜಕೀಯಕ್ಕಿಂತ ನಟನೆಯಲ್ಲಿ ಆಸಕ್ತಿ ಹಾಗೂ ನಟನೆ ಮಾತ್ರ ತಮಗೆ ಬರುತ್ತದೆ ಎಂದು ಹೇಳಿಕೊಂಡಿದ್ದರು.

Get real time updates directly on you device, subscribe now.