ಥೇಟ್ ಅಪ್ಪನ ರೀತಿ ಅಪ್ಪನ ಫೇಮಸ್ ಡೈಲಾಗ್ ಹೊಡೆದ ಉಪ್ಪಿ ಮಗ: ಹೇಗಿದ್ದು ಗೊತ್ತೇ ಡೈಲಾಗು. ನೀವೇ ವಿಡಿಯೋ ನೋಡಿ.
ರಿಯಲ್ ಸ್ಟಾರ್ ಉಪೇಂದ್ರ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಬಹಳ ಕಷ್ಟದಲ್ಲಿ ಬೆಳೆದು ಬಂದ ಉಪೇಂದ್ರ ಅವರು, ಚಿತ್ರರಂಗದಲ್ಲಿ ಸಾಧನೆ ಮಾಡಲೇಬೇಕು ಎಂದು ಬಂದವರು. ಉಪೇಂದ್ರ ಅವರು ಅಸಿಸ್ಟಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ, ನಂತರ ತರ್ಲೆ ನನ್ಮಗ ಸಿನಿಮಾ ಮೂಲಕ ನಿರ್ದೇಶಕನಾಗಿ, ಓಂ ಸಿನಿಮಾ ಮೂಲಕ ಸ್ಟಾರ್ ಸ್ಟೇಟಸ್ ಪಡೆದವರು. ಎ ಸಿನಿಮಾ ಮೂಲಕ ನಾಯಕನಾದರು. ನಟನೆಯಲ್ಲಿ ಸಹ ದೊಡ್ಡ ಮಟ್ಟದ ಹೆಸರು ಮಾಡಿದರು, ರಿಯಲ್ ಸ್ಟಾರ್ ಎಂದು ತಮ್ಮದೇ ಆದ ಸ್ಥಾನ ಪಡೆದರು.
ಉಪೇಂದ್ರ ಅವರು ಭಾರತ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು ಎಂದು ಹೆಸರು ಪಡೆದಿದ್ದಾರೆ. ಇಂದಿಗೂ ಉಪೇಂದ್ರ ಅವರು ನಿರ್ದೇಶನ ಮಾಡುವ ಸಿನಿಮಾಗಳು ಎಂದರೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಉಪೇಂದ್ರ ಅವರು ಪ್ರಸ್ತುತ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಪ್ರಜಾಕಿಯ ಎನ್ನುವ ಪಕ್ಷ ಶುರುಮಾಡಿ, ಹೊಸ ಕ್ರಾಂತಿ ಸೃಷ್ಟಿಸಲು ತಯಾರಾಗಿದ್ದಾರೆ. ಇವರ ಸಿನಿಮಾ ವಿಷಯಕ್ಕೆ ಬರುವುದಾದರೆ, ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ನಾಯಕನಾಗಿ ಉಪೇಂದ್ರ ಅವರು ಹೊಸ ಟ್ರೆಂಡ್ ಸೃಷ್ಟಿ ಮಾಡುತ್ತಿದ್ದಾರೆ. ಉಪೇಂದ್ರ ಅವರ ಹುಟ್ಟುಹಬ್ಬದ ವಿಶೇಷವಾಗಿ ಕಬ್ಜ ಟೀಸರ್ ಬಿಡುಗಡೆ ಆಯಿತು.

ಸೆಪ್ಟೆಂಬರ್ 18 ರಂದು ಉಪೇಂದ್ರ ಅವರ ಹುಟ್ಟುಹಬ್ಬ, ಅಂದು ಮಧ್ಯರಾತ್ರಿ ಇಂದಲೇ ಉಪೇಂದ್ರ ಅವರ ಮನೆಯಮುಂದೆ ಅಭಿಮಾನಿಗಳು ನೆರೆದಿದ್ದರು, ಉಪೇಂದ್ರ ಅವರಿಗೆ ಹ್ಯಾಂಡ್ ಶೇಕ್ ಮಾಡಿ ವಿಶ್ ಮಾಡಲು ಸಾವಿರಾರು ಅಭಿಮಾನಿಗಳು ಬಂದಿದ್ದರು. ಸೆಪ್ಟೆಂಬರ್ 18ರ ಬೆಳಗ್ಗೆ ಉಪೇಂದ್ರ ಅವರು ಮನೆಯಿಂದ ಹೊರಗೆ ಬರುವುದು ಸ್ವಲ್ಪ ತಡವಾದ ಸಮಯದಲ್ಲಿ ಉಪೇಂದ್ರ ಅವರ ಮಗ ಆಯುಷ್ ಹೊರಗೆ ಬಂದು ಅಭಿಮಾನಿಗಳ ಜೊತೆಗೆ ಮಾತನಾಡಿದ್ದಾರೆ. ಅಪ್ಪನ ಹಾಗೆ, ರಕ್ತಕಣ್ಣಿರು ಸಿನಿಮಾದ ಐ ಲೈಕ್ ಇಟ್ ಕಾಂತ ಡೈಲಾಗ್ ಹೊಡೆದು, ಅಪ್ಪ ಇನ್ನೇನು ಬರ್ತಾರೆ ಅಂತ ಹೇಳಿದ್ದಾರೆ. ಥೇಟ್ ಅಪ್ಪನ ಹಾಗೆ ಆಯುಷ್ ಡೈಲಾಗ್ ಹೊಡೆದಿರುವ ವಿಡಿಯೋ ಈಗ ವೈರಲ್ ಆಗಿದ್ದು, ನೀವು ಕೂಡ ತಪ್ಪದೇ ವಿಡಿಯೋ ನೋಡಿ.