ಉಪ್ಪಿ ಕೊನೆಯ ಗುರಿ ಸಿನಿಮಾ ಅಲ್ಲವೇ ಅಲ್ಲ, ಮತ್ತೇನು?? ಅಂದು ಉಪ್ಪಿ ತಟ್ಟೆ ಹಿಡಿದರೂ ಊಟ ಹಾಕದೆ ಅವಮಾನವಾಗಿತ್ತು. ಎಂದು ಗೊತ್ತೇ??
ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಅಭಿಮಾನಿಗಳ ಜೊತೆ ಉಪೇಂದ್ರ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿ ಇಂದಲೇ ಉಪೇಂದ್ರ ಅವರ ಮನೆಯ ಮುಂದೆ ಅಭಿಮಾನಿಗಳು ಹಾಜರಾಗಿ, ಉಪೇಂದ್ರ ಅವರಿಗೆ ಹ್ಯಾಂಡ್ ಶೇಕ್ ಮಾಡಿ, ವಿಶ್ ಮಾಡಿ ಸೆಲೆಬ್ರೇಟ್ ಮಾಡಿದರು. ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಕಬ್ಜ ಹಾಗೂ ಯುಐ ಸಿನಿಮಾ ತಂಡದಿಂದ ವಿಶೇಷವಾದ ಉಡುಗೊರೆ ಸಹ ಸಿಕ್ಕಿದೆ. ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಹಳೆಯ ಸಂದರ್ಶನಗಳ ತುಣುಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿತ್ತು. ಅವುಗಳಲ್ಲಿ ಕೆಲವು ವಿಡಿಯೋಗಳು ಈಗ ವೈರಲ್ ಆಗಿದೆ.
10 ವರ್ಷಗಳ ಹಿಂದೆ ಸೂಪರ್ ಸಿನಿಮಾ ಬಿಡುಗಡೆ ಸಮಯದಲ್ಲಿ ಉಪೇಂದ್ರ ಅವರು ಕೆಲವು ಮಾತುಗಳನ್ನಾಡಿದ್ದರು, “ನಿಮ್ಮ ಮುಂದೆ ಓಪನ್ ಆಗಿ ಹೇಳ್ತಿದ್ದೆನೆ, ಸಿನಿಮಾಗಳಲ್ಲಿ ನಾನು ವೆಲ್ ಸೆಟಲ್ಡ್, ಊಟ ತಿಂಡಿಗೆ ತೊಂದರೆ ಇಲ್ಲ, ಒಳ್ಳೆಯ ಜೀವನ ನಡೆಸುತ್ತಿದ್ದೇನೆ. ಆರಾಮಾಗಿ ಇರಬಹುದು. ತಿಂಗಳುಗಟ್ಟಲೆ ಕಷ್ಟಪಟ್ಟು ಸ್ಕ್ರಿಪ್ಟ್ ಮಾಡಿ, ಇಷ್ಟೆಲ್ಲಾ ಯಾಕೆ ಒದ್ದಾಡಬೇಕು ಅಂತ ಕೆಲವೊಮ್ಮೆ ಅನ್ಸುತ್ತೆ. ಆದರೆ ಅದಕ್ಕೆ ಒಂದು ಕಾರಣ ಇದೆ, ನನ್ನ ಅಂತಿಮ ಗುರಿ ಸಿನಿಮಾ ಅಲ್ಲ, ಸಿನಿಮಾ ಹೊರತಾಗು ಬೇರೆ ಇದೆ, ಅದಕ್ಕಾಗಿ ನಾನು ಸಿನಿಮಾವನ್ನು ನನ್ನ ದಾರಿಯನ್ನಾಗಿ ಮಾಡಿಕೊಂಡಿದ್ದೇನೆ. ಸಿನಿಮಾ ನನ್ನ ಗುರಿಯಾಗಿದ್ದರೆ ಇಷ್ಟು ಹೊತ್ತಿಗೆ ನಾನು ಎಷ್ಟೋ ಸಿನಿಮಾ ಮಾಡಬಹುದಿತ್ತು. ಒಂದು ಸಿನಿಮಾಗೆ 2 ವರ್ಷ ಕಾಯಬೇಕಾಗಿ ಇರಲಿಲ್ಲ. ಪ್ರತಿ ಸಿನಿಮಾದಲ್ಲು ಏನನ್ನೋ ಹೇಳಬೇಕು ಅಂತ ಬಯಸುತ್ತೀನಿ, ಏನನ್ನೋ ಹುಡುಕುತ್ತೀನಿ..” ಎಂದು ಹೇಳಿದ್ದರು ರಿಯಲ್ ಸ್ಟಾರ್. ಈ ಮಾತುಗಳನ್ನ ಕೇಳಿದರೆ, ಪ್ರಜಾಕಿಯದ ಬಗ್ಗೆ 10 ವರ್ಷಗಳ ಹಿಂದೆಯೇ ಉಪೇಂದ್ರ ಅವರು ಯೋಚನೆ ಮಾಡಿದ್ದರು ಎಂದು ಗೊತ್ತಾಗುತ್ತದೆ.
“ಇದರಿಂದ ಏನಾಗುತ್ತೆ ಎಂದು ನನಗೆ ಗೊತ್ತು. 50 ಸಾವಿರ ಜನ ಕಿರುಚುತ್ತೀರಾ, ಓಹ್ ಅಂತೀರಾ. ಅದಾದಮೇಲೆ ನಾನು ಉಪೇಂದ್ರ ನೆ, ಅದೇ ಪ್ಯಾಂಟ್ ಶರ್ಟ್ ಹಾಕೋಬೇಕು. ಬೇರೆ ಏನು ಮಾಡೋಕೆ ಆಗಲ್ಲ. ನನಗೆ ಈ ಗುಂಗು ಮತ್ತು ನಿಮ್ಮ ಪ್ರೀತಿ ಮುಖ್ಯ. ಇದಕ್ಕಾಗಿ ನಾನು ಏನಾದರು ಮಾಡಬೇಕು, ನಿಮ್ಮ ಕಣ್ಣಿಗೆ ಮಣ್ಣು ಎರಚುವುದು ಸುಲಭದ ಕೆಲಸ, ಆದರೆ ನಾನು ಆ ರೀತಿ ಮಾಡೋದಿಲ್ಲ. ನನ್ನ ಆತ್ಮಕ್ಕೆ ನಾನು ಕರೆಕ್ಟ್ ಆಗಿದ್ದೀನಿ. ಇಲ್ಲಿ ಎಷ್ಟು ಜನ ಬಡವರಿದ್ದೀರಾ.. ನಾನು ಕೂಡ ಬಡವ, ಒಂದು ಪ್ಯಾಂಟ್ ತಗೊಳ್ಳೋದಕ್ಕೂ ನನಗೆ ಗತಿ ಇರಲಿಲ್ಲ. ಊಟಕ್ಕೋಸ್ಕರ 5, 10 ರೂಪಾಯಿಗೆ ಕಷ್ಟಪಟ್ಟಿದ್ದೀನಿ. ಈಗ 5 ಕೋಟಿ ಕೊಡ್ತೀನಿ ಅಂದ್ರು ನಾನು ಸಿನಿಮಾಗೆ ಸೈನ್ ಹಾಕ್ತಾ ಇಲ್ಲ. ನನಗೆ ಜನರ ಪ್ರೀತಿ ಬೇಕು, ನಾನು ಕಷ್ಟಪಡುತ್ತಾ ಇರೋದು ಅದಕ್ಕಾಗಿ. ನಿಮಗೆಲ್ಲ ನಾನು ನೆನಪಲ್ಲಿ ಇರುತ್ತೇನೆ, ನೀವು ನನ್ನ ಮರೆತಿಲ್ಲ, ನಾನು ಹಣಕ್ಕಾಗಿ ಸಿನಿಮಾ ಮಾಡಲು ಶುರು ಮಾಡಿದರೆ ಆಗ ನೀವು ನನ್ನ ಮರೀತೀರಾ.” ಎಂದು ಹೇಳಿದ್ದಾರೆ..
ಮತ್ತೊಂದು ತೆಲುಗು ಇಂಟರ್ವ್ಯೂ ನಲ್ಲಿ ಮಾತನಾಡುವಾಗ, ಹಿಂದಿನ ಹಳೆಯ ವಿಚಾರವನ್ನು ನೆನಪು ಮಾಡಿಕೊಂಡಿದ್ದಾರೆ, ಉಪೇಂದ್ರ ಅವರು ಸಹನಿರ್ದೇಶಕನಾಗಿದ್ದಾಗ, ಪ್ರೊಡಕ್ಷನ್ ನಲ್ಲಿ ಊಟಕ್ಕೆ ತಟ್ಟೆ ಹಿಡಿದುಕೊಂಡು ಹೋದಾಗ, ಊಟ ಬಡಿಸುತ್ತಿದ್ದ ಊಟ ಇಲ್ಲ ಹೋಗೋ ಎಂದು ಹೇಳಿದ್ದರಂತೆ, ವರ್ಷಗಳ ಬಳಿಕ ಉಪೇಂದ್ರ ಅವರ ಸೆಟ್ ನಲ್ಲೇ ಆತ ಕೆಲಸ ಮಾಡುವ ಹಾಗೆ ಆದಾಗ, ಉಪೇಂದ್ರ ಅವರು ಆ ವ್ಯಕ್ತಿಗೆ ಮರಿಯಾದೆ ನೀಡಿದ್ದರು. ಈ ಘಟನೆ ಹೇಳಿ, ಅದು ಅವರ ತಪ್ಪಲ್ಲ ಅಂದು ನಾನು ಇದ್ದ ಪರಿಸ್ಥಿತಿ ಆ ರೀತಿ ಇತ್ತು ಎನ್ನುತ್ತಾರೆ ರಿಯಲ್ ಸ್ಟಾರ್. ಇನ್ನು ಅನಂತನ ಅವಾಂತರ ಸಿನಿಮಾದಲ್ಲಿ ಬೇಕೆಂದೇ ಉಪೇಂದ್ರ ಅವರ ಹೆಸರನ್ನು ಟೈಟಲ್ ಕಾರ್ಡ್ ನಲ್ಲಿ ಸಹಾಯಕ ನಿರ್ದೇಶಕರ ಹೆಸರಿನ ಜೊತೆಗೆ ಸೇರಿಸಿರಲಿಲ್ಲವಂತೆ, ಆಗ ಉಪೇಂದ್ರ ಅವರಿಗೆ ಬೇಸರವಾದರು ಸಹ, ತಮ್ಮ ಹೆಸರು ಯೂಸ್ ಲೆಸ್ ಎಂದುಕೊಂಡರಂತೆ. ಬಳಿಕ ನಿರ್ದೇಶಕರಿಗೆ ಗೊತ್ತಾಗಿ ಉಪೇಂದ್ರ ಅವರ ಹೆಸರಿಗೆ ವಿಶೇಷವಾಗಿ ಟೈಟಲ್ ಕಾರ್ಡ್ ಮಾಡಿಸಿದರಂತೆ.