ಇನ್ನು ಬಹಳ ಚಿಕ್ಕ ವಯಸ್ಸಿಗೆ ದುಡುಕಿ ಉಸಿರು ನಿಲ್ಲಿಸಿಕೊಂಡ ಕಿರುತೆರೆ ನಟಿ: ಬರೆದ ಡೆತ್ ನೋಟ್ ನಲ್ಲಿ ಏನಿತ್ತು ಗೊತ್ತೇ?? ಪ್ರೀತಿಸಿ ಕೈ ಕೊಟ್ಟವರು ಯಾರು ಗೊತ್ತೇ??

58

Get real time updates directly on you device, subscribe now.

ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದ ನಟಿ ದೀಪಾ ಇದ್ದಕ್ಕಿದ್ದ ಹಾಗೆ ಮೃತ ಸ್ಥಿತಿಯಲ್ಲಿ ತಮ್ಮ ಅಪಾರ್ಟ್ಮೆಂಟ್ ನಲ್ಲಿ ಪತ್ತೆಯಾಗಿದ್ದಾರೆ. ನಟಿ ದೀಪಾ ಈಗ ತಾನೇ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಶುರುವಾಗಿದ್ದರು. ತುಪ್ಪರಿವಾಲನ್ ಸಿನಿಮಾದಲ್ಲಿ ಒಂದು ಪಾತ್ರದಲ್ಲಿ ನಟಿಸಿದ್ದಾ ದೀಪಾ ಅವರು ಇನ್ನು ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಅವರ ಬಳಿ ಹಲವು ಸಿನಿಮಾ ಅವಕಾಶಗಳು ಸಹ ಇತ್ತು ಎನ್ನಲಾಗಿದ್ದು, ಹಾಗಿದ್ದರೂ ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆ ಶುರುವಾಗಿದೆ.

ದೀಪಾ ಅವರ ನಿಜವಾದ ಹೆಸರು ಪೌಲಿನ್ ಜೆಸ್ಸಿಕಾ, ಚಿತ್ರರಂಗದಲ್ಲಿ ದೀಪಾ ಎಂದು ಗುರುತಿಸಿಕೊಂಡಿದ್ದರು. ದೀಪಾ ಅವರಿಗೆ ಹಲವು ಸಾರಿ ಮನೆಯವರು ಕರೆ ಮಾಡಿದರು ಸಹ ಅವರು ತೆಗೆಯದೆ ಇದ್ದ ಕಾರಣ, ಅನುಮಾನ ಮೂಡಿ ಮನೆಗೆ ಬಂದು ನೋಡಿದಾಗ, ಮೃತ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾ ಅವರ ಮನೆಯವರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ತನಿಖೆ ನಡೆಸುತ್ತಿದ್ದು, ದೀಪಾ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಈ ರೀತಿ ಮಾಡಿಕೊಳ್ಳಲು ಕಾರಣ ಏನು ಎನ್ನುವ ಪ್ರಶ್ನೆಗೆ ಈಗಲೂ ಸಹ ಸರಿಯಾದ ಉತ್ತರ. ಕೇಳಿಬಂದಿರುವ ಮಾಹಿತಿ ಪ್ರಕಾರ ಪ್ರೀತಿ ಪ್ರೇಮದ ವಿಚಾರದಿಂದ ಆಗಿರುವ ನೋವಿನ ಕಾರಣ ದೀಪಾ ಅವರು ಹೀಗೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಹಾಗೆಯೇ ದೀಪಾ ಅವರು ಸೂಸೈಡ್ ನೋಟ್ ಸಹ ಬರೆದು ಇಟ್ಟಿದ್ದು, ಅದರಲ್ಲಿ ತಮ್ಮ ಸಾವಿಗೆ ಯಾರು ಕಾರಣ ಎಂದು ದೀಪಾ ಅವರು ತಿಳಿಸಲ್ಲ ಎಂದು ಮಾಹಿತಿ ಸಿಕ್ಕಿದೆ. ದೀಪಾ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳೇ ಸಿಗುತ್ತಿದ್ದವು ಹಾಗಾಗಿ ವೈಯಕ್ತಿಕ ಜೀವನದ ಕಾರಣದಿಂದಲೇ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳಿಂದ ದೀಪಾ ಅವರು ಚೆನ್ನೈ ಹೊರವಲಯದಲ್ಲಿ ಇರುವ ಅಪಾರ್ಟ್ಮೆಂಟ್ ನಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದ್ದು, ಸೆಪ್ಟೆಂಬರ್ 17ರ ಶನಿವಾರ ಈ ರೀತಿ ಪತ್ತೆಯಾಗಿದ್ದಾರೆ. ಒಂಟಿಯಾಗಿದ್ದ ನಟಿ ಖಿನ್ನತೆಗೆ ಒಳಗಾಗಿ ಈ ರೀತಿ ಆಗಿರಬಹುದು ಎನ್ನಲಾಗುತ್ತಿದೆ.

Get real time updates directly on you device, subscribe now.