ಕನ್ನಡಿಗರ ಹುಡುಗರ ನಿದ್ದೆ ಕದ್ದ ಚೆಲುವೆಯಿಂದ ಸರಿಗಮಪ ಹನುಮಂತನಿಗೆ ಬಂತು ಪ್ರಪೋಸಲ್: ಆ ಟಾಪ್ ನಟಿ ಯಾರು ಗೊತ್ತೇ??
ಸರಿಗಮಪ ಇಂದ ಖ್ಯಾತಿ ಪಡೆದ ಗ್ರಾಮೀಣ ಪ್ರತಿಭೆ ಹನುಮಂತ, ಇವರು ಸೋಷಿಯಲ್ ಮೀಡಿಯಾದಲ್ಲಿ ಬಹಳ ಸುದ್ದಿಯಾಗುತ್ತಾರೆ. ಅದರಲ್ಲೂ ಹನುಮಂತನ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತದೆ. ಹನುಮಂತನ ಮದುವೆ ನಡೆದೇ ಹೋಯಿತು ಎಂದು ಸಹ ಗಾಸಿಪ್ ಗಳು ಕೇಳಿಬಂದಿವೆ. ಆದರೆ ಹನುಮಂತ ತಾನಿನ್ನು ಮದುವೆ ಆಗಿಲ್ಲ ಎಂದಿದ್ದಾರೆ. ಇವರು ಮದುವೆ ಆಗುವ ಹುಡುಗಿ ಹೇಗಿರಬಹುದು, ಎಂದೆಲ್ಲಾ ಮಾತುಗಳು ಕೇಳಿಬರುತ್ತಿದ್ದು, ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಟಿ ನಿಷ್ವಿಕಾ ನಾಯ್ಡು ಹನುಮಂತ ಅವರಿಗೆ ಪ್ರೊಪೋಸ್ ಮಾಡಿದ್ದಾರೆ.
ಜೀಕನ್ನಡ ವಾಹಿನಿಯ ರಿಯಾಲಿಟಿ ಶೋಗೆ ನಿಷ್ವಿಕಾ ಗೆಸ್ಟ್ ಆಗಿ ಬಂದಿದ್ದರು, ಅಲ್ಲಿ ಹನುಮಂತ ಸಹ ಹಾಡಿದರು, ಆದರೆ ನಿರೂಪಕಿ ಶ್ವೇತಾ ಚೆಂಗಪ್ಪ ಅವರು ನಿಷ್ವಿಕಾ ಅವರನ್ನು ತೋರಿಸಿ, ಇಂತಹ ಸುಂದರವಾದ ಹುಡುಗಿ ಎದುರು ಬಂದರೆ ಏನು ಅನ್ನಿಸುತ್ತದೆ ಎಂದು ಕೇಳಿದರು, ಆಗ ನಿಷ್ವಿಕಾ ಅವರು ಹಾರ್ಟ್ ಸಿಂಬಲ್ ತೋರಿಸಿ ಪ್ರೊಪೋಸ್ ಮಾಡಿ, ನನಗಾಗಿ ಒಂದು ರೊಮ್ಯಾಂಟಿಕ್ ಹಾಡು ಹೇಳು ಎಂದು ಕೇಳಿದರು, ಆಗ ನಾಚಿಕೆಯಿಂದ ಹನುಮಂತ ಭಜಜೆ ಪದ ಹಾಡುತ್ತೇನೆ ಎಂದರು.. ಆಗ ನಿಷ್ವಿಕಾ ಅವರು ರೊಮ್ಯಾಂಟಿಕ್ ಆಗಿ ಮಾತನಾಡಲು ಬರುತ್ತಾ ಎಂದು ಕೇಳುತ್ತಾರೆ, ಆಗ ಹನುಮಂತ ಬರೋದಿಲ್ಲ ಎಂದು ಹೇಳಿದರು.
ಆಗ ನಿಷ್ವಿಕಾ ಅವರು ನಾನು ಹೇಳಿಕೊಡಲಾ ಎಂದು ಕೇಳಿದ್ದು, ಅದಕ್ಕೆ ಹನುಮಂತ, ಹೇಳಿಕೊಡಿ ಅಕ್ಕ ಎಂದು ಹೇಳುವ ಮೂಲಕ ರೊಮ್ಯಾಂಟಿಕ್ ಮೂಡ್ ಅನ್ನು ಕಾಮಿಡಿ ಮೂಡ್ ಮಾಡಿದ್ದಾರೆ. ಬಳಿಕ ಸಂಸಾರ ಅಂದುಕೊಂಡಷ್ಟು ಸುಲಭವಲ್ಲ ಎನ್ನುವ ಅರ್ಥ ಬರುವ ಭಜನೆ ಹಾಡನ್ನು ವೇದಿಕೆಯ ಮೇಲೆ ಹಾಡಿದ್ದು, ಅದನ್ನು ಕೇಳಿದ ನಿಷ್ವಿಕಾ ನಾಯ್ಡು ಅವರು ಕೂತಲ್ಲೇ ನಿದ್ದೆ ಹೋಗಿರುವ ರಿಯಾಕ್ಷನ್ ನೀಡಿದ್ದಾರೆ. ಇದೆಲ್ಲವೂ ಬಹಳ ತಮಾಷೆಯ ವಿಧಾನದಲ್ಲಿ ನಡೆದಿದೆ