ಖ್ಯಾತ ನಟಿ ಮಿಲ್ಕಿ ಬ್ಯೂಟಿ ತಮನ್ನಾ ರವರಿಗೆ ಬಾರಿ ಮುಜುಗರ; ನಟಿಯ ಮುಂದೆಯೇ ಬೌನ್ಸರ್ಸ್ ಮಾಡಿದ್ದೇನು ಗೊತ್ತೇ??
ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದು ಹೆಸರು ಮಾಡಿರುವವರು ನಟಿ ತಮನ್ನಾ. ಕನ್ನಡದಲ್ಲಿ ಕೆಜಿಎಫ್ ಸಿನಿಮಾದಲ್ಲಿ ಸ್ಪೆಶಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ತಮನ್ನಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಕಲಾವಿದರು ಎಂದರೆ ಅವರೊಡನೇ ಬೌನ್ಸರ್ ಗಳು ಇರುವುದನ್ನು ನೋಡಿರುತ್ತವೆ. ಸೆಲೆಬ್ರಿಟಿಗಳಿಗೆ ಯಾವುದೇ ತೊಂದರೆ ಆಗದೆ ಇರುವ ಹಾಗೆ ತಡೆಯಲು ಬೌನ್ಸರ್ ಗಳು ಅವರೊಡನೇ ಇರುತ್ತಾರೆ.
ಈ ಬೌನ್ಸರ್ ಗಳ ಜೀವನದ ಬಗ್ಗೆಯೇ ತಯಾರಾಗಿರುವ ನಟಿ ತಮನ್ನಾ ಅವರು ಬಬ್ಲಿ ಬೌನ್ಸರ್ ಎನ್ನುವ ಸಿನಿಮಾದಲ್ಲಿ ನಟಿ ತಮನ್ನಾ ಅಭಿನಯಿಸಿದ್ದು, ಈ ಸಿನಿಮಾ ಸೆಪ್ಟೆಂಬರ್ 23ರಂದು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾ ಪ್ರಚಾರಕ್ಕಾಗಿ ತಮನ್ನಾ ಅವರು ಹೈದರಾಬಾದ್ ಗೆ ಬಂದಿದ್ದರು. ಆಗ ಬೌನ್ಸರ್ ಗಳಿಂದಲೇ ತೊಂದರೆ ಆಗಿರುವ ಘಟನೆ ನಡೆದಿದೆ. ಮಾಧ್ಯಮದವರು ತಮನ್ನಾ ಅವರ ಫೋಟೋ ಕ್ಲಿಕ್ಕಿಸಲು ಪ್ರಯತ್ನ ಪಡುತ್ತಿದ್ದರು, ಇನ್ನು ಕೆಲವರು ತಮನ್ನಾ ಅವರ ವಿಡಿಯೋ ಬೈಟ್ಸ್ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದರು, ಆದರೆ ಬೌನ್ಸರ್ ಗಳು ಅದಕ್ಕೆ ಅವಕಾಶ ನೀಡಿಲ್ಲ.
ಬದಲಾಗಿ ಮಾಧ್ಯಮದವರನ್ನು ಕೆಟ್ಟ ಪದದಿಂದ ಬೈದಿರುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಬೌನ್ಸರ್ ಡಸ್ಟ್ ಬಿನ್ ತೆಗೆದು ಹೊಡೆಯಲು ಹೋಗಿ ಬೆದರಿಕೆ ಹಾಕಿರುವ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೌನ್ಸರ್ ಗಳಿಂದ ಆಗಿರುವ ಈ ತಪ್ಪು ನಟಿ ತಮನ್ನಾ ಅವರಿಗೆ ಮುಜುಗರ ಆಗುವ ಹಾಗೆ ಮಾಡಿದೆ. ಬೇರೆ ಜನರಿಂದ ಯಾವುದೇ ತೊಂದರೆ ಆಗಬಾರದು ಎಂದು ಬೌನ್ಸರ್ ಗಳು ಜೊತೆಗಿರುತ್ತಾರೆ, ಆದರೆ ಅವರಿಂದಲೇ ಹೀಗಾದರೆ ಹೇಗೆ ಎನ್ನುತ್ತಿದ್ದಾರೆ ನೆಟ್ಟಿಗರು.