ನಂಗೆ ಕನ್ನಡ ಬರುತ್ತೆ,ದೇವರ ಮಕ್ಕಳನ್ನು ನೋಡೋಕೆ ಶಕ್ತಿಧಾಮಕ್ಕೆ ಬಂದೆ. ದಿಡೀರ್ ಭೇಟಿ ಕೊಟ್ಟು ವಿಶಾಲ್ ಹೇಳಿದ್ದೇನು ಗೊತ್ತೆ?
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಲ್ಲವಾಗಿ 10 ತಿಂಗಳು ಸಮೀಪವಾಗುತ್ತಿದೆ. ಅಪ್ಪು ಅವರು ಇದ್ದಾಗ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದು ಅವರು ಹೋದ ಬಳಿಕ ತಿಳಿದುಬಂದಿತು. ಅನೇಕ ಜನರು ಅಪ್ಪು ಅವರು ಹೋದ ಬಳಿಕ ಬಂದು ಅಪ್ಪು ಅವರಿಂದ ತಮಗೆ ಏನೆಲ್ಲಾ ಸಹಾಯ ಆಗಿದೆ ಎಂದು ಹೇಳಿಕೊಂಡಿದ್ದರು. ಅಪ್ಪು ಅವರು ಮಾಡುತ್ತಿದ್ದ ಒಳ್ಳೆಯ ಕಾರ್ಯಗಳಲ್ಲಿ ಮುಖ್ಯವಾದ ಕೆಲಸಗಳಲ್ಲಿ ಒಂದು ಮೈಸೂರಿನ ಶಕ್ತಿಧಾಮದ ಎಲ್ಲಾ ಮಕ್ಕಳನ್ನು ಅಪ್ಪು ಅವರೇ ನೋಡಿಕೊಳ್ಳುತ್ತಿದ್ದರು. ಇದು ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಸಂಸ್ಥೆ ಆಗಿದೆ.
ಪಾರ್ವತಮ್ಮ ರಾಜ್ ಕುಮಾರ್ ಅವರು ಈ ಸಂಸ್ಥೆಯನ್ನು ಶುರು ಮಾಡಿದರು. ಅವರ ಮೃತರಾದ ಬಳಿಕ ಅಲ್ಲಿರುವ 1800 ಹೆಣ್ಣುಮಕ್ಕಳ ಜವಾಬ್ದಾರಿಯನ್ನು ಅಪ್ಪು ಅವರೇ ತೆಗೆದುಕೊಂಡಿದ್ದರು. ಅಪ್ಪು ಅವರು ಹೋದ ಸಮಯದಲ್ಲಿ ತಮಿಳಿನ ಖ್ಯಾತ ನಟ ವಿಶಾಲ್ ಅವರು ಅಪ್ಪು ಅವರು ನೋಡಿಕೊಳ್ಳುತ್ತಿದ್ದ ಮಕ್ಕಳನ್ನು ತಾವು ನೋಡಿಕೊಳ್ಳಲು ಅವಕಾಶ ಕೊಡಬೇಕು ಎಂದು ಹೇಳಿದ್ದರು. ಅದೇ ರೀತಿ ಈಗ ವಿಶಾಲ್ ಅವರು ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿ ಮಕ್ಕಳ ಜೊತೆಗೆ ಸಮಯ ಕಳೆದಿದ್ದಾರೆ. ಹಾಗೆಯೇ ಮಾಧ್ಯಮದ ಮುಂದೆ ಸಹ ಮಾತನಾಡಿದ್ದಾರೆ.
“ನನಗೆ ಕನ್ನಡ ಸ್ವಲ್ಪ ಬರುತ್ತೆ. ನಾನು ಶಕ್ತಿಧಾಮಕ್ಕೆ ಬಂದ ನಂತರ ನನ್ನಲ್ಲಿ ಮಾತುಗಳೇ ಇಲ್ಲ. ನಾನು ಪುನೀತ್ ಅಣ್ಣ ಗೆ ಹೇಳಿದ್ದೇ. ಶೂಟಿಂಗ್ ನಲ್ಲಿ ನನಗೆ ದೊಡ್ಡ ಗಾಯ ಆಗಿತ್ತು, 40 ದಿನಗಳು ಆಸ್ಪತ್ರೆಯಲ್ಲಿದ್ದೆ. ಈಗ ಈ ಮಕ್ಕಳನ್ನ ನೋಡಬೇಕು ಅಂತ ಬಂದೆ, ದೇವಸ್ಥಾನದಲ್ಲಿ ಒಂದು ದೇವರ ದರ್ಶನ ಸಿಗುತ್ತದೆ. ಆದರೆ ಇಲ್ಲಿ ಒಂದೇ ಜಾಗದಲ್ಲಿ ಸಾಕಷ್ಟು ದೇವರುಗಳಿದ್ದರು. ಅದನ್ನ ನೋಡಿ ತುಂಬಾ ಸಂತೋಷ ಆಯಿತು. ಮಕ್ಕಳನ್ನು ನೋಡಿ ನನಗೆ ಈ ಸಮಾಜಕ್ಕೆ ಇನ್ನು ಒಳ್ಳೆಯದನ್ನು ಮಾಡಬೇಕು ಅಂತ ಸ್ಪೂರ್ತಿ ಸಿಕ್ತು. ಅವರ ಜೊತೆ ಕೂತು, ಮಾತನಾಡಿ, ಫೋಟೋ ತಗೊಂಡು, ಡೈಲಾಗ್ ಹೇಳಿ, ಆಟ ಆಡಿದ್ದು ಎಲ್ಲವೂ ತುಂಬಾ ಸಂತೋಷವಾಗಿತ್ತು. ಪುನೀತ್ ಹಾಗೂ ಗೀತಮ್ಮ ಅವರಿಗೆ ಹ್ಯಾಟ್ಸಾಫ್.. ತುಂಬಾ ಜನರಿಗೆ ಇಂತಹ ಮನಸ್ಸು ಬರೋದಿಲ್ಲ. ನಾನು ಇಲ್ಲಿ ಸ್ವಯಂಸೇವಕನಾಗಿ ಇರುತ್ತೇನೆ, ರಾಜ್ ಕುಮಾರ್ ಅವರ ಫ್ಯಾಮಿಲಿ ನನ್ನನ್ನು ಸ್ವೀಕರಿಸಬೇಕು..” ಎಂದು ಹೇಳಿದ್ದಾರೆ ನಟ ವಿಶಾಲ್.