ಮದುವೆಯಾಗಿ 28 ವರ್ಷ ಆದರೂ ತನ್ನ ಗಂಡನಿಗೆ ಈ ಲವ್ ಯು ಎಂದು ಕೂಡ ಹೇಳಿಲ್ಲವಂತೆ ನಟಿ ಖುಷ್ಬೂ. ಯಾಕೆ ಅಂತೇ ಗೊತ್ತೇ??

37

Get real time updates directly on you device, subscribe now.

ನಟಿ ಖುಷ್ಬೂ ಯಾರಿಗೆ ತಾನೇ ಗೊತ್ತಿಲ್ಲ.. ದಕ್ಷಿಣ ಭಾರತದಿಂದ ಹಿಡಿದು ಬಾಲಿವುಡ್ ವರೆಗೂ 80 ಹಾಗೂ 90ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದವರು ನಟಿ ಖುಷ್ಬೂ. ಕನ್ನಡದಲ್ಲಿ ರಣಧೀರ ಸಿನಿಮಾ ಮೂಲಕ ಎಂಟ್ರಿ ಕೊಟ್ಟು, ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆಹಂಚಿಕೊಂಡಿದ್ದಾರೆ. ಈಗಲೂ ಸಹ ಖುಷ್ಬೂ ಅವರು ಚಿತ್ರರಂಗದಲ್ಲಿ ಬಹಳ ಆಕ್ಟಿವ್ ಆಗಿದ್ದಾರೆ.

ಪ್ರಸ್ತುತ ಇವರು ಜಬರ್ದಸ್ತ್ ಎನ್ನುವ ತೆಲುಗು ಕಾಮಿಡಿ ರಿಯಾಲಿಟಿ ಶೋಗೆ ಜಡ್ಜ್ ಆಗಿ ಬಂದಿದ್ದಾರೆ. ಖುಷ್ಬೂ ಅವರು ಹಾಗೂ ನಟಿ ಇಂದ್ರಜಾ ಈ ಶೋಗೆ ಜಡ್ಜ್ ಆಗಿದ್ದಾರೆ. ಈ ಶೋನಲ್ಲಿ ಕಾಮಿಡಿ ಪಂಚ್ ಗಳನ್ನು ನೀಡುತ್ತಾ ನಟಿ ಖುಷ್ಬೂ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದಾರೆ. ಈ ಶೋನಲ್ಲಿ ಕಾಮಿಡಿ ಸ್ಕಿಟ್ ಮಾಡಿದ ಸ್ಪರ್ಧಿಗಳು ಖುಷ್ಬೂ ಅವರ ಲವ್ ಸ್ಟೋರಿ ಬಗ್ಗೆ ಕೇಳಿದರು. ಖುಷ್ಬೂ ಅವರು ತಮಿಳಿನ ಖ್ಯಾತ ನಿರ್ದೇಶಕ ಸುಂದರ್ ಸಿ ಅವರೊಡನೆ ಮದುವೆಯಾಗಿದ್ದಾರೆ. ಈ ಜೋಡಿಗೆ ಇಬ್ಬರು ಹೆಣ್ಣುಮಕ್ಕಳು, ಆವಂತಿಕ ಹಾಗೂ ಆನಂದಿಕ. 22 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸುಂದರ್ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಮುರೈ ಮಾಮನ್ ಸಿನಿಮಾಗೆ ನಾಯಕಿಯಾಗಿದ್ದರು ಖುಷ್ಬೂ.

ಈ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಸುಂದರ್ ಅವರು ಖುಷ್ಬೂ ಅವರಿಗೆ ಮನಸೋತು ಪ್ರೋಪೋಸ್ ಮಾಡಿದರಂತೆ. ಖುಷ್ಬೂ ಅವರು ಒಪ್ಪಿ ಮದುವೆ ಮಾಡಿಕೊಂಡರು. ಆದರೆ ಆಗಿನಿಂದ ಈಗಿನವರೆಗೂ ಖುಷ್ಬೂ ಅವರು ಗಂಡನಿಗೆ ಐ ಲವ್ ಯೂ ಎಂದು ಹೇಳಿಲ್ಲವಂತೆ. ಈ ವಿಚಾರ ಕೇಳಿ ಆಶ್ಚರ್ಯಗೊಂಡ ಸ್ಪರ್ಧಿಗಳು, ಈಗ ಕರೆಮಾಡಿ ಹೇಳಿ ಎಂದು ಖುಷ್ಬೂ ಅವರನ್ನು ಕೇಳಿಕೊಂಡರು, ಅದಕ್ಕೆ ಒಪ್ಪಿದ ಖುಶ್ಬು ಅವರು ಗಂಡನಿಗೆ ಕರೆ ಮಾಡಿದ್ದಾರೆ, ಇಷ್ಟು ವಿಷಯ ಪ್ರೊಮೋನಲ್ಲಿ ಕಂಡುಬಂದಿದ್ದು, ಖುಷ್ಬೂ ಅವರ ಪತಿ ಫೋನ್ ರಿಸೀವ್ ಮಾಡಿದ್ರಾ ಎಂದು ಸಂಚಿಕೆಯಲ್ಲಿ ನೋಡಬೇಕಿದೆ. ಅಷ್ಟೇ ಅಲ್ಲದೆ, ಖುಷ್ಬೂ ಅವರ ಗಂಡನ ನಂಬರ್ ಅನ್ನು ಸ್ವೀಟ್ ಹಾರ್ಟ್ ಎಂದು ಸೇವ್ ಮಾಡಿದ್ದು, ಅದನ್ನು ನೋಡಿ ಸ್ಪರ್ಧಿಗಳು ಹಾಗೂ ವೀಕ್ಷಕರು ಓ ಎಂದು ಕಿರುಚಿದ್ದಾರೆ.

Get real time updates directly on you device, subscribe now.