ತೆಲುಗಿನ ಚಿತ್ರರಂಗದ ಮತ್ತೊಂದು ಮುಖವನ್ನು ಎಳೆಯೆಳೆಯಾಗಿ ಬಿಚ್ಚಿಟ್ಟ ಹೆಬ್ಬುಲಿ ನಟಿ. ತೆರೆ ಹಿಂದೆ ಏನಾಗುತ್ತದೆ ಗೊತ್ತೇ??
ನಟಿ ಅಮಲಾ ಪೌಲ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮಲಯಾಳಂ ಸಿನಿಮಾ ಮೂಲಕ ನಟನೆ ಶುರು ಮಾಡಿದ ಇವರು, ಮೈನಾ ಸಿನಿಮಾ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟರು, ಆ ಸಿನಿಮಾ ಸೂಪರ್ ಹಿಟ್ ಆಗಿ, ಅಮಲಾ ಅವರು ತಮಿಳಿನ ಸ್ಟಾರ್ ನಟಿಯಾಗಿ, ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡರು. ವಿಜಯ್, ಸೂರ್ಯ, ಧನುಷ್, ಆರ್ಯ ಹೀಗೆ ತಮಿಳಿನ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ಕನ್ನಡದಲ್ಲಿ ಸುದೀಪ್ ಅವರೊಡನೆ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದರು ಅಮಲಾ.
ಇನ್ನು ತೆಲುಗಿಗೆ ಬೆಜಾವಾಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು, ಬಳಿಕ ಇದ್ದರಮ್ಮಾಯಿಲತೋ, ನಾಯಕ್ ಹಾಗೂ ಜಿಂದಾ ಪೈ ಕಪಿರಾಜು ಸಿನಿಮಾಗಳಲ್ಲಿ ನಟಿಸಿದರು. ಆದರೆ ಇವರು ಹೆಚ್ಚು ದಿನಗಳ ಕಾಲ ತೆಲುಗು ಇಂಡಸ್ಟ್ರಿಯಲ್ಲಿ ಇರಲಿಲ್ಲ. ಸ್ಟಾರ್ ನಟಿಯಾಗಿ ತೆಲುಗಿನಲ್ಲಿ ನಟಿಸುವುದನ್ನು ಕಡಿಮೆ ಮಾಡಿದ್ದು ಏಕೆ ಎನ್ನುವ ಪ್ರಶ್ನೆ ಕೇಳಿ ಬಂದಿತ್ತು, ಅದಕ್ಕೆ ಇತ್ತೀಚಿನ ಸಂದರ್ಶನದಲ್ಲಿ ಅಮಲಾ ಪೌಲ್ ಅವರು ಉತ್ತರ ಕೊಟ್ಟಿದ್ದಾರೆ. ಅಮಲಾ ಅವರು ತೆಲುಗು ಇಂಡಸ್ಟ್ರಿಗೆ ಬಂದಾಗ ಇಲ್ಲಿ ಕೆಲವು ದೊಡ್ಡ ಕುಟುಂಬಗಳು ಚಿತ್ರರಂಗವನ್ನು ನಿಯಂತ್ರಣ ಮಾಡುತ್ತಿದೆ ಎಂದು ಅವರಿಗೆ ಅರ್ಥವಾಯಿತಂತೆ.
ತೆಲುಗಿನ ಬಹುತೇಕ ಸಿನಿಮಾಗಳಲ್ಲಿ ಇಬ್ಬರು ನಾಯಕಿಯರು ಇರುತ್ತಿದ್ದರು, ಅವರಿಬ್ಬರನ್ನು ಬಹಳ ಗ್ಲಾಮರಸ್ ಆಗಿ ತೋರಿಸಲಾಗುತ್ತಿತ್ತು, ನಾಯಕಿಯರನ್ನು ಹೆಚ್ಚಾಗಿ ಹಾಡುಗಳು ಮತ್ತು ಕಿಸ್ಸಿಂಗ್ ದೃಶ್ಯಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಆ ಸಮಯದಲ್ಲಿ ತೆಲುಗಿನಲ್ಲಿ ಹೆಚ್ಚಾಗಿ ಕಮರ್ಷಿಯಲ್ ಸಿನಿಮಾಗಳನ್ನು ಮಾತ್ರ ಮಾಡುತ್ತಿದ್ದ ಕಾರಣ ತಾನು ತೆಲುಗು ಸಿನಿಮಾ ಇಂದ ದೂರ ಉಳಿದಿದ್ದಾಗಿ ಹೇಳಿದ್ದಾರೆ ಅಮಲಾ ಪೌಲ್. ನಟಿ ನೀಡಿರುವ ಈ ಹೇಳಿಕೆ ಈಗ ಭಾರಿ ಚರ್ಚೆಯಾಗುತ್ತಿದೆ. ಕಳೆದ ವರ್ಷ ನೆಟ್ಫ್ಲಿಕ್ಸ್ ನ ಪಿಟ್ಟ ಕಧಲು ಎನ್ನುವ ವೆಬ್ ಸೀರೀಸ್ ಮೂಲಕ ತೆಲುಗಿಗೆ ರೀಎಂಟ್ರಿ ಕೊಟ್ಟಿದ್ದಾರೆ ಅಮಲಾ. ಮುಂದಿನ ದಿನಗಳಲ್ಲಿ ತೆಲುಗು ಸಿನಿಮಾ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.