ನೀವು ಪ್ರಭಾಸ್ ರವರನ್ನು ಮದುವೆಯಾಗಿ ಎಂದ ಅಭಿಮಾನಿಗೆ ಅನುಷ್ಕಾ ಕೊಟ್ಟರು ಸರಿಯಾದ ಉತ್ತರ. ಏನಂತೆ ಗೊತ್ತೇ??
ನಟಿ ಅನುಷ್ಕಾ ಶೆಟ್ಟಿ ಇಂದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎಂದು ಹೆಸರು ಪಡೆದುಕೊಂಡಿದ್ದಾರೆ. ಇವರು ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಒಬ್ಬರು.ಆ ಅನುಷ್ಕಾ ಶೆಟ್ಟಿ ಅವರು 2005ರಲ್ಲಿ ಸೂಪರ್ ಸಿನಿಮಾ ಮೂಲಕ ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟರು. ಅನುಷ್ಕಾ ಅವರು ಇದುವರೆಗೂ 47 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಸಿನಿಮಾ ತೆರೆಕಂಡು 3 ವರ್ಷ ಆಗಿದ್ದರು ಸಹ, ಅಭಿಮಾನಿಗಳು ಮಾತ್ರ ಇವರ ಮೇಲಿನ ಪ್ರೀತಿಯನ್ನು ಕಡಿಮೆ ಮಾಡಿಕೊಂಡಿಲ್ಲ.
ಈಗಲೂ ಅನುಷ್ಕಾ ಅವರ ಸಿನಿಮಾ ಬರಲಿ ಎಂದು ಕಾಯುತ್ತಿದ್ದಾರೆ. ಅರುಂಧತಿ ಸಿನಿಮಾ ಅನುಷ್ಕಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು, ಆದರೆ ಅನುಷ್ಕಾ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದ್ದು ಬಾಹುಬಲಿ ಸಿನಿಮಾ, ದೇವಸೇನ ಪಾತ್ರ ಅನುಷ್ಕಾ ಅವರಿಗೆ ಯಶಸ್ಸು ಕೀರ್ತಿ ಎಲ್ಲವನ್ನು ತಂದುಕೊಟ್ಟಿತು. ಅದೇ ರೀತಿ, ಅನುಷ್ಕಾ ಮತ್ತು ಪ್ರಭಾಸ್ ಅವರ ಜೋಡಿ ಸಹ ಬಹಳ ಫೇಮಸ್ ಆಯಿತು. ಅನುಷ್ಕಾ ಪ್ರಭಾಸ್ ಜೋಡಿ ನಿಜ ಜೀವನದಲ್ಲಿ ಸಹ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಇವರಿಬ್ಬರ ಅಭಿಮಾನಿಗಳ ಆಸೆ.
ಇದೇ ವಿಚಾರದ ಬಗ್ಗೆ ಗಾಸಿಪ್ ಗಳು ಸಹ ಹರಿದಾಡಿದ್ದವು. ಆದರೆ ಅನುಷ್ಕಾ ಮತ್ತು ಪ್ರಭಾಸ್ ಇಬ್ಬರು ಸಹ ಮದುವೆಯ ಗಾಸಿಪ್ ಗಳನ್ನು ತಳ್ಳಿಹಾಕುತ್ತಲೇ ಇದ್ದರು. ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಅನುಷ್ಕಾ ಶೆಟ್ಟಿ ಅವರಿಗೆ ಅಭಿಮಾನಿಯೊಬ್ಬರು ನಿಜ ಜೀವನದಲ್ಲಿ ಕೂಡ ನೀವಿಬ್ಬರೂ ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ, ಆಗ ಅನುಷ್ಕಾ ಶೆಟ್ಟಿ ಅವರು, “ನನ್ನ ವೈಯಕ್ತಿಕ ಜೀವನದ ಬಗ್ಗೆ ಯೋಚನೆ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್. ಬಾಹುಬಲಿ ಸಿನಿಮಾದ ಕೆಮಿಸ್ಟ್ರಿಯನ್ನು ಅಲ್ಲಿಗೆ ಬಿಟ್ಟು ಬಿಡಿ..” ಎಂದು ಹೇಳಿದ್ದಾರೆ. ಈ ಮೂಲಕ ಮದುವೆಯ ಗಾಸಿಪ್ ಗೆ ಫುಲ್ ಸ್ಟಾಪ್ ಹಾಕಿದ್ದಾರೆ ಅನುಷ್ಕಾ ಶೆಟ್ಟಿ.