ಮದುವೆಯಾದರು ತಗ್ಗೆದೆ ಲೇ ಎನ್ನುತ್ತಿರುವ ನಯನತಾರ: ತೆಗೆದುಕೊಂಡರು ಮತ್ತೊಂದು ಹೆಜ್ಜೆ: ಏನು ಗೊತ್ತೇ??
ವರ್ಷಗಳು ಕಳೆದಂತೆ ನಟಿ ನಯನತಾರ ಅವರಿಗೆ ಇರುವ ಕ್ರೇಜ್ ಹಾಗೂ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರ ಅವರು ಟಾಪ್ ನಟಿಯಾಗಿ ನಿಂತಿದ್ದಾರೆ. ಇವರ ಕ್ರೇಜ್ ಕಡಿಮೆ ಆಗುವುದೇ ಇಲ್ಲ ಎನ್ನುವ ಹಾಗಿದೆ. ನಯನತಾರ ಅವರ ಈ ಬೆಳವಣಿಗೆಗೆ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ತಯಾರಕರು ಎಲ್ಲರೂ ಸಹ ಕಾರಣಕರ್ತರಾಗಿದ್ದು ಅವರೆಲ್ಲರಿಗೂ ಸಹ ನಯನತಾರ ಅವರು ಕೃತಜ್ಞತರಾಗಿರಬೇಕು. ಆದರೆ ಆ ರೀತಿ ಇರದೇ ನಯನತಾರ ಅವರು ಬೇರೆ ರೀತಿಯಲ್ಲಿ ಬದಲಾಗಿ ಹೋದರು.
ಇತ್ತೀಚೆಗೆ ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾದ ನಟಿ ನಯನತಾರ, ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ, ಆದರೆ ಸಿನಿಮಾ ಪ್ರೊಮೋಷನ್ ಗಳಲ್ಲಿ ಈಕೆ ಪಾಲ್ಗೊಳ್ಳುವುದಿಲ್ಲ. ಇದು ಮೊದಲಿನಿಂದಲೂ ಆಕೆಗೆ ಇರುವ ಅಭ್ಯಾಸ, ಆದರೆ ಮದುವೆಯಾದ ಬಳಿಕ ನಯನತಾರ ಅವರು ಪೂರ್ತಿಯಾಗಿ ಕಮರ್ಷಿಯಲ್ ಆಗಿ ಬದಲಾಗಿದ್ದಾರೆ. ಇಷ್ಟು ದಿನಗಳು 3 ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದ ನಟಿ ನಯನತಾರ ಈಗ 7 ಕೋಟಿ ಸಂಭಾವನೆ ಸಂಭಾವನೆ ಪಡೆಯಲಿದ್ದಾರೆ. ಅಷ್ಟೇ ಅಲ್ಲದೆ, 1 ಕೋಟಿ ಹೆಚ್ಚಿಗೆ ನೀಡಿದರೆ, ಪ್ರೊಮೋಷನ್ ನಲ್ಲಿ ಸಹ ಪಾಲ್ಗೊಳ್ಳುವುದಾಗಿ ನಿರ್ಧಾರ ಮಾಡಿದ್ದಾರೆ.

ಇದರಿಂದ ನಯನತಾರ ಅವರ ಮೇಲೆ ಬೇರೆಯದೇ ಅಭಿಪ್ರಾಯ ಶುರುವಾಗಿದೆ, ನಿಮಗೆ ಹಣ ಬಿಟ್ಟು ಬೇರೆ ಯಾವುದು ಮುಖ್ಯ ಅಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬೇರೆ ನಟಿಯರು ಫ್ರೀಯಾಗಿ ಪ್ರೊಮೋಷನ್ ಮಾಡುತ್ತಿದ್ದಾರೆ, ನಿಮಗೆ ಹಣ ಕೊಡಬೇಕಾ ಎಂದು ನಿರ್ಮಾಪಕರು ಆಕ್ರೋಶಗೊಂಡಿದ್ದಾರಂತೆ. ಹಣ ಕೊಟ್ಟರೆ ಮಾತ್ರ ಪ್ರೊಮೋಷನ್ ನಲ್ಲಿ ಪಾಲ್ಗೊಳ್ಳುವುದಾಗಿ ಹೇಳುವ ನೀವು ಎಷ್ಟು ಸೆಲ್ಫಿಶ್ ಎಂದು ಅವರ ಅಭಿಮಾನಿಗಳು ಸಹ ಮಾತನಾಡಿಕೊಳ್ಳುತ್ತಿದ್ದಾರೆ. ನಯನತಾರ ಯಾಕೆ ಈ ರೀತಿ ಆಗಿಹೋದರು ಎಂದು ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.