ನಾಗಾರ್ಜುನ ಮೊದಲ ಹೆಂಡತಿ ಮಗ ನಾಗ ಚೈತನ್ಯ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ನಾಗಾರ್ಜುನ ಎರಡನೇ ಹೆಂಡತಿ ಅಮಲಾ. ಹೇಳಿದ್ದೇನು ಗೊತ್ತೇ??
ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಅಮಲಾ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿದ್ದ ಅಮಲಾ ಅವರು ನಾಗಾರ್ಜುನ ಅವರೊಡನೆ ಮದುವೆಯಾದ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಿದರು. ಕುಟುಂಬ ಹಾಗೂ ಬೇರೆ ಕೆಲಸಗಳಲ್ಲಿ ಬ್ಯುಸಿಯಾದ ಅಮಲಾ ಅವರು ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಹಲವು ವರ್ಷಗಳ ಗ್ಯಾಪ್ ಬಳಿಕ ಲೈಫ್ ಈಸ್ ಬ್ಯೂಟಿಫುಲ್ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು, ತಾಯಿ ಪಾತ್ರದಲ್ಲಿ ನಟಿಸಿದರು. ಆ ಸಿನಿಮಾ ಬಳಿಕ ಕೂಡ ಒಂದಷ್ಟು ವರ್ಷ ಗ್ಯಾಪ್ ತೆಗೆದುಕೊಂಡರು. ಇದೀಗ ಅಮಲಾ ಅವರು ಶರ್ವಾನಂದ್ ನಾಯಕನಾಗಿರುವ ಒಕೆ ಒಕ ಜೀವಿತಮ್ ಸಿನಿಮಾ ಮೂಲಕ ಮತ್ತೊಮ್ಮೆ ಬೆಳ್ಳಿತೆರೆಗೆ ಬಂದಿದ್ದಾರೆ..
ಈ ಸಿನಿಮಾದಲ್ಲಿ ಅಮಲಾ ಅವರ ಪಾತ್ರ ತುಂಬಾ ಚೆನ್ನಾಗಿದೆ ಎಂದು ಮಾತುಗಳು ಕೇಳಿಬರುತ್ತಿವೆ. ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ, ನಾಗಾರ್ಜುನ, ಅಮಲಾ, ಅಖಿಲ್, ಶರ್ವಾನಂದ್ ಎಲ್ಲರೂ ಜೊತೆಯಾಗಿ ಸಿನಿಮಾ ನೋಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಪತ್ನಿಯ ನಟನೆ ನೋಡಿ ನಾಗಾರ್ಜುನ ಅವರು ಭಾವುಕರಾಗಿ, ನಿರ್ದೇಶಕ ಹಾಗೂ ಶರ್ವಾನಂದ್ ಅವರಿಗೆ ಪ್ರಶಂಸೆ ನೀಡಿದರಂತೆ. ಒಕೆ ಒಕ ಜೀವಿತಮ್ ಸಿನಿಮಾ ಪ್ರೊಮೋಶನ್ ಅನ್ನು ನಟಿ ಅಮಲಾ, ಶರ್ವಾನಂದ್ ಹಾಗೂ ಅಖಿಲ್ ವಿಭಿನ್ನವಾಗಿ ಪ್ಲಾನ್ ಮಾಡಿ ಶುರುಮಾಡಿದರು. ಈ ಪ್ರೊಮೋಷನ್ ವಿಡಿಯೋ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.
ಕಿಚನ್ ನಲ್ಲಿ ಅಡುಗೆ ಮಾಡುತ್ತಾ, ಅಮಲಾ, ಶರ್ವಾನಂದ್ ಹಾಗೂ ಅಖಿಲ್ ಮೂವರ ನಡುವೆ ಮಾತುಕತೆ ನಡೆಯುತ್ತದೆ, ಆಗ ಅಮಲಾ ಅವರು ಯಾರಿಗೆ ಯಾವ ತಿಂಡಿ ಇಷ್ಟ ಎಂದು ಪ್ರಶ್ನೆ ಕೇಳುತ್ತಾರೆ. ಹಾಗೆ, ಚೈ ಅಣ್ಣನಿಗೆ ಏನಿಷ್ಟ ಎಂದು ಅಮಲಾ ಅವರು ಮಗ ಅಖಿಲ್ ರನ್ನು ಕೇಳುತ್ತಾರೆ, ಆಗ ಅಖಿಲ್ ಚೈ ಅಣ್ಣನಿಗೆ ಸ್ವೀಟ್ಸ್ ಅಂದ್ರೆ ತುಂಬಾ ಇಷ್ಟ ಎಂದು ಹೇಳುತ್ತಾರೆ, ಅಷ್ಟೇ ಅಲ್ಲದೆ ಚೈ ಅಣ್ಣ ಚಾಕೊಲೆಟ್ಸ್ ಮತ್ತು ಐಸ್ ಕ್ರೀಮ್ ಅನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ ಎಂದು ಹೇಳುತ್ತಾರೆ ಅಖಿಲ್. ಅಷ್ಯೆ ಅಲ್ಲದೆ, ರಾತ್ರಿ ಎಲ್ಲರೂ ಮಲಗಿದ ಬಳಿಕ ಫ್ರಿಡ್ಜ್ ನಲ್ಲಿ ಏನೇ ಸಿಕ್ಕರು ಸ್ವಲ್ಪ ತಿಂದು ಇಡುತ್ತಿದ್ದರು ಎಂದು ಹೇಳಿ, ತನಗೂ ಐಸ್ ಕ್ರೀಮ್ ಅಂದ್ರೆ ಇಷ್ಟ ಎಂದು ಹೇಳಿದ್ದಾರೆ ಅಖಿಲ್. ಆಗ ಶರ್ವಾನಂದ್ ಅವರು ಮಾತನಾಡಿ, ಇಡೀ ಫ್ಯಾಮಿಲಿ ಐಸ್ ಕ್ರೀಮ್ ತಿಂದೆ ಬದುಕುತ್ತಿರುವ ಹಾಗಿದೆ ಎಂದು ತಮಾಷೆ ಮಾಡಿದ್ದಾರೆ.