ಇದ್ದಕ್ಕಿದ್ದ ಹಾಗೆ ಲೀಲಾವತಿ ಅವರ ತೋಟದ ಮನೆಗೆ ಬಂದು ನಟ ದರ್ಶನ್ ಮಾಡಿದ್ದೇನು ಗೊತ್ತೇ?? ಭಾವುಕಾರಾದ ವಿನೋದ್ ಅಣ್ಣ. ಏನಾಗಿದೆ ಗೊತ್ತೇ??

80

Get real time updates directly on you device, subscribe now.

ಹಿರಿಯನಟಿ ಲೀಲಾವತಿ ಅವರು 50 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯನಟಿ. ಲೀಲಾವತಿ ಅವರು ನೂರಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಭಾಷೆಗಳಲ್ಲಿ ಸಹ ನಟಿಸಿದ್ದಾರೆ. ಲೀಲಾವತಿ ಅವರು ತಮ್ಮ ಮಗ ವಿನೋದ್ ರಾಜ್ ಅವರ ಜೊತೆ ಬೆಂಗಳೂರು ನಗರದಿಂದ ಹೊರಗೆ, ನಾಗಮಂಗಲದ ಬಳಿ ಒಂದು ಹಳ್ಳಿಯಲ್ಲಿ ತೋಟದ ಮನೆ ಮಾಡಿಕೊಂಡು ವಾಸವಾಗಿದ್ದಾರೆ. ಇವರು ಜೀವನ ಇಡೀ ಕಷ್ಟಪಟ್ಟುಕೊಂಡೆ ನಡೆದು ಬಂದಿದ್ದಾರೆ.

ಇದೀಗ ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮನೆಯಲ್ಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ನಟ ದರ್ಶನ್ ಅವರು ಲೀಲಾವತಿ ಅವರ ಮನೆಗೆ ಹೋಗಿ ಹಿರಿಯನಟಿಯ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಈ ಹಿಂದೆ ಸಂದರ್ಶನದಲ್ಲಿ ವಿನೋದ್ ರಾಜ್ ಅವರು ದರ್ಶನ್ ಅವರ ಬಗ್ಗೆ ಮಾತನಾಡಿ, ದರ್ಶನ್ ಅವರನ್ನು ನನ್ನ ತಾಯಿಗೆ ಕಂಪೇರ್ ಮಾಡುತ್ತೇನೆ, ನನ್ನ ತಾಯಿ ಹೇಗೆ ಯಾರ ಸಹಾಯವು ಇಲ್ಲದೆ ಕಷ್ಟಪಟ್ಟು ಆಸ್ತಿ ಸಂಪಾದನೆ ಮಾಡಿ, ಹೆಸರು ಮಾಡಿದರೊ ಅದೇ ರೀತಿ ದರ್ಶನ್ ಅವರು ಕೂಡ ಎಂದು ಹೇಳಿದ್ದರು..

ಇದೀಗ ದರ್ಶನ್ ಅವರು ಲೀಲಾವತಿ ಅವರ ಮನೆಯಲ್ಲಿ ಹೀಗಾಗಿದೆ, ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎಂದು ಗೊತ್ತಾದ ತಕ್ಷಣವೇ ಲೀಲಾವತಿ ಅವರ ಮನೆಗೆ ಬಂದಿರುವ ದರ್ಶನ್ ಅವರು, ಲೀಲಾವತಿ ಅವರ ಪಕ್ಕದಲ್ಲಿ ಕೂತು, ಅಮ್ಮ ನೀವು ಆರೋಗ್ಯದ ಕಡೆಗೆ ಗಮನ ಹರಿಸಿ, ಚೆನ್ನಾಗಿ ಊಟ ಮಾಡಿ, ಯಾವುದರ ಬಗ್ಗೆಯೂ ಯೋಚನೆ ಮಾಡಬೇಡಿ ಎಂದು ಧೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲದೆ, ನಿಮಗೆ ಏನೇ ಕಷ್ಟ ಬಂದರು, ಸಹಾಯ ಬೇಕಾದರೂ, ನನಗ ಒಂದು ಫೋನ್ ಮಾಡಿ ಎಂದು ಹೇಳಿದ್ದಾರೆ ಡಿಬಾಸ್. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Get real time updates directly on you device, subscribe now.