ಇದಪ್ಪ ಪವನ್ ಕಲ್ಯಾಣ್ ಹವಾ ಅಂದ್ರೆ; ಪವನ್ ಜೀವನದಲ್ಲಿ ದೊಡ್ಡ ಸುದ್ದಿಯೊಂದು ಹೊರಬಿತ್ತು: ಏನಾಗಿದೆ ಗೊತ್ತೆ??
ಟಾಲಿವುಡ್ ನಲ್ಲಿ ಈ ನಟನ ಸಿನಿಮಾಗೆಳಿಗೆ ಬೇರೆಯದೇ ರೇಂಜ್ ಇದೆ. ಇವರ ಸಿನಿಮಾ ಹೇಗೆ ಇರಲಿ, ಫ್ಲಾಪ್ ಎನ್ನಿಸಿಕೊಂಡರು ಸಹ ನಿರ್ಮಾಪಕರಿಗೆ ಮೋಸ ಆಗುವುದಿಲ್ಲ, ಯಾಕೆಂದರೆ ಇವರಿಗಿರುವ ಫ್ಯಾನ್ ಬೇಸ್ ಅಶ್ಟು ಸ್ಟ್ರಾಂಗ್ ಆಗಿದೆ. ಈ ನಟನ ಸಿನಿಮಾ ಹೇಗೆ ಇದ್ದರು ಥಿಯೇಟರ್ ಗೆ ಬಂದು ಸಿನಿಮಾ ನೋಡುವ ಫ್ಯಾನ್ಸ್ ಇದ್ದಾರೆ. ಇವರ ಸಿನಿಮಾಗೆ ಅಭಿಮಾನಿಗಳೇ ಪ್ರೊಮೋಷನ್ ಮಾಡ್ತಾರೆ. ಆ ನಟ ಮತ್ಯಾರು ಅಲ್ಲ, ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು. ಸಾಲು ಸಾಲು ಸಿನಿಮಾಗಳಲ್ಲಿ ಪವನ್ ಕಲ್ಯಾಣ್ ಅವರು ಈಗ ಬ್ಯುಸಿ ಆಗಿದ್ದಾರೆ.
ಆದರೆ ಹರಿಹರ ವೀರಮಲ್ಲು ಸಿನಿಮಾ ಮೇಲೆ ಜನರಿಗೆ ಭಾರಿ ನಿರೀಕ್ಷೆ ಇದೆ. ಕ್ರಿಶ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ, ಇದೊಂದು ಪೀರಿಯಾಡಿಕ್ ಸಿನಿಮಾ ಆಗಿದೆ. ಪವನ್ ಕಲ್ಯಾಣ್ ಅವರು ಮೊದಲ ಬಾರಿಗೆ ಈ ರೀತಿಯ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಇದೀಗ ಈ ಸಿನಿಮಾ ಬಗ್ಗೆ ಹೊಸ ವಿಚಾರ ಒಂದು ಹೊರಬಂದಿದೆ. ಈ ಸಿನಿಮಾ ಸುಮಾರು 150 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗುತ್ತಿದೆ. ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ.
ಆದರೆ ಬಿಡುಗಡೆಗಿಂತ ಮೊದಲೇ, ಸಿನಿಮಾ ಡಿಸ್ಟ್ರಿಬ್ಯುಶನ್, ಥಿಯೇಟರ್ ಹಕ್ಕುಗಳು, ಸ್ಯಾಟಿಲೈಟ್ ರೈಟ್ಸ್ ,ಅಡ್ವಾನ್ಸ್ ವಿಚಾರದಲ್ಲಿ ರೇಕಾರ್ಟ್ ಕ್ರಿಯೇಟ್ ಮಾಡಿದೆ. ಇದೆಲ್ಲದರಿಂದ ಬಂದಿರುವ ಹಣ 150 ಕೋಟಿ ದಾಟಿದೆ ಎನ್ನುವ ಮಾತು ಕೇಳಿಬರುತ್ತಿದೆ. ಸಿನಿಮಾ. ರಿಲೀಸ್ ಆಗುವುದಕ್ಕಿಂತ ಮೊದಲೇ ಇಂತಹ ಸಂಪಾದನೆ ಮಾಡಿರುವುದು ಮಾಮೂಲಿ ವಿಷಯ ಅಲ್ಲ. ಪವನ್ ಕಲ್ಯಾಣ್ ಅವರ ಕೆರಿಯರ್ ನಲ್ಲೇ ಇದು ಹೊಸ ದಾಖಲೆ ಎಂದು ಹೇಳಲಾಗುತ್ತಿದೆ. ಹಿಂದೆಂದಿಗಿಂತ ಹೆಚ್ಚಿನ ಬಜೆಟ್ ನಲ್ಲಿ ತಯಾರಾಗುತ್ತಿರುವ ಪವನ್ ಕಲ್ಯಾಣ್ ಅವರ ಸಿನಿಮಾ ಇದೇ ಎಂದು ಸಹ ಹೇಳಲಾಗುತ್ತಿದೆ. ಈ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.