ಯುವ ನಟರು ಈಕೆಯನ್ನು ಬೇಡ ಎನ್ನುತ್ತಿದ್ದರು, ಹಿರಿಯ ನಟರು ಮಾತ್ರ ರಾಕುಲ್ ಹಿಂದೇನೆ ಬಿದ್ದಿದ್ದಾರೆ. ಯಾಕೆ ಗೊತ್ತೇ?
ರಾಕುಲ್ ಪ್ರೀತ್ ಸಿಂಗ್ ಕೆಲ ವರ್ಷಗಳ ಹಿಂದೆ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡವರು, ಸಾಲು ಸಾಲು ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ಸ್ಟಾರ್ ಹೀರೋಯಿನ್ ಸ್ಟೇಟಸ್ ಪಡೆದುಕೊಂಡವರು. ಸೌತ್ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿರುವಾಗಲೇ ಬಾಲಿವುಡ್ ನಲ್ಲಿ ಒಳ್ಳೆಯ ಆಫರ್ ಬಂದ ಕಾರಣದಿಂದ ಅಲ್ಲಿಗೆ ಜಂಪ್ ಆದರು ರಾಕುಲ್. ಈಗ ಬಾಲಿವುಡ್ ನಲ್ಲಿಯೇ ಇವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಈ ನಟಿಗೆ ಸಿಗುತ್ತಿದೆ. ಅಲ್ಲಿ ಸಿನಿಮಾ ಆಫರ್ ಗಳು ಚೆನ್ನಾಗಿಯೇ ಬರುತ್ತಿದೆ.
ಯಾವುದೇ ಸಿನಿಮಾ ಇಂಡಸ್ಟ್ರಿಯಲ್ಲಿ ಆದರು ಬೆಳೆಯಬೇಕು ಎಂದರೆ ಯಾರದ್ದಾದರು ಸಪೋರ್ಟ್ ಇರಲೇಬೇಕು ಎನ್ನುತ್ತಾರೆ. ಅದೇ ರೀತಿ ರಾಕುಲ್ ಅವರಿಗೆ ಬಾಲಿವುಡ್ ನಲ್ಲಿ ಹಿರಿಯನಟ ಒಬ್ಬರ ಸಾಥ್ ಇದೆ ಎಂದು ಹೇಳಲಾಗುತ್ತಿದೆ. ಅವರಿಂದಲೇ ರಾಕುಲ್ ಅವರಿಗೆ ಹೆಚ್ಚಿನ ಅವಕಾಶಗಳು ಬರುತ್ತಿದೆ ಎನ್ನಲಾಗಿದ್ದು, ಆದರೆ ಜೊತೆಗೆ ಆ ಹೀರೋ ಕೂಡ ರಾಕುಲ್ ಅವರನ್ನು ಬಿಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅವರ ಸಿನಿಮಾದಲ್ಲಿ ನಟಿಸಲು ಸಹ ರಾಕುಲ್ ಅವರಿಗೆ ಅವಕಾಶ ನೀಡಲಾಗುತ್ತಿದೆ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬಂದ ಮೊದಲ ಸಿನಿಮಾ ದೇ ದೇ ಪ್ಯಾರ್ ದೇ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಗಿತ್ತು.
ಆ ನಂಬಿಕೆಯಿಂದ ತಮ್ಮ ಪ್ರತಿ ಸಿನಿಮಾದಲ್ಲೂ ರಾಕುಲ್ ಅವರೇ ನಾಯಕಿಯಾಗಬೇಕು ಎಂದು ಆ ನಟ ಹೇಳುತ್ತಿದ್ದಾರಂತೆ. ಆ ನಟ ನಿರ್ದೇಶನ ಮಾಡಿದ ರನ್ ವೇ 34 ಸಿನಿಮಾದಲ್ಲೂ ರಾಕುಲ್ ಪ್ರೀತ್ ಸಿಂಗ್ ನಟಿಸಿದ್ದರು. ಅವರ ಮುಂದಿನ ಸಿನಿಮಾದಲ್ಲೂ ರಾಕುಲ್ ಅವರಿಗೆ ಚಾನ್ಸ್ ಕೊಡುತ್ತಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಈ ರೀತಿಯಾಗಿ, ಆಕೆ ಬೇರೆ ನಾಯಕರೊಡನೆ ಸಿನಿಮಾ ಮಾಡದ ಹಾಗೆ ಮಾಡಿದ್ದಾರೆ ಆ ಸೀನಿಯರ್ ನಟ. ರಾಕುಲ್ ಅವರನ್ನು ಬಿಡದ ಹಾಗೆ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದಾರೆ ಎನ್ನಲಾಗಿದೆ, ರಾಕುಲ್ ಅವರಿಗೂ ಬೇಕಾಗಿರುವುದು ಅವಕಾಶಗಳೇ ಆಗಿರುವುದರಿಂದ ಎಲ್ಲಿಂದ ಬಂದರೆ ಏನು ಎಂದು, ಅವರ ಜೊತೆಯಲ್ಲೇ ಸಿನಿಮಾ ಮಾಡಲು ಓಕೆ ಹೇಳಿದ್ದಾರಂತೆ ರಾಕುಲ್. ಈ ಜೋಡಿ ಇನ್ನೆಷ್ಟು ಸಿನಿಮಾ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.