ಸಾಮಾಜಿಕ ಜಾಲತಾಣವನ್ನು ಶೇಕ್ ಮಾಡಿ ಸಮಂತಾ: ಎರಡನೇ ಮದುವೆಗೆ ಬಗ್ಗೆ ಹರಿದಾಡುತ್ತಿರುವ ಸುದ್ದಿಯೇನು ಗೊತ್ತೇ?? ಗಂಡು ಯಾರಂತೆ ಗೊತ್ತೇ??
ವಿಚ್ಛೇದನ ಪಡೆದ ಬಳಿಕ ನಟಿ ಸಮಂತಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಸಮಂತಾ ಅವರ ಎರಡನೇ ಮದುವೆ ಬಗ್ಗೆ ಜೋರಾಗಿಯೇ ಗಾಸಿಪ್ ಗಳು ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಸಮಂತಾ ಅವರು ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಹಾಗೆಯೇ ಸಮಂತಾ ಅವರ ಆರೋಗ್ಯ ಕೂಡ ಸರಿಯಿಲ್ಲ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಸಮಂತಾ ಅವರು ಈಗ ಸೈಲೆಂಟ್ ಆಗಿದ್ದರು ಸಹ, ಅವರ ಬಗೆಗಿನ ಸುದ್ದಿಗಳು ಜೋರಾಗಿವೆ., ಟಾಲಿವುಡ್ ನ ಕೆಲವು ವೆಬ್ಸೈಟ್ ಗಳು ಈ ವಿಷಯಗಳ ಬಗ್ಗೆ ವರದಿ ಮಾಡಿವೆ.
ಸಮಂತಾ ಅವರು ಈಗ ಹೈದರಾಬಾದ್ ನಲ್ಲಿ ಒಂದು ಐಷಾರಾಮಿ ವಿಲ್ಲಾ ಖರೀದಿ ಮಾಡಿದ್ದು, ಅದರ ಇಂಟೀರಿಯರ್ ಕೆಲಸಗಳು ನಡೆಯುತ್ತಿದೆ, ಈ ನಡುವೆ ಸಮಂತಾ ಅವರು ಬಾಲಿವುಡ್ ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ, ಸಮಂತಾ ಅವರ ಎರಡನೇ ಮದುವೆ ಗಾಸಿಪ್ ಸಹ ಕೇಳಿಬರುತ್ತಿದ್ದು, ಬಾಲಿವುಡ್ ನಟನ ಜೊತೆಗೆ ಎರಡನೇ ಮದುವೆ ಆಗುತ್ತಾರೆ ಎಂದು ವರದಿಯಾಗಿದೆ, ವೆಬ್ ಸೀರೀಸ್ ನಲ್ಲಿ ನಟಿಸುವಾಗ ನಟನ ಜೊತೆಗೆ ಸಮಂತಾ ಕ್ಲೋಸ್ ಆಗಿದ್ದಾರಂತೆ, ಹೈದರಾಬಾದ್ ನಲ್ಲಿ ಸಮಂತಾ ವಿಲ್ಲಾ ಖರೀದಿ ಮಾಡಿದ್ದು, ಆ ನಟ ಹೈದರಾಬಾದ್ ಗೆ ಬಂದಾಗ ಸಮಂತಾ ಅವರ ವಿಲ್ಲಾದಲ್ಲೇ ಉಳಿದುಕೊಳ್ಳುತ್ತಾರೆ ಎನ್ನಲಾಗುತ್ತಿದೆ.
ಅಷ್ಟಕ್ಕೂ ಈ ಸುದ್ದಿಯನ್ನು ಹಬ್ಬಿಸಿದ್ದು ಒಬ್ಬ ಯುವನಿರ್ದೇಶಕ ಎಂದು ಹೇಳಲಾಗುತ್ತಿದೆ, ಸಮಂತಾ ಅವರ ವಿಲ್ಲಾದಲ್ಲಿ ಆ ಬಾಲಿವುಡ್ ನಟ ಕೆಲವು ದಿನಗಳಿಂದ ಉಳಿದುಕೊಂಡಿದ್ದು, ಆ ಯುವನಿರ್ದೇಶಕನ ಕಣ್ಣಿಗೆ ಬಿದ್ದಿದ್ದಾರಂತೆ, ಆತನೇ ಈ ಸುದ್ದಿಯನ್ನು ಹಬ್ಬಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಸಮಂತಾ ಅವರು ತಮ್ಮ ಬಗ್ಗೆ ಈ ರೀತಿ ಹಬ್ಬುತ್ತಿರುವ ರೂಮರ್ ಗಳಿಂದ ಬೇಸತ್ತು ಹೋಗಿದ್ದು, ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವ ಯೂಟ್ಯೂಬ್ ಚಾನೆಲ್ ಗಳು ಹಾಗೂ ವೆಬ್ಸೈಟ್ ಗಳ ಮೇಲೆ ದೂರು ನೀಡಲಿದ್ದಾರೆ ಎನ್ನುವ ಸುದ್ದಿಗಳು ಸಹ ಕೇಳಿಬರುತ್ತಿವೆ.