ಪ್ರೇರಣಾರವರಿಗೆ ಆಶೀರ್ವಾದ ಮಾಡಿದ ಅರ್ಜುನ್ ಸರ್ಜಾ ಹಾಗೂ ತಾರಾ: ಸುಂದರವಾದ ವಿಡಿಯೋ ಹೇಗಿದೆ ಗೊತ್ತೆ? ನೀವೇ ನೋಡಿ??
ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿಯಾಗಿರುವ ನಟ ಧ್ರುವ ಸರ್ಜಾ. ಸರ್ಜಾ ಕುಟುಂಬದ ಕುಡಿ ಆದರು ಸೋದರಮಾವ ಅರ್ಜುನ್ ಸರ್ಜಾ ಅವರ ಸಹಾಯ ಪಡೆಯದೆ ತಮ್ಮ ಪ್ರತಿಭೆ ಇಂದ ಸ್ಯಾಂಡಲ್ ವುಡ್ ನಲ್ಲಿ ನಟನೆಗೆ ಅವಕಾಶ ಪಡೆದು ಹೀರೋ ಆದ ಸೆಲ್ಫ್ ಮೇಡ್ ಸ್ಟಾರ್ ಧ್ರುವ. ಧ್ರುವ ನಟಿಸಿರುವುದು ನಾಲ್ಕೇ ಸಿನಿಮಾ ಆದರೂ ಕರ್ನಾಟಕದಲ್ಲಿ ಬಹುದೊಡ್ಡ ಅಭಿಮಾನಿ ಬಳಗ ಗಳಿಸಿದ್ದಾರೆ. ತಂದೆ ತಾಯಿ ಕುಟುಂಬ ಅಂದ್ರೆ ಧ್ರುವಗೆ ಬಹಳ ಪ್ರೀತಿ. ಬಿಡುವಿನ ಸಮಯವನ್ನು ಹೆಚ್ಚಾಗಿ ಕುಟುಂಬದ ಜೊತೆಗೆ ಕಳೆಯುತ್ತಾರೆ.
ಇತ್ತೀಚೆಗೆ ನಟ ಧ್ರುವ ಸರ್ಜಾ ಅವರು ವೈಯಕ್ತಿಕ ಜೀವನದಲ್ಲಿ ಬಹಳ ಸಂತೋಷದ ವಿಷಯ ಒಂದನ್ನು ಶೇರ್ ಮಾಡಿಕೊಂಡರು, ಧ್ರುವ ಹಾಗೂ ಅವರ ಪತ್ನಿ ಪ್ರೇರಣ ಶಂಕರ್ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂತೋಷದ ವಿಚಾರವನ್ನು ಅಭಿಮಾನಿಗಳ ಜೊತೆಗೆ ಶೇರ್ ಮಾಡಿಕೊಂಡರು. ಪ್ರೇರಣ ಶಂಕರ್ ಅವರು ಗರ್ಭಿಣಿ ಆಗಿರುವ ವಿಚಾರವನ್ನು ಧ್ರುವ ಸರ್ಜಾ ಅವರು ವಿಡಿಯೋ ಮೂಲಕ ಶೇರ್ ಮಾಡಿ, ಎಲ್ಲರ ಆಶೀರ್ವಾದ ಕೋರಿದರು. ಈ ಸಂತೋಷದ ಸುದ್ದಿ ಕೇಳಿ ಅಭಿಮಾನಿಗಳು ಬಹಳ ಸಂತೋಷಪಟ್ಟಿದ್ದಾರೆ. ಎಲ್ಲರೂ ಜ್ಯೂನಿಯರ್ ಧ್ರುವ ಬರಲಿ ಎಂದು ವಿಶ್ ಮಾಡತ್ತಿದ್ದಾರೆ, ಇದೀಗ ಧ್ರುವ ಸರ್ಜಾ ಅವರು ಪತ್ನಿಯ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.
ಪ್ರೇರಣಾ ಶಂಕರ್ ಅವರ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ನಡೆದಿದ್ದು, ಕುಟುಂಬದವರು ಹಾಗೂ ಸ್ನೇಹಿತರು ಬಂದು ಶುಭಹಾರೈಸಿದ್ದಾರೆ. ಇವರ ಸೀಮಂತ ಶಾಸ್ತ್ರಕ್ಕೆ ನಟ ಅರ್ಜುನ್ ಸರ್ಜ ಅವರು ಬಂದು ಶುಭಹಾರೈಸಿ ಆಶೀರ್ವಾದ ಮಾಡಿದ್ದಾರೆ, ಹಾಗೆಯೇ ನಟಿ ತಾರಾ ಅವರು ಸಹ ಬಂದು, ಆಶೀರ್ವಾದ ಮಾಡಿ ದೊಡ್ಡ ಗಿಫ್ಟ್ ಒಂದನ್ನು ನೀಡಿದ್ದಾರೆ. ಅರ್ಜುನ್ ಸರ್ಜಾ ಅವರು ಹಾಗೂ ತಾರಾ ಅವರು ಪ್ರೇರಣಾ ಹಾಗೂ ಧ್ರುವ ಸರ್ಜಾ ಅವರಿಗೆ ಆಶೀರ್ವಾದ ಮಾಡುತ್ತಿರುವ ಈ ಸುಂದರವಾದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ನೀವು ಸಹ ಒಮ್ಮೆ ಈ ವಿಡಿಯೋ ನೋಡಿ..