ವಿಜಯ್ ರಾಘವೇಂದ್ರ ರವರ ಹೊಸ ಚಿತ್ರಕ್ಕೆ ಆಯ್ಕೆಯಾದ ಮಲಯಾಳಂ ಸುಂದರಿ ಯಾರು ಗೊತ್ತೇ?? ಕನ್ನಡಿಗರು ಮತ್ತೊಮ್ಮೆ ಫಿದಾ.
ಚಂದನವನದಲ್ಲಿ ಚಿನ್ನಾರಿಮುತ್ತ ಎಂದೇ ಹೆಸರು ಮಾಡಿರುವವರು ನಟ ವಿಜಯ್ ರಾಘವೇಂದ್ರ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 20 ವರ್ಷ ಆಗುತ್ತಿದೆ, ಉತ್ತಮವಾದ ನಟನೆ ಹಾಗೂ ಕ್ಯೂಟ್ ಲುಕ್ಸ್ ಇಂದ ವಿಜಯ್ ರಾಘವೇಂದ್ರ ಅವರು ಚಾಕೊಲೇಟ್ ಹೀರೋ ಇಮೇಜ್ ಗಳಿಸಿದ್ದರು. ಆದರೆ ಕಳೆದ ವರ್ಷ ಬಿಡುಗಡೆಯಾದ, ಸೀತಾರಾಮ್ ಬಿನೋಯ್ ಕೇಸ್ ನಂ.18 ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದ ಮೂಲಕ, ಹೊಸ ಇಮೇಜ್ ಪಡೆದುಕೊಂಡರು. ಈ ಸಿನಿಮಾಗೆ ಒಳ್ಳೆಯ ಅಭಿಪ್ರಾಯಗಳು ಕೇಳಿಬಂದವು. ಓಟಿಟಿಯಲ್ಲಿ ಬಿಡುಗಡೆಯಾದ ಬಳಿಕ, ಚಿತ್ರ ವಿಮರ್ಶಕರು ಹಾಗೂ ಸಿನಿಪ್ರಿಯರಿಂದಲು ಹೆಸರು ಪಡೆಯಿತು.
ಸೀತಾರಾಮ್ ಬಿನೋಯ್ ಸಿನಿಮಾ ಯಶಸ್ಸಿನ ನಂತರ ಇದೀಗ ಸೀತಾರಾಮ್ ಬಿನೋಯ್ ಸಿನಿಮಾ ನಿರ್ದೇಶನ ಮಾಡಿದ ದೇವಿ ಪ್ರಕಾಶ್ ಶೆಟ್ಟಿ ಹಾಗೂ ವಿಜಯ್ ರಾಘವೇಂದ್ರ ಅವರು ಮತ್ತೊಂದು ಸಿನಿಮಾಗೆ ಜೊತೆಯಾಗುತ್ತಿದ್ದಾರೆ. ಈ ಹೊಸ ಸಿನಿಮಾ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಕುತೂಹಲ ಸೃಷ್ಟಿಸಿದೆ. ಸಿನಿಮಾಗೆ ಕೇಸ್ ಆಫ್ ಕೊಂಡಾಣ ಎಂದು ಹೆಸರಿಡಲಾಗಿದೆ. ಇದು ಕೂಡ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ. ಇನ್ನು ಈ ಸಿನಿಮಾಗೆ ವಿಜಯ್ ರಾಘವೇಂದ್ರ ಅವರಿಗೆ ಜೊತೆಯಾಗಿ ಭಾವನಾ ಮೆನನ್ ನಾಯಕಿಯಾಗಿ ನಟಿಸಲಿದ್ದಾರೆ. ಚೌಕ ಸಿನಿಮಾ ನಂತರ ಈ ಜೋಡಿ ಮತ್ತೊಮ್ಮೆ ಜೊತೆಯಾಗಿ ಕಾಣಿಸಿಕೊಳ್ಳಲಿದೆ.

ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಭಾವನಾ ಮೆನನ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು, ಇದೀಗ ಕೇಸ್ ಆಫ್ ಕೊಂಡಾಣ ಸಿನಿಮಾದಲ್ಲಿ ಸಹ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾವನಾ ಅವರು ಮಲಯಾಳಂ ಬೆಡಗಿ ಆದರೂ ಸಹ ಅವರಿಗೆ ಕನ್ನಡದಲ್ಲಿ ಒಳ್ಳೆಯ ಹೆಸರಿದೆ, ಈ ಸಿನಿಮಾಗೆ ಭಾವನಾ ಅವರು ಆಯ್ಕೆಯಾಗಿರುವುದರಿಂದ ಕನ್ನಡ ಅಭಿಮಾನಿಗಳಿಗೂ ಬಹಳ ಸಂತೋಷವಾಗಿದೆ. ಸಿನಿಮಾದ ಪೋಸ್ಟರ್ ಅನ್ನು ವಿಜಯ್ ರಾಘವೇಂದ್ರ ಅವರು ಶೇರ್ ಮಾಡಿದ್ದು, ಈ ರಾತ್ರಿ ತುಂಬಾ ಶಾಂತವಾಗಿರುತ್ತದೆ ಹಾಗೂ ಕರಾಳವಾಗಿರುತ್ತದೆ..”ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ಮೂಲಕ ಈ ಕಥೆ ರಾತ್ರಿಯಲ್ಲಿ ನಡೆಯುತ್ತದೆ ಎಂದು ಅರ್ಥವಾಗುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಈಗ ಭಾರಿ ನಿರೀಕ್ಷೆ ಮೂಡಿಸಿದೆ.